ದಾಂಪತ್ಯದಲ್ಲಿ ಬಿರುಕು ? 'ನನ್ನ ಹೆಂಡ್ತಿ ಕೋರ್ಟ್‌ಗೆ ಹೋಗಿದ್ದಾಳಾ ? ಅವಳನ್ನೇ ಕೇಳ್ತೀನಿ ಇರಿ'- ಅಜಯ್ ರಾವ್

ಕೃಷ್ಣ ಜನ್ಮಾಷ್ಟಮಿಯಂದೇ ಸ್ಯಾಂಡಲ್‌ವುಡ್‌ನ ಕೃಷ್ಣ ಅಜಯ್ ರಾವ್ ಬದುಕಿನಲ್ಲಿ ಬಿರುಗಾಳಿ ಎದ್ದಿರುವ ಸುದ್ದಿ ಹೊರ ಬಿದ್ದಿದೆ. ನಾನಾ ದಿಕ್ಕುಗಳಿಂದ ಈ ಕುರಿತು ಚರ್ಚೆ ನಡೆಯುತ್ತಿದೆ. ಸಿನಿಮಾ ಮೇಲೆ ಅಜಯ್ ರಾವ್ ಅವರಿಗೆ ಇರುವ ವ್ಯಾಮೋಹವೇ ಸಂಸಾರದಲ್ಲಿ ಬಿರುಕು ಮೂಡಲು ಕಾರಣವೆನ್ನುವ ಮಾತು ಸದ್ಯ ಗಾಂಧಿನಗರದಲ್ಲಿ ಕೇಳೀ ಬರುತ್ತಿದೆ. ಪತ್ನಿ ಸ್ವಪ್ನಾ ಬೇಡ ಅಂದರೂ ಕೂಡ..

ಅಜಯ್ ರಾವ್ ಚಿತ್ರ ನಿರ್ಮಾಣಕ್ಕೆ ಮುಂದಾಗಿದ್ದು ಕೃಷ್ಣಲೀಲಾ ಮತ್ತು ಯುದ್ಧಕಾಂಡ ಚಿತ್ರಗಳನ್ನು ನಿರ್ಮಾಣ ಮಾಡಿದ್ದರಿಂದಲೇ ದಾಂಪತ್ಯ ಹಳಿ ತಪ್ಪಿದೆ ಎಂಬ ಅಭಿಪ್ರಾಯ ಕೂಡ ಸದ್ಯ ವ್ಯಕ್ತವಾಗುತ್ತಿದೆ.

Actor Ajay Rao Addresses Divorce Rumors Calls It a Personal Matter

ಇನ್ನು ಅಜಯ್ ರಾವ್ ಅವರ ವಿರುದ್ಧ ಪತ್ನಿ ಸ್ವಪ್ನಾ ಮ್ಯಾಜಿಸ್ಟ್ರೇಟ್ ನ್ಯಾಯಾಲಯದ ಮೆಟ್ಟಿಲೇರಿದ್ದು ಕೌಟಂಬಿಕ ದೌರ್ಜನ್ಯ ತಡೆ ಕಾಯ್ದೆ 12ರ ಅಡಿಯಲ್ಲಿ ದೂರನ್ನು ದಾಖಲಿಸಿದ್ದಾರೆ ಎಂದು ಕೂಡ ಮಾಧ್ಯಮಗಳಲ್ಲಿ ವರದಿಯಾಗಿದೆ.

ಇದೀಗ ಈ ವಿಚಾರಕ್ಕೆ ಸಂಬಂಧಿಸಿದಂತೆ ಖುದ್ದು ಅಜಯ್ ರಾವ್ ಅವರೇ ಸ್ಪಷ್ಟನೆಯನ್ನು ನೀಡಿದ್ದಾರೆ. ಈ ಕುರಿತು ''ನ್ಯೂಸ್ ಫಸ್ಟ್‌'' ಕನ್ನಡ ವಾಹಿನಿ ಪ್ರತಿನಿಧಿಯ ಜೊತೆ ಮಾತನಾಡಿರುವ ಅಜಯ್ ರಾವ್ ''ನನಗೆ ಗೊತ್ತಿಲ್ಲವಲ್ಲಾ ಈ ವಿಚಾರ . ನನ್ನ ಹೆಂಡ್ತಿ ಕೋರ್ಟ್‌ಗೆ ಹೋಗಿದ್ದಾಳಾ ? ಅವಳನ್ನೇ ಕೇಳ್ತೀನಿ ಇರಿ ಹೋಗಿದಾಳಾ ಅಂತ'' ಎಂದು ಹೇಳಿದ್ದಾರೆ. ನಗು ನಗುತ್ತಾ ಉತ್ತರಿಸಿದ್ದಾರೆ.

ಅಜಯ್ ರಾವ್ ಅವರ ಈ ಉತ್ತರದಿಂದ ಯಾರಿಗಾದರೂ ಅನುಮಾನ ಬರುವುದು ಸಹಜ. ಅರೇ. ಬೆಳಗ್ಗೆಯಿಂದ ಮಾಧ್ಯಮದಲ್ಲಿ ಪ್ರಸಾರವಾದ ಸುದ್ದಿ ಸುಳ್ಳಾ ? ಎಂಬ ಪ್ರಶ್ನೆ ಮೂಡುವುದು ಸಹಜ. ಆದರೆ ಅಸಲಿಗೆ ಮಾಧ್ಯಮಗಳಲ್ಲಿ ಬರುತ್ತಿರುವ ಸುದ್ದಿ ಖುದ್ದು ಅಜಯ್ ರಾವ್ ಅವರ ಗಮನಕ್ಕೆ ಬಂದಂತೆ ಇರಲಿಲ್ಲವೇನೋ.? ತಮ್ಮ ಪತ್ನಿ ತಮ್ಮ ವಿರುದ್ದ ನ್ಯಾಯಾಲಯದ ಮೊರೆ ಹೋಗಿದ್ದಾರೆ ಎನ್ನುವ ಸುಳಿವು ಕೂಡ ಅಜಯ್ ರಾವ್‌ಗೆ ಇದ್ದಂತೆ ಇರಲಿಲ್ಲವೇನೋ.?

