ಮುದ್ದಾದ ಮಗುವಿಗೆ ಜನ್ಮ ನೀಡಿದ ಅವಿವಾ ಅಭಿಷೇಕ್; ಕಂದಮ್ಮನನ್ನು ಮುದ್ದಾಡಿದ ಸುಮಲತಾ

ಕಳೆದ ವರ್ಷ ಅರಮನೆ ಮೈದಾನದಲ್ಲಿ ಅಂಬಿ ಪುತ್ರ ಅಭಿಷೇಕ್ ಹಾಗೂ ಅವಿವಾ ಬಿದ್ದಪ್ಪ ಮದುವೆ ಅದ್ಧೂರಿಯಾಗಿ ನೆರವೇರಿತ್ತು. ಬಳಿಕ ಗ್ರ್ಯಾಂಡ ರಿಸೆಪ್ಷನ್, ಮಂಡ್ಯದಲ್ಲಿ ಬೀಗರ ಊಟ, ಬಳಿಕ ಬೆಂಗಳೂರಿನಲ್ಲಿ ಸಂಗೀತ್ ಕಾರ್ಯಕ್ರಮ ರಂಗೇರಿತ್ತು. ಇದೀಗ ಅಭಿ- ಅವಿವಾ ದಂಪತಿ ಮನೆಗೆ ಹೊಸ ಅತಿಥಿಯನ್ನು ಸ್ವಾಗತಿಸಿದ್ದಾರೆ.

ಹೌದು ಕೆಲವೇ ದಿನಗಳ ಹಿಂದೆ ಅವಿವಾ ಅಭಿಷೇಕ್ ಗರ್ಭಿಣಿ ಆಗಿರುವ ಸುದ್ದಿ ಬಂದಿತ್ತು. ಬಳಿಕ ಸೀಮಂತ ಶಾಸ್ತ್ರದ ಫೋಟೊಗಳು ವೈರಲ್ ಆಗುತ್ತು. ಇದೀಗ ಅವಿವಾ ಮುದ್ದಾದ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಸದ್ಯ ಅಂಬಿ ಮನೆಯಲ್ಲಿ ಸಂಭ್ರಮ ಮನೆ ಮಾಡಿದೆ. ಖಾಸಗಿ ಆಸ್ಪತ್ರೆಯಲ್ಲಿ ಬೆಳಗ್ಗೆ 8.30ರ ಸುಮಾರಿಗೆ ಹರಿಗೆಯಾಗಿದೆ.

Actor Abishek Ambareesh and Aviva Bidapa Welcome First Child A Baby boy

ಅಂಬಿ ಮತ್ತೆ ಹುಟ್ಟಿ ಬಂದರು ಎಂದು ಅಭಿಮಾನಿಗಳು ಸಂಭ್ರಮಿಸುತ್ತಿದ್ದಾರೆ. ಮೊಮ್ಮಗನನ್ನು ಮುದ್ದಾಡುತ್ತಾ ಸುಮಲತಾ ಕಾಣಿಸಿಕೊಂಡಿರುವ ಫೋಟೊ ವೈರಲ್ ಆಗುತ್ತಿದೆ. ತಾಯಿ- ಮಗು ಆರೋಗ್ಯವಾಗಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ. ಆಗಸ್ಟ್ ತಿಂಗಳಲ್ಲಿ ಅವಿವಾ ಅಭಿಷೇಕ್ ಸೀಮಂತಾ ಶಾಸ್ತ್ರ ನಡೆದಿತ್ತು. ಇನ್ನು ಅಭಿಮಾನಿಗಳು ಮಗುವನ್ನು ಎತ್ತಿಕೊಂಡಿರುವ ಸುಮಲತಾ ಅವರ ಫೋಟೊ ಜೂಮ್ ಮಾಡಿ ನೋಡುತ್ತಿದ್ದಾರೆ. ಮಗು ಯಾರ ರೀತಿ ಎಂದು ಚರ್ಚಿಸುತ್ತಿದ್ದಾರೆ.

ತಂದೆ- ತಾಯಿ ಹಾದಿಯಲ್ಲೇ ಅಭಿಷೇಕ್ ಅಂಬರೀಶ್ ಚಿತ್ರರಂಗಕ್ಕೆ ಬಂದಿದ್ದಾರೆ. 'ಅಮರ್' ಅಂಬಿ ಪುತ್ರನ ಚೊಚ್ಚಲ ಸಿನಿಮಾ. ಬಳಿಕ ದುನಿಯಾ ಸೂರಿ ನಿರ್ದೇಶನದ 'ಬ್ಯಾಡ್ ಮ್ಯಾನರ್ಸ್' ಚಿತ್ರಗಳಲ್ಲಿ ಅಭಿ ಅಬ್ಬರಿಸಿದ್ದರು. ಆದರೆ ಎರಡೂ ಸಿನಿಮಾಗಳು ಗೆಲ್ಲಲಿಲ್ಲ. ಹಾಗಾಗಿ ಹೊಸ ಚಿತ್ರಕ್ಕಾಗಿ ತಯಾರಿ ನಡೆಸುತ್ತಿದ್ದಾರೆ.

ಹೆಬ್ಬುಲಿ ಖ್ಯಾತಿ ಕೃಷ್ಣ ನಿರ್ದೇಶನದಲ್ಲಿ 'ಕಾಳಿ' ಎನ್ನುವ ಚಿತ್ರ ಆರಂಭವಾಗಿತ್ತು. ಚಿತ್ರದಲ್ಲಿ ಅಭಿ ಜೊತೆ ಸಪ್ತಮಿ ಗೌಡ ನಟಿಸುವುದಾಗಿ ಹೇಳಿದ್ದರು. ಆದರೆ ಬಳಿಕ ಆ ಬಗ್ಗೆ ಯಾವುದೇ ಮಾಹಿತಿ ಸಿಗಲಿಲ್ಲ. ಇತ್ತೀಚೆಗೆ ಅಭಿಷೇಕ್ ವಿದೇಶಕ್ಕೆ ತೆರಳಿ ಹೆಚ್ಚಿನ ತರಬೇತಿ ಪಡೆಯುತ್ತಿದ್ದಾರೆ ಎಂದು ಹೇಳಲಾಗಿತ್ತು.

'ಅಯೋಗ್ಯ' ಸಿನಿಮಾ ನಿರ್ದೇಶಕ ಮಹೇಶ್ ಕುಮಾರ್ ನಿರ್ದೇಶನದ ಚಿತ್ರದಲ್ಲಿ ಕೂಡ ಅಭಿ ನಟಿಸಬೇಕಿದೆ. ಇನ್ನು ಸಾಕಷ್ಟು ಕತೆಗಳನ್ನು ಕೇಳುತ್ತಿದ್ದಾರೆ. ಇನ್ನು ಅಭಿ ಹಾಗೂ ಅವಿವಾ 5 ವರ್ಷಗಳ ಕಾಲ ಪ್ರೀತಿಸಿ ಬಳಿಕ ಮದುವೆ ಆಗಿದ್ದರು. ಫ್ಯಾಷನ್ ಡಿಸೈನರ್ ಹಾಗೂ ಮಾಡೆಲ್ ಆಗಿ ಅವಿವಾ ಗುರ್ತಿಸಿಕೊಂಡಿದ್ದಾರೆ.

Actor Abishek Ambareesh and Aviva Bidapa Welcome First Child A Baby boy

ಫ್ಯಾಷನ್ ಡಿಸೈನರ್ ಪ್ರಸಾದ್ ಬಿದ್ದಪ್ಪ ಪುತ್ರಿ ಅವಿವಾ. ಬ್ಯುಸಿನೆಸ್ ವುಮೆನ್ ಆಗಿ ಆಕೆ ಗುರ್ತಿಸಿಕೊಂಡಿದ್ದಾರೆ. ಅಭಿಷೇಕ್ ಓದಲು ಲಂಡನ್‌ಗೆ ಹೋಗಿದ್ದರು. ಅಲ್ಲೇ ಅವಿವಾ ಸಹ ಲಂಡನ್ ಆಫ್ ಮ್ಯೂಸಿಕ್ ಅಂಡ್ ಡ್ರಾಮಾಟಿಕ್ ಆರ್ಟ್‌ನಲ್ಲಿ ಪದವಿ ಪಡೆದವರು. ಹೀಗೆ ಓದುವ ಸಮಯದಲ್ಲೇ ಇಬ್ಬರ ನಡುವೆ ಪರಿಚಯವಾಗಿ ಬಳಿಕ ಅದು ಪ್ರೀತಿಗೆ ತಿರುಗಿತ್ತು.

2022ರಲ್ಲಿ ಬೆಂಗಳೂರಿನ ಫೋರ್ ಸೀಸನ್ಸ್ ಎಂಬ ಹೋಟೆಲ್‌ನಲ್ಲಿ ಅಭಿ-ಅವಿವಾ ಮದುವೆ ನಿಶ್ಚಿತಾರ್ಥ ಸಮಾರಂಭ ನಡೆದಿತ್ತು. ಬಳಿಕ ಕಳೆದ ವರ್ಷ ಜೂನ್ 5ರಂದು ಮನೆಗೆ ನಡೆದಿತ್ತು. ಗೌಡರ ಸಂಪ್ರದಾಯದಂತೆ ಮದುವೆ ಶಾಸ್ತ್ರಗಳು ನೆರವೇರಿತ್ತು.

More from Filmibeat

English summary
Abishek Ambareesh and Aviva Bidapa blessed with baby boy; Sumalatha photo with grandson goes viral
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X