400 ಥಿಯೇಟರ್‌ಗಳಲ್ಲಿ ಅಭಿಷೇಕ್ ಅಂಬರೀಶ್ ಅಭಿನಯದ 'ಬ್ಯಾಡ್ ಮ್ಯಾನರ್ಸ್' ಅದ್ದೂರಿ ರಿಲೀಸ್
ಜೂನಿಯರ್ ರೆಬಲ್ ಸ್ಟಾರ್ ಅಭಿಷೇಕ್ ಅಂಬರೀಶ್ ಅಭಿನಯದ ಮತ್ತು ದುನಿಯಾ ಸೂರಿ ನಿರ್ದೇಶನದ ಬಹು ನಿರೀಕ್ಷಿತ ಸಿನಿಮಾ 'ಬ್ಯಾಡ್ ಮ್ಯಾನರ್ಸ್' ತೆರೆಗೆ ಬರಲು ಸಿದ್ಧವಾಗಿದೆ. ಸಿನಿಮಾ ಯಾವಾಗ ಬಿಡುಗಡೆಯಾಗುತ್ತದೆ ಎಂಬ ಅಭಿಮಾನಿಗಳ ಪ್ರಶ್ನೆಗೆ ಕೊನೆಗೂ ಚಿತ್ರತಂಡ ಅಧಿಕೃತವಾಗಿ ಮಾಹಿತಿ ನೀಡಿದೆ.
ಹಲವು ದಿನಗಳಿಂದ ಸಿನಿಮಾ ಬಿಡುಗಡೆಯ ದಿನಾಂಕದ ಕುರಿತು ಹಲವು ವದಂತಿಗಳಿದ್ದವು, ಅವುಗಳಿಗೆಲ್ಲಾ 'ಬ್ಯಾಡ್ ಮ್ಯಾನರ್ಸ್' ಚಿತ್ರತಂಡದಿಂದ ಸ್ಪಷ್ಟತೆ ಸಿಕ್ಕಿದೆ. ನವೆಂಬರ್ 24 ರಂದು ಚಿತ್ರಮಂದಿರಗಳಲ್ಲಿ ಬರಲಿದೆ ಎಂದು ಗುರುವಾರ ಚಿತ್ರತಂಡದಿಂದ ಅಧಿಕೃತ ಘೋಷಣೆ ಮಾಡಲಾಗಿದೆ. ಇದು ಅಭಿಮಾನಿಗಳಲ್ಲಿ ಖುಷಿಗೆ ಕಾರಣವಾಗಿದೆ.

ನವೆಂಬರ್ 24 ಕ್ಕೆ ಬ್ಯಾಡ್ ಮ್ಯಾನರ್ಸ್ ಬಿಡುಗಡೆ
ಈ ಹಿಂದೆ ದುನಿಯಾ, ಜಾಕಿ, ಅಣ್ಣಾ ಬಾಂಡ್, ಮತ್ತು ಟಗರು ಮುಂತಾದ ಸೂಪರ್ ಹಿಟ್ ಸಿನಿಮಾಗಳನ್ನು ನೀಡಿದ ಪ್ರಸಿದ್ಧ ಚಲನಚಿತ್ರ ನಿರ್ದೇಶಕ ಸೂರಿ ನಿರ್ದೇಶನದ ಈ ಸಿನಿಮಾ ಹೆಚ್ಚು ಭರವಸೆ ಮೂಡಿಸಿದೆ. ಇನ್ನು, ಜೂನಿಯರ್ ರೆಬಲ್ ಸ್ಟಾರ್ ಎಂದು ಹೆಸರು ಪಡೆದಿರುವ ನಟ ಅಭಿಷೇಕ್ ಅಂಬರೀಷ್ ಅವರ ಅಮರ್ ಬಳಿಕ ಎರಡನೇ ಸಿನಿಮಾ ಇದಾಗಿದ್ದು, ಅವರ ಬಗ್ಗೆಯೂ ಭಾರೀ ನಿರೀಕ್ಷೆಯಿದೆ.
ಬ್ಯಾಡ್ ಮ್ಯಾನರ್ಸ್ ಸಿನಿಮಾದ ಲುಕ್, ಹಾಡುಗಳ ಮೂಲಕ ಅಭಿಷೇಕ್ ಅಂಬರೀಶ್ ಹೊಸ ಭರವಸೆ ಮೂಡಿಸಿದ್ದಾರೆ. ಮೊದಲ ಸಿನಿಮಾ 'ಅಮರ್' ಇಮೇಜ್‌ನಿಂದ ಹೊರ ಬಂದು ಅಬ್ಬರಿಸಿರುವ ಅವರು, ಈ ಆಕ್ಷನ್ ಸಿನಿಮಾದಲ್ಲಿ ಹೇಗೆ ಕಾಣಿಸಿಕೊಳ್ಳಲಿದ್ದಾರೆ ಎಂಬುದನ್ನು ನೋಡಲು ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ.
ಬ್ಯಾಡ್ ಮ್ಯಾನರ್ಸ್ ಸಿನಿಮಾದಲ್ಲಿ ಪೊಲಿಸ್ ಅಧಿಕಾರಿಯಾದ ಅಭಿಷೇಕ್ ಅಂಬರೀಶ್
ಅಭಿಷೇಕ್ ಅಂಬರೀಶ್ ಬ್ಯಾಡ್ ಮ್ಯಾನರ್ಸ್ ಮೂಲಕ ಪೊಲೀಸ್ ಅಧಿಕಾರಿಯಾಗಿ ತೆರೆ ಮೇಲೆ ಕಾಣಿಸಿಕೊಳ್ಳಲಿದ್ದಾ. ಸಕತ್ ಆಕ್ಷನ್ ಎಂಟರ್‌ಟೈನರ್ ಅಗಿರುವ ಸಿನಿಮಾದಲ್ಲಿ ಸೂರಿ ನಿರ್ದೇಶನ ಅಬ್ಬರ ಮೂಡಿಸಲಿದ್ದಾರೆ ಎಂಬುದು ಅಂಬರೀಷ್ ಮತ್ತು ಅಭಿಷೇಕ್ ಅಂಬರೀಶ್ ಫ್ಯಾನ್ಸ್ ವಿಶ್ವಾಸ. ಈ ಚಿತ್ರದಲ್ಲಿ ನಾಯಕಿಯಾಗಿ ರಚಿತಾ ರಾಮ್ ಮತ್ತು ಪ್ರಿಯಾಂಕಾ ಕುಮಾರ್ ನಟಿಸಿದ್ದಾರೆ.