ಇದಕ್ಕೆ ಕೈಗನ್ನಡಿ ಎಂಬಂತೆ ಮೊದಲು ನಗು ನಗುತ್ತಾ ಉತ್ತರಿಸಿದ್ದ ಅಜಯ್ ರಾವ್ ಆ ನಂತರ ವಿಷಯದ ತೀವೃತೆ ಅರಿತ ನಂತರ ಗಂಭೀರವಾಗಿ ಮಾತನಾಡಿದ್ದಾರೆ. ಈ ಕುರಿತು ಮತ್ತೊಂದು ಮಾಧ್ಯಮಕ್ಕೂ ಕೂಡ ಪ್ರತಿಕ್ರಿಯೆಯನ್ನು ನೀಡಿರುವ ಅಜಯ್ ರಾವ್ '' ಇದು ನಮ್ಮ ವ್ಯೆಯಕ್ತಿಕ ಖಾಸಗಿ ವಿಷಯ. ನಾವು ಅದನ್ನು ಬಗೆ ಹರಿಸಿಕೊಳ್ಳುತ್ತೇವೆ ಡಿಗ್ನಿಫೈಡ್ ಆಗಿ ನಾವು ಈ ವಿಚಾರವನ್ನು ಹ್ಯಾಂಡಲ್ ಮಾಡುತ್ತೇವೆ'' ಎಂದು ಹೇಳಿದ್ದಾರೆ. ಮುಂದುವರೆದು '' ಇದೆಲ್ಲದರಿಂದ ನನ್ನ ಮಘಳ ಭವಿಷ್ಯಕ್ಕೆ ತೊಂದರೆಯಾಗುವುದು ಬೇಡ, ನಮ್ಮ ಖಾಸಗಿತನಕ್ಕೆ ಗೌರವ ಕೊಡಿ. ದಯವಿಟ್ಟು ಇದೆಲ್ಲವನ್ನು ಇಲ್ಲಿಗೆ ನಿಲ್ಲಿಸಿ ಬಿಡಿ'' ಎಂದು ಮನವಿಯನ್ನು ಕೂಡ ಮಾಡಿಕೊಂಡಿದ್ದಾರೆ. ತಮ್ಮ ಫೋನ್‌ನ ಸ್ವಿಚ್ ಆಫ್ ಕೂಡ ಮಾಡಿಕೊಂಡಿದ್ದಾರೆ.

Actor Ajay Rao Addresses Divorce Rumors Calls It a Personal Matter

ಒಟ್ನಲ್ಲಿ ಅಜಯ್ ರಾವ್ ಸದ್ಯ ಈ ಸುದ್ದಿಯನ್ನು ಅಲ್ಲಗೆಳೆದಿಲ್ಲ. ಸುಳ್ಳು ಎಂದು ಕೂಡ ಹೇಳಿಲ್ಲ. ಹೀಗಾಗಿ ಅಜಯ್ ರಾವ್ ಅವರ ದಾಂಪತ್ಯದಲ್ಲಿ ಬಿರುಕು ಮೂಡಿದೆ ಎನ್ನುವ ಅನುಮಾನ ಈಗ ಹಲವರಲ್ಲಿ ಹೆಚ್ಚಾಗಿದೆ. ಇದರ ನಡುವೆ ಸ್ವಪ್ನಾ ಅವರು ತಮ್ಮ ಹೆಸರಿನ ಮುಂದೆ ಇದ್ದ ಅಜಯ್ ರಾವ್ ಅವರನ್ನು ಹೆಸರನ್ನು ಸೋಶಿಯಲ್ ಮೀಡಿಯಾದಲ್ಲಿ ತೆಗೆದಿದ್ದಾರೆ. ಇದ್ರಿಂದ ಅನುಮಾನ ಬಲವಾಗಿದೆ. ಮುಂಬರುವ ದಿನಗಳಲ್ಲಿ ನಿಜಕ್ಕೂ ಅಜಯ್ ರಾವ್ ಮತ್ತು ಸ್ವಪ್ನಾ ದೂರವಾಗುತ್ತಾರಾ ? ಅಥವಾ ತಮ್ಮ ಮಗಳ ಭವಿಷ್ಯವನ್ನು ಗಮನದಲ್ಲಿಟ್ಟುಕೊಂಡು ತಮ್ಮ ನಿರ್ಧಾರವನ್ನು ಪುನರ್ ಪರಿಶೀಲಿಸುತ್ತಾರಾ ? ಎನ್ನುವುದನ್ನು ಕಾದು ನೋಡಬೇಕಿದೆ.

More from Filmibeat

English summary
Sandalwood actor Ajay Rao addresses his rumored divorce and a domestic violence complaint filed by his wife, Swapna. Read his statement on the "personal matter.
Read more about: ajay rao divorce filmibeat news
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X