ಅಜಯ್ ರಾವ್ ಮಗಳಿಗಾಯ್ತು ನಾಮಕರಣ, ಹೆಸರೇನು?
Recommended Video

ಅಜಯ್ ರಾವ್ ಮಗಳಿಗಾಯ್ತು ನಾಮಕರಣ, ಹೆಸರೇನು? | FILMIBEAT KANNADA
ಇತ್ತೀಚಿಗಷ್ಟೆ ನಟ ಅಜಯ್ ರಾವ್ ಅಪ್ಪ ಆಗಿದ್ದಾರೆ. ಅಜಯ್ ಪತ್ನಿ ಸ್ವಪ್ನ ಹೆಣ್ಣು ಮಗುವಿಗೆ ಜನ್ಮ ನೀಡಿದ್ದು, 'ತಾಯಿಗೆ ತಕ್ಕ ಮಗ' ಅಜಯ್ ತಂದೆ ಆಗಿದ್ದಾರೆ.
ಅಜಯ್ ರಾವ್ ತಮ್ಮ ಮಗುವಿಗೆ ಇದೀಗ ನಾಮಕರಣ ಮಾಡಿದ್ದಾರೆ. ಮುದ್ದಾದ ಮಗಳಿಗೆ 'ಚೆರಿಶ್ಮ ಅಜಯ್ ರಾವ್' ಎಂದು ಹೆಸರಿಟ್ಟಿದ್ದಾರೆ. ಮಗಳಿನ ನಾಮಕರಣದ ಫೋಟೋವನ್ನು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
'ಚೆರಿಶ್ಮ' ಎಂದರೆ ಕಳೆ ಅಥವಾ ವರ್ಚಸ್ಸು ಎಂಬ ಅರ್ಥ ಬರುತ್ತದೆ. ಇನ್ನು ನವೆಂಬರ್ 23 ರಂದು ಸ್ವಪ್ನ ಅಜಯ್ ರಾವ್ ಅವರಿಗೆ ಹೆಣ್ಣು ಮಗು ಜನನ ಆಗಿತ್ತು. ನಿನ್ನೆ ಆ ಮಗುವಿಗೆ ಹೆಸರಿಡಲಾಗಿದೆ.

ಅಂದಹಾಗೆ, ಅಜಯ್ ಹಾಗೂ ಸ್ವಪ್ನ ದಂಪತಿಯ ವಿವಾಹ 2014ರ ಡಿಸೆಂಬರ್ 18 ರಂದು ಕೊಪ್ಪಳದ ದೇವಸ್ಥಾನದಲ್ಲಿ ನಡೆದಿತ್ತು. ಸ್ವಪ್ನ ಕೂಡ ