twitter
    For Quick Alerts
    ALLOW NOTIFICATIONS  
    For Daily Alerts

    ಕನ್ನಡ ಕಲಾಭಿಮಾನಿಗಳಿಗೆ ಹೃದಯಪೂರ್ವಕ ಧನ್ಯವಾದ ಹೇಳಿದ 'ಡೆಡ್ಲಿ ಆದಿತ್ಯ', ಏಕೆ?

    |

    ಕನ್ನಡ ನಟ ಆದಿತ್ಯಗೆ ಡೆಡ್ಲಿ ಎಂಬ ಹೆಸರು ಬರಲು ಕಾರಣ ಡೆಡ್ಲಿ ಸೋಮ. ಆದಿತ್ಯ ವೃತ್ತಿ ಜೀವನದಲ್ಲಿ ದಿ ಬೆಸ್ಟ್ ಮತ್ತು ಬ್ರೇಕ್ ಕೊಟ್ಟ ಚಿತ್ರ. ಈ ಸಿನಿಮಾದ ಬಳಿಕ ಆದಿತ್ಯ ಅವರನ್ನು ಡೆಡ್ಲಿ ಆದಿತ್ಯ ಎಂದೇ ಕರೆಯಲು ಆರಂಭಿಸಿದರು.

    Recommended Video

    Ayogya ಸಿನಿಮಾದ ಕ್ಲೈಮ್ಯಾಕ್ಸ್ ಸನ್ನಿವೇಶದ ತೆರೆ ಹಿಂದಿನ ದೃಶ್ಯ | Ayogya Climax Making | Filmibeat Kannada

    ಈ ಹೆಸರು, ಈ ಖ್ಯಾತಿ ಬಂದು ಹದಿನೈದು ವರ್ಷ ಕಳೆದಿದೆ. ಈ ವಿಶೇಷ ಸಂದರ್ಭದಲ್ಲಿ ಆದಿತ್ಯ ಅವರು ಡೆಡ್ಲಿ ಸೋಮ ಸಿನಿಮಾ ಸ್ಮರಿಸಿಕೊಂಡಿದ್ದಾರೆ. ಹಾಗೂ ಈ ಚಿತ್ರವನ್ನು ಗೆಲ್ಲಿಸಿ ಡೆಡ್ಲಿ ಖ್ಯಾತಿ ನೀಡಿದ್ದಕ್ಕೆ ಋಣಿಯಾಗಿದ್ದೇನೆ ಎಂದಿದ್ದಾರೆ.

    'ನೀನೊಂದು ಮುಗಿಯದ ಮೌನ' ಹಾಡು ಹುಟ್ಟಿದ ರೋಚಕ ಕಥೆ ಹೇಳಿದ ಸಾಧು.!'ನೀನೊಂದು ಮುಗಿಯದ ಮೌನ' ಹಾಡು ಹುಟ್ಟಿದ ರೋಚಕ ಕಥೆ ಹೇಳಿದ ಸಾಧು.!

    ಈ ಕುರಿತು ಟ್ವೀಟ್ ಮಾಡಿರುವ ಆದಿತ್ಯ ''15 ವರ್ಷಗಳ ಹಿಂದೆ 2005ರಲ್ಲಿ ಈ ದಿನದಂದು ನನ್ನ ಕಲ್ಟ್ ಕ್ಲಾಸಿಕ್ ಮತ್ತು ನನ್ನ ಪ್ರೇಕ್ಷಕರು ನನ್ನನ್ನು "ಡೆಡ್ಲಿ" ಆಗಿ ಮಾಡಿದ್ದರು. ಆ ಕ್ಷಣದಿಂದ ಇಂದಿಗೂ ಸಹ ತುಂಬಾ ಪ್ರೀತಿಯನ್ನು ತೋರಿಸುತ್ತಿರುವ ಪ್ರತಿಯೊಬ್ಬರಿಗೂ ನಾನು ಧನ್ಯವಾದ ಹೇಳಲು ಬಯಸುತ್ತೇನೆ... ಲವ್ ಯು ಆಲ್ !!'' ಎಂದಿದ್ದಾರೆ.