ಬ್ಯಾಡ್ ಮ್ಯಾನರ್ಸ್ ಸಿನಿಮಾಗೆ ಸ್ಟುಡಿಯೋ 18 ಬ್ಯಾನರ್ ಅಡಿಯಲ್ಲಿ ಕೆ ಎಂ ಸುಧೀರ್ ಬಂಡವಾಳ ಹೂಡಿದ್ದಾರೆ. ಚರಣ್ ರಾಜ್ ಸಂಗೀತ ಸಂಯೋಜಿಸಿದ್ದು, ಈಗಾಗಲೇ ಚಿತ್ರದ ಹಾಡುಗಳು ಪ್ರೇಕ್ಷಕರ ಗಮನ ಸೆಳೆದಿವೆ.
400 ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಅದ್ಧೂರಿ ಬಿಡುಗಡೆ
ಜಯಣ್ಣ ಸಿನಿಮಾ ವಿತರಣೆಯನ್ನು ನೋಡಿಕೊಳ್ಳುತ್ತಿದ್ದು, ನಿರ್ಮಾಪಕರು ಕರ್ನಾಟಕದಾದ್ಯಂತ 400 ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಅದ್ಧೂರಿಯಾಗಿ ಬಿಡುಗಡೆ ಮಾಡಲು ಯೋಜಿಸುತ್ತಿದ್ದಾರೆ. ಬ್ಯಾಡ್ ಮ್ಯಾನರ್ಸ್ ಸಿನಿಮಾ ಈಗಾಗಲೇ ಉತ್ತಮ ಪ್ರೀ-ರಿಲೀಸ್ ಡೀಲ್‌ಗಳನ್ನು ಪಡೆದುಕೊಂಡಿದೆ. ಆಡಿಯೋ ಹಕ್ಕುಗಳನ್ನು ಆನಂದ್ ಆಡಿಯೋ ತೆಗೆದುಕೊಂಡಿದ್ದು, ಹಿಂದಿ ಡಬ್ಬಿಂಗ್ ಹಕ್ಕುಗಳನ್ನು ಗಣನೀಯ ಮೊತ್ತಕ್ಕೆ ಮಾರಾಟ ಮಾಡಿದ್ದಾರೆ.
ಹೆಚ್ಚುವರಿಯಾಗಿ, ಪ್ರತಿಷ್ಠಿತ ಚಾನೆಲ್ ಚಿತ್ರದ ಸ್ಯಾಟಲೈಟ್ ಹಕ್ಕುಗಳನ್ನು ತೆಗೆದುಕೊಂಡಿದೆ ಎಂದು ವರದಿಯಾಗಿದೆ. ಹಿಗಾಗಿ ಸಿನಿಮಾ ಬಿಡುಗಡೆಗೂ ಮುನ್ನವೇ 13 ಕೋಟಿ ರೂಪಾಯಿ ಗಳಿಸಿದೆ.


Click it and Unblock the Notifications











