ಕೊಯಂಬತ್ತೂರಿಗೆ ಹೊರಟು ನಿಂತ ರೆಬೆಲ್ ಸ್ಟಾರ್ ಪುತ್ರ
Recommended Video

ರೆಬೆಲ್ ಸ್ಟಾರ್ ಅಂಬರೀಶ್ ಪುತ್ರ ಅಭಿಷೇಕ್ ಸದ್ಯ ಬೆಂಗಳೂರು ಬಿಟ್ಟು ಕೊಯಂಬತ್ತೂರಿಗೆ ಪ್ರಯಾಣ ಬೆಳೆಸಲು ಮುಂದಾಗಿದ್ದಾರೆ. ಅರೆ ಅಭಿಷೇಕ್ ಅವರಿಗೆ ಬೆಂಗಳೂರು ಬೋರ್ ಆಯ್ತಾ ಅಂತ ಕೇಳಬೇಡಿ ಏಕೆಂದರೆ ಅಭಿಷೇಕ್ ಕೊಯಂಬತ್ತೂರಿಗೆ ಹೋಗುತ್ತಿರುವುದು ಸಿನಿಮಾ ಚಿತ್ರೀಕರಣಕ್ಕಾಗಿ.
ಅಭಿಷೇಕ್ ಅಭಿನಯದ 'ಅಮರ್' ಸಿನಿಮಾ ಶೂಟಿಂಗ್ ಕೊಯಂಬತ್ತೂರಿಯಲ್ಲಿ ನಡೆಯಲಿದೆ. ಅದೇ ಕಾರಣದಿಂದ ಚಿತ್ರತಂಡ ಇದೇ ತಿಂಗಳು ಅಂದರೆ ಜೂನ್ 28ರಿಂದ ಕೊಯಂಬತ್ತೂರಿಗೆ ಚಿತ್ರೀಕರಣ ಶುರು ಮಾಡಲಿದೆ. 'ಅಮರ್' ಸಿನಿಮಾದಲ್ಲಿ ಅಭಿಷೇಕ್ ಜೊತೆ ತಾನ್ಯ ಹೋಪೆ ನಾಯಕಿಯಾಗಿ ಅಭಿನಯ ಮಾಡುತ್ತಿದ್ದಾರೆ.

ನಾಗಶೇಖರ್ ಸಿನಿಮಾವನ್ನು ನಿರ್ದೇಶನ ಮಾಡುತ್ತಿದ್ದು ಸಂದೇಶ್ ನಾಗರಾಜ್ ಚಿತ್ರಕ್ಕೆ ಬಂಡವಾಳ ಹಾಕಿದ್ದಾರೆ. 'ಅಮರ್' ಅಭಿಷೇಕ್ ಅಭಿನಯದ ಚೊಚ್ಚಲ ಸಿನಿಮಾ ಆಗಿದ್ದು ಪಕ್ಕಾ ಕಮರ್ಷಿಯಲ್ ಚಿತ್ರ.
ಮುಹೂರ್ತ ಹಾಗೂ ಫೋಟೋ ಶೂಟ್ ಮುಗಿಸಿರುವ ಚಿತ್ರತಂಡ ಈ ತಿಂಗಳ ಅಂತ್ಯದಿಂದ ಶೂಟಿಂಗ್ ನಲ್ಲಿ ಬ್ಯೂಸಿ ಆಗಲಿದೆ. ಈ ಹಿಂದೆ ನಾಗಶೇಖರ್ ಚಿತ್ರಗಳಲ್ಲಿ ಕೆಲಸ ಮಾಡಿದ ತಂತ್ರಜ್ಞರೇ 'ಅಮರ್' ಸಿನಿಮಾದಲ್ಲಿಯೂ ವರ್ಕ್ ಮಾಡಲಿದ್ದಾರೆ.


Click it and Unblock the Notifications