    2004ರಲ್ಲಿ ಆದಿತ್ಯ ಎಂಟ್ರಿ

    2004ರಲ್ಲಿ ಆದಿತ್ಯ ಎಂಟ್ರಿ

    2004ರಲ್ಲಿ 'ಲವ್' ಎಂಬ ಚಿತ್ರದಲ್ಲಿ ಕಾಣಿಸಿಕೊಂಡ ಆದಿತ್ಯ ಸಿನಿಮಾರಂಗ ಪ್ರವೇಶ ಮಾಡಿದ್ದರು. ಈ ಚಿತ್ರವನ್ನು ಆದಿತ್ಯ ಅವರ ತಂದೆ ಎಸ್ ವಿ ರಾಜೇಂದ್ರ ಸಿಂಗ್ ಬಾಬು ಅವರೇ ನಿರ್ದೇಶಿಸಿದ್ದರು. ನಂತರ 'ಆದಿ' ಸಿನಿಮಾದಲ್ಲಿ ನಟಿಸಿದರು. ಈ ಚಿತ್ರ ತಕ್ಕ ಮಟ್ಟಿಗೆ ಆದಿತ್ಯಗೆ ಯಶಸ್ಸು ಕೊಡ್ತು.

    ಡೆಡ್ಲಿ ಸೋಮನಾದ ಆದಿತ್ಯ

    ಡೆಡ್ಲಿ ಸೋಮನಾದ ಆದಿತ್ಯ

    ಭೂಗತ ಲೋಕದಲ್ಲಿ ಹೆಚ್ಚು ಸದ್ದು ಮಾಡಿದ್ದ ರೌಡಿ ಶೀಟರ್ ಡೆಡ್ಲಿ ಸೋಮನ ಜೀವನ ಆಧಾರಿತ ಚಿತ್ರಕ್ಕೆ ಆದಿತ್ಯ ನಾಯಕರಾದರು. 2005ರಲ್ಲಿ 'ಡೆಡ್ಲಿ ಸೋಮ' ಎಂಬ ಹೆಸರಿನಲ್ಲಿ ಸಿನಿಮಾ ಬಂತು. ರವಿಬೆಳಗೆರೆ ಚಿತ್ರಕಥೆ ಬರೆದಿದ್ದ ಈ ಚಿತ್ರಕ್ಕೆ ರವಿ ಶ್ರೀವತ್ಸ ನಿರ್ದೇಶನ ಮಾಡಿದ್ದರು. ಅಂಡರ್‌ವರ್ಲ್ಡ್ ಆಧಾರಿತ ಈ ಚಿತ್ರವನ್ನು ಪ್ರೇಕ್ಷಕರು ಗೆಲ್ಲಿಸಿಬಿಟ್ಟರು. ಅಲ್ಲಿಯವರೆಗೂ ಆದಿತ್ಯ ಎನಿಸಿಕೊಂಡಿದ್ದ ನಟ, ಡೆಡ್ಲಿ ಸೋಮ ಚಿತ್ರದ ಬಳಿಕ ಡೆಡ್ಲಿ ಆದಿತ್ಯ ಆದರು.

