'ಸೀತಾ ರಾಮ ಕಲ್ಯಾಣ' ಸೆಟ್ ನಲ್ಲಿ ಜೂನಿಯರ್ ರೆಬೆಲ್ ಸ್ಟಾರ್
Recommended Video

'ಸೀತಾ ರಾಮ ಕಲ್ಯಾಣ' ನಿಖಿಲ್ ಕುಮಾರ್ ಅಭಿನಯದ ಎರಡನೇ ಸಿನಿಮಾ 'ಜಾಗ್ವಾರ್' ನಂತರ ನಿಖಿಲ್ 'ಸೀತಾ ರಾಮ ಕಲ್ಯಾಣ' ಚಿತ್ರದಲ್ಲಿ ನಾಯಕನಾಗಿ ಅಭಿನಯ ಮಾಡುತ್ತಿದ್ದು ಚಿತ್ರದಲ್ಲಿ ರಚಿತಾ ರಾಮ್ ನಾಯಕಿಯಾಗಿ ಆಕ್ಟ್ ಮಾಡುತ್ತಿದ್ದಾರೆ.
ನಿಖಿಲ್ ಕನ್ನಡ ಸಿನಿಮಾರಂಗದಲ್ಲಿ ಗುರುತಿಸಿಕೊಳ್ಳುತ್ತಿರುವ ಭರವಸೆಯ ನಾಯಕ ನಟ ಹಾಗೂ ಮುಖ್ಯಮಂತ್ರಿಗಳ ಮಗ. ಇತ್ತೀಚಿನ ದಿನಗಳಲ್ಲಿ 'ಸೀತಾ ರಾಮ ಕಲ್ಯಾಣ' ಸಿನಿಮಾ ಸೆಟ್ ಗೆ ಸಾಕಷ್ಟು ಗಣ್ಯರು ಭೇಟಿ ನೀಡುತ್ತಿದ್ದಾರೆ. ಮೊನ್ನೆ ಮೊನ್ನೆಯಷ್ಟೇ ತೆಲಂಗಾಣ ಮುಖ್ಯಮಂತ್ರಿ ಕೆ ಚಂದ್ರಶೇಖರ್ ರಾವ್ ಅವರ ಪುತ್ರ ಕೆ ಟಿ ರಾಮಾರಾವ್ ಚಿತ್ರೀಕರಣ ಸ್ಥಳಕ್ಕೆ ಭೇಟಿ ಮಾಡಿ ನಿಖಿಲ್ ಅವರನ್ನು ಮಾತನಾಡಿಸಿಕೊಂಡು ಹೋಗಿದ್ದರು.

ಈಗ ರೆಬೆಲ್ ಸ್ಟಾರ್ ಅಂಬರೀಶ್ ಅವರ ಪುತ್ರ ಜ್ಯೂನಿಯರ್ ರೆಬೆಲ್ ಸ್ಟಾರ್ ಅಭಿಷೇಕ್ 'ಸೀತಾ ರಾಮ ಕಲ್ಯಾಣ' ಚಿತ್ರೀಕರಣ ಸ್ಥಳಕ್ಕೆ ಭೇಟಿ ಕೊಟ್ಟು ನಿಖಿಲ್ ಜೊತೆ ಸಾಕಷ್ಟು ಕಾಲ ಸಮಯ ಕಳೆದಿದ್ದಾರೆ.

ಅಭಿಷೇಕ್, ನಿಖಿಲ್ ಸಾಕಷ್ಟು ದಿನಗಳ ಹಿಂದಿನಿಂದಲೂ ಸ್ನೇಹಿತರು. ಈ ಹಿಂದೆ ನಿಖಿಲ್, ಲಕ್ಷ್ಮಿ ಮಿಂಚು ಹಾಗೂ ಅಭಿ ಒಟ್ಟಿಗೆ ಕಾಣಿಸಿಕೊಂಡಿದ್ದ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸುದ್ದಿ ಆಗಿತ್ತು. ಈಗ ಅಭಿಷೇಕ್ ಚಿತ್ರೀಕರಣ ಸ್ಥಳಕ್ಕೆ ಭೇಟಿ ನೀಡಿರುವುದು ಇವರಿಬ್ಬರ ಸ್ನೇಹ ತುಂಬಾ ಚೆನ್ನಾಗಿದೆ ಎನ್ನುವುದು ತಿಳಿಯುತ್ತಿದೆ. 'ಸೀತಾ ರಾಮ ಕಲ್ಯಾಣ' ಸಿನಿಮಾದ ಚಿತ್ರೀಕರಣ ಭರದಿಂದ ಸಾಗಿದ್ದು ಬೆಂಗಳೂರಿನ ಸುತ್ತ ಮುತ್ತ ಶೂಟಿಂಗ್ ನಡೆಯುತ್ತಿದೆ.


Click it and Unblock the Notifications











