'ಯಜಮಾನ' ದರ್ಶನ್ ಸ್ಟೈಲ್ ನಲ್ಲಿ ನಿಂತ ಕುಚಿಕು
Recommended Video

ಯಜಮಾನ ದರ್ಶನ್‌ರನ್ನು ಫಾಲೋ ಮಾಡಿದ ಆದಿತ್ಯ..! | Filmibeat Kannada
ನಟ ದರ್ಶನ್ ಅವರ 'ಯಜಮಾನ' ಚಿತ್ರದ ಫಸ್ಟ್ ಲುಕ್ ರಿಲೀಸ್ ಅಗುವುದಕ್ಕೆ ಮುಂಚೆಯೇ ಸಿನಿಮಾ ಟ್ರೆಂಡ್ ಹುಟ್ಟು ಹಾಕಿದೆ. ನಿನ್ನೆ ಬಂದ ಒಂದು ಪೋಸ್ಟರ್ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದೆ.
ದರ್ಶನ್ ಅಭಿಮಾನಿಗಳು ಅವರ ರೀತಿಯೇ ಹಿಂದೆಯಿಂದ ಕೈ ಕಟ್ಟಿ ನಿಂತು ಪೋಸ್ ನೀಡಿದ್ದಾರೆ. ಬರೀ ಅಭಿಮಾನಿಗಳು ಮಾತ್ರವಲ್ಲ ಈಗ ದರ್ಶನ್ ಕುಚುಕು ನಟ ಆದಿತ್ಯ ಕೂಡ 'ಯಜಮಾನ'ನ ಸ್ಟೈಲ್ ನಲ್ಲಿ ನಿಂತಿದ್ದಾರೆ.
ಆದಿತ್ಯ ಈಗ 'ಮುಂದುವರಿದ ಅಧ್ಯಾಯ' ಎಂಬ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಸಿನಿಮಾ ಪೋಸ್ಟರ್ ಕೂಡ 'ಯಜಮಾನ' ಪೋಸ್ಟರ್ ಗೆ ಹೋಲುತ್ತಿದೆ. ಎರಡು ಪೋಸ್ಟರ್ ಗಳನ್ನು ಇನ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಳ್ಳುವ ಮೂಲಕ ದರ್ಶನ್ ಗೆ ಆದಿತ್ಯ ಶುಭ ಹಾರೈಸಿದ್ದಾರೆ.

'ಯಜಮಾನ' ಚಿತ್ರದ ಫಸ್ಟ್ ಲುಕ್ ಸಪ್ಟೆಂಬರ್ 23ರಂದು ಬಿಡುಗಡೆಯಾಗಲಿದೆ. ರಶ್ಮಿಕಾ ಮಂದಣ್ಣ ಹಾಗೂ ತಾನ್ಯ ಹೋಪೆ ಸಿನಿಮಾದ ನಾಯಕಿ ಆಗಿದ್ದಾರೆ. ವಿಶೇಷ ಅಂದರೆ, ದರ್ಶನ್ ಪುತ್ರ ವಿನೀಶ್ ಚಿತ್ರದ ಒಂದು ಹಾಡಿನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.
More from Filmibeat
English summary
Kannada actor Adithya wishes for 'Yajamana' movie. Darshan's 51th movie 'Yajamana' first look will be releasing september 23th. The movie is producing by Shailaja Nag and P.Kumar will be directing this movie.
adithya darshan rashmika mandanna b suresh sandalwood ದರ್ಶನ್ ಆದಿತ್ಯ ರಶ್ಮಿಕಾ ಮಂದಣ್ಣ ಬಿ ಸುರೇಶ್ ಸ್ಯಾಂಡಲ್ ವುಡ್


Click it and Unblock the Notifications