    ಡೆಡ್ಲಿ-2 ಚಿತ್ರವೂ ಬಂತು

    ಡೆಡ್ಲಿ-2 ಚಿತ್ರವೂ ಬಂತು

    ಡೆಡ್ಲಿ ಸೋಮ ನಂತರ ಅಂತಹದ್ದೇ ಪಾತ್ರಗಳನ್ನು ಆದಿತ್ಯ ಅವರನ್ನು ಹುಡುಕಿಕೊಂಡು ಬಂತು. ಈ ಮಧ್ಯೆ ಕೆಲವು ಚಿತ್ರಗಳನ್ನು ಮಾಡಿದರು ಸಕ್ಸಸ್ ಸಿಗಲಿಲ್ಲ. ಮತ್ತೆ 2010ರಲ್ಲಿ ಡೆಡ್ಲಿ-2 ಅಂತ ಸಿನಿಮಾ ಮಾಡಿದ್ದರು. ಈ ಚಿತ್ರಕ್ಕೂ ರವಿ ಶ್ರೀವತ್ಸ ನಿರ್ದೇಶನವಿತ್ತು. ಮೊದಲ ಭಾಗದಂತೆ ಅಷ್ಟು ದೊಡ್ಡ ಯಶಸ್ಸು ಸಿಗಲಿಲ್ಲ ಅಂದರೂ ಡೆಡ್ಲಿ ಪಾತ್ರದಲ್ಲಿ ಆದಿತ್ಯ ಅವರನ್ನು ಸ್ವೀಕರಿಸಿದರು.

    'ಎದೆಗಾರಿಕೆ' ಮರೆಯುವಂತಿಲ್ಲ

    'ಎದೆಗಾರಿಕೆ' ಮರೆಯುವಂತಿಲ್ಲ

    ಡೆಡ್ಲಿ ಪಾತ್ರ ಆದಿತ್ಯ ಅವರಿಗೆ ಮತ್ತಷ್ಟು ಹಿಟ್ ಚಿತ್ರಗಳ ನೀಡಲು ಸ್ಫೂರ್ತಿಯಾಯಿತು. 2012ರಲ್ಲಿ ಎದೆಗಾರಿಕೆ ಸಿನಿಮಾ ಮಾಡಿದ್ರು. ಅಗ್ನಿಶ್ರೀಧರ್ ಚಿತ್ರಕಥೆ ಬರೆದಿದ್ದು, ಸುಮನ್ ಕಿತ್ತೂರ್ ನಿರ್ದೇಶನ ಮಾಡಿದ್ದರು. ಈ ಚಿತ್ರವೂ ಆದಿತ್ಯಗೆ ಒಳ್ಳೆಯ ಹೆಸರು ತಂದು ಕೊಟ್ಟಿತ್ತು.

    16 ವರ್ಷದ ಸಿನಿ ಜರ್ನಿ

    16 ವರ್ಷದ ಸಿನಿ ಜರ್ನಿ

    ಸತ್ಯ ನಿರ್ದೇಶನದ 'ಬೆಂಗಳೂರು ಅಂಡರ್‌ವರ್ಲ್ಡ್' ಚಿತ್ರದಲ್ಲಿ ಕಾಣಿಸಿಕೊಂಡರು. ದರ್ಶನ್ ಜೊತೆ ಚಕ್ರವರ್ತಿ ಸಿನಿಮಾದಲ್ಲಿ ನಟಿಸಿದರು. ಹೀಗೆ, ಇಂಡಸ್ಟ್ರಿಯಲ್ಲಿ 16 ವರ್ಷದ ಸುದೀರ್ಘ ಪಯಣವನ್ನು ಏಳು ಬೀಳುಗಳೊಂದಿಗೆ ಸಾಗಿಸುತ್ತಿದ್ದಾರೆ. ಇಷ್ಟೆಲ್ಲ ಜರ್ನಿಯ ಮಧ್ಯೆ ಡೆಡ್ಲಿ ಪಾತ್ರ ಆದಿತ್ಯ ಪಾಲಿಗೆ ಎವರ್‌ಗ್ರೀನ್ ಆಗಿಯೇ ಉಳಿದುಕೊಂಡಿದೆ.

    English summary
    Actor Aditya Says Thanks to Kannada audience. because, 15 years ago on this day Deadly Soma movie was released.
    Friday, August 28, 2020, 8:59
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X