"ರೈನ್ ಬೋ" ನೋಡಿ ಥ್ರಿಲ್ ಆದ ಅಜೇಯ್ ರಾವ್ ಮತ್ತು ಮಾನ್ವಿತಾ

ಸ್ಯಾಂಡಲ್ ವುಡ್ ನ ಕೃಷ್ಣ ಅಂತಾನೆ ಖ್ಯಾತಿಗಳಿಸಿರುವ ನಟ ಅಜೇಯ್ ರಾವ್. ಸದ್ಯ ಎರಡ್ಮೂರು ಸಿನಿಮಾಗಳ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ಇದರಜತೆಗೀಗ ಅಜೇಯ್ ಮತ್ತೊಂದು ಸಿನಿಮಾಗೆ ಗ್ರೀನ್ ಸಿಗ್ನಲ್ ನೀಡಿದ್ದಾರೆ. ಅಜೇಯ್ ಈ ಬಾರಿ ಟಗರು ಪುಟ್ಟಿ ಮಾನ್ವಿತಾ ಕಾಮತ್ ಜೊತೆ ರೋಮ್ಯಾನ್ಸ್ ಮಾಡಲಿದ್ದಾರೆ.

ಹೌದು, ಅಜೇಯ್ ಮತ್ತು ಮಾನ್ವಿತಾ ಕಾಮತ್ ಇಬ್ಬರು ಒಂದೇ ಸಿನಿಮಾದಲ್ಲಿ ಕಣಿಸಿಕೊಳ್ಳುತ್ತಿದ್ದಾರೆ. ಇವರಿಬ್ಬರ ಸಿನಿಮಾಗೆ 'ರೈನ್ ಬೋ' ಎಂದು ನಾಮಕರಣ ಮಾಡಲಾಗಿದೆ. ಆಕರ್ಷಕ ಟೈಟಲ್ ಇಟ್ಟುಕೊಂಡಿರುವ ಈ ಚಿತ್ರಕ್ಕೆ 'ಕಲರ್ ಆಫ್ ಕ್ರೈಮ್' ಎನ್ನುವ ಟ್ಯಾಗ್ ಲೈನ್ ಇದೆ.

ಅಂದ್ಮೇಲೆ ಇದೊಂದು ಕ್ರೈಮ್ ಆಧಾರಿತ ಸಿನಿಮಾ ಎನ್ನುವುದು ಮೇಲ್ನೋಟಕ್ಕೆ ಗೊತ್ತಾಗುತ್ತಿದೆ. ಚಿತ್ರಕ್ಕೆ ಎಸ್.ರಾಜವರ್ಧನ್ ಆಕ್ಷನ್ ಕಟ್ ಹೇಳುತ್ತಿದ್ದಾರೆ. ರಾಜವರ್ಧನ್ ಗೆ ಇದು ಮೊದಲ ಸಿನಿಮಾ. ಅಂದ್ಹಾಗೆ 'ರೈನ್ ಬೋ' ನಿರ್ದೇಶಕ ಗುರುದೇಶಪಾಂಡೆ ಬಂಡವಾಳ ಹೂಡುತ್ತಿದ್ದಾರೆ. ಗುರು ನಿರ್ಮಾಣದಲ್ಲಿ ಮೂಡಿ ಬರುತ್ತಿರುವ ಎರಡನೆ ಸಿನಿಮಾ ಇದಾಗಿದೆ.

Actor Ajay Rao And Manvitha Kamath Starrer New Film Titled Rainbow

ಅಜೇಯ್ ರಾವ್ ಮತ್ತು ಮಾನ್ವಿತಾ ಕಾಮತ್ ಇಬ್ಬರು ಮೊದಲ ಬಾರಿಗೆ ಒಟ್ಟಿಗೆ ಅಭಿನಯಿಸುತ್ತಿದ್ದಾರೆ. ತೆರೆ ಮೇಲೆ ಈ ಹೊಸ ಜೋಡಿಯನ್ನು ನೋಡಲು ಅಭಿಮಾನಿಗಳು ಕೂಡ ಕಾತುರರಾಗಿದ್ದಾರೆ. ಸದ್ಯ ಚಿತ್ರದ ಟೈಟಲ್ ಮತ್ತು ನಾಯಕ-ನಾಯಕಿ ಬಗ್ಗೆ ಹೇಳಿಕೊಂಡಿರುವ ಚಿತ್ರತಂಡ ಚಿತ್ರದ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಬಿಟ್ಟುಕೊಟ್ಟಿಲ್ಲ.

ಅಜೇಯ್ ಮತ್ತು ಮಾನ್ವಿತಾ ಸಿನಿಮಾ ಇದೇ ತಿಂಗಳು 9ಕ್ಕೆ ಅಂದರೆ ವರಮಹಾಲಕ್ಷ್ಮಿ ಹಬ್ಬದ ದಿನ ಸೆಟ್ಟೇರಲಿದೆ. ಅಂದ್ಹಾಗೆ ಅಜೇಯ್ ಸದ್ಯ ಇನ್ನು ಹೆಸರಿಡದ ನಿರ್ಮಾಪಕ ಚಂದ್ರಶೇಖರ್ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಜೊತೆಗೆ ಕೃಷ್ಣ ಟಾಕೀಸ್ ಸಿನಿಮಾದಲ್ಲೂ ಅಭಿನಯಿಸುತ್ತಿದ್ದಾರೆ.

ಇನ್ನು ಮಾನ್ವಿತಾ ಕೂಡ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ರಿಲ್ಯಾಕ್ಸ್ ಸತ್ಯ, ದಾರಿ ತಪ್ಪಿದ ಮಗ, ಇಂಡಿಯ v/s ಇಂಗ್ಲೆಡ್ ಮತ್ತು ರಾಜಸ್ಥಾನ್ ಡೈರೀಸ್ ಸಿನಿಮಾಗಳು ಮಾನ್ವಿತಾ ಕೈಯಲಿವೆ. ಇದೆಲ್ಲದರ ಜೊತೆಗೀಗ ರೈನ್ ಬೋ ಸಿನಿಮಾ ಕೂಡ ಮಾನ್ವಿತಾ ಲಿಸ್ಟ್ ಗೆ ಸೇರಿಕೊಂಡಿದೆ.

More from Filmibeat

English summary
Kannada actor Ajay Rao and Manvitha Kamath starrer new film titled Rainbow. This film is directed by S.Rajavardhana.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X