twitter
    For Quick Alerts
    ALLOW NOTIFICATIONS  
    For Daily Alerts

    ಪೊಲೀಸರ ಜನಜಾಗೃತಿಗೆ ಯಶ್ ಸಾಥ್

    By Pavithra
    |

    ಕಳೆದ ಒಂದು ತಿಂಗಳಿನಿಂದ ಮಕ್ಕಳ ಕಳ್ಳರು ಬಂದಿದ್ದಾರೆ, ಅನುಮಾನಸ್ಪದವಾಗಿ ಯಾರಾದರೂ ನಿಮ್ಮ ಮನೆ ಅಕ್ಕ ಪಕ್ಕ ಕಂಡರೆ ಪೊಲೀಸರಿಗೆ ದೂರು ಸಲ್ಲಿಸಿ ಎನ್ನುವ ಸಂದೇಶಗಳು ವಾಟ್ಸ್ ಆಫ್ ನಲ್ಲಿ ಹರಿದಾಡುತ್ತಿತ್ತು. ಅದನ್ನೇ ನಿಜ ಎಂದುಕೊಂಡು ಜನರು ಕಾನೂನು ಕೈಗೆತ್ತುಕೊಂಡು ಬೆಂಗಳೂರಿನ ಚಾಮರಾಜಪೇಟೆಯಲ್ಲಿ ಅಪರಿಚಿತ ವ್ಯಕ್ತಿಯನ್ನು ಹೊಡೆದು ಸಾಯಿಸಿದರು.

    ಇದರಿಂದ ಎಚ್ಚೆತ್ತುಕೊಂಡ ಕರ್ನಾಟಕ ಪೋಲೀಸರು ರಾಜ್ಯದಾದ್ಯಂತ ಜನರನ್ನ ಭೇಟಿ ಮಾಡಿ ಮಕ್ಕಳು ಕಳ್ಳರ ಬಗ್ಗೆ ಇರುವ ಸುಳ್ಳು ವದಂತಿಗಳಿಗೆ ಕಿವಿಕೊಡಬೇಡಿ ಎಂದು ಮನವಿ ಮಾಡುತ್ತಿದ್ದಾರೆ.

    ಕೆಜಿಎಫ್ ರಾಕಿ ನಾಯಕಿಯ ಕಸರತ್ತು ನೋಡಿ! ಕೆಜಿಎಫ್ ರಾಕಿ ನಾಯಕಿಯ ಕಸರತ್ತು ನೋಡಿ!

    ಇದೇ ಕಾರ್ಯಕ್ರಮಕ್ಕೆ ನಟ ಯಶ್ ಜೊತೆಯಾಗಿದ್ದು ಮಕ್ಕಳ ಕಳ್ಳರ ಬಗ್ಗೆ ಇರುವ ಸುಳ್ಳು ಸುದ್ದಿಯನ್ನು ನಂಬಬೇಡಿ ಎಂದು ಕರಪತ್ರ ಹಿಡಿದು ಸಂದೇಶ ಸಾರಿದ್ದಾರೆ. ಸದ್ಯ ಪೊಲೀಸ್ ಇಲಾಖೆ ಯಶ್ ಪೋಟೋವನ್ನು ಟ್ವಿಟ್ಟರ್ ಹಾಗೂ ಫೇಸ್ ಬುಕ್ ನಲ್ಲಿ ಬಳಸಿಕೊಂಡು ಜನರಿಗೆ ಅರಿವು ಮೂಡಿಸುತ್ತಿದ್ದಾರೆ.

    actor Actor Yash also joined the for Child kidnappers campaign

    ಜನಜಾಗೃತಿ ಅಭಿಯಾನದಲ್ಲಿ ಯಶ್.ಸ್ಸು ಕಂಡ ಪೊಲೀಸರು, ಮಕ್ಕಳ ಕಳ್ಳರಿದ್ದಾರೆಂಬ ಸುಳ್ಳು ವದಂತಿಗಳನ್ನು ನಂಬದಂತೆ ಮತ್ತು ಪ್ರೋತ್ಸಾಹಿಸದಂತೆ ಸಾರ್ವಜನಿಕರಿಗೆ ಮನವಿ ಮಾಡುವುದನ್ನು ಮುಂದುವರೆಸಿರುತ್ತಾರೆ.

    actor Actor Yash also joined the for Child kidnappers campaign

    ಇದೇ ವಿಚಾರವಾಗಿ ಬೆಂಗಳೂರು ಪಶ್ಚಿಮ ವಲಯ ಡಿಸಿಪಿ ರವಿಚನ್ನಣ್ಣನವರ್ ಯಶ್ ಅವರ ಫೋಟೋ ಸಮೇತ ಈ ರೀತಿಯಲ್ಲಿ ಟ್ವೀಟ್ ಮಾಡಿದ್ದಾರೆ. "ಜನಜಾಗೃತಿ ಅಭಿಯಾನದಲ್ಲಿ #ಯಶ್.ಸ್ಸು ಕಂಡ ಪೊಲೀಸರು, ಮಕ್ಕಳ ಕಳ್ಳರಿದ್ದಾರೆಂಬ ಸುಳ್ಳು ವದಂತಿಗಳನ್ನು ನಂಬದಂತೆ ಮತ್ತು ಪ್ರೋತ್ಸಾಹಿಸದಂತೆ ಸಾರ್ವಜನಿಕರಿಗೆ ಮನವಿ ಮಾಡುವುದನ್ನು ಮುಂದುವರೆಸಿರುತ್ತಾರೆ".

    English summary
    Bangalore police are campaigning for Child kidnappers. Kannada actor Actor Yash also joined the campaign
    Saturday, June 2, 2018, 15:50
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X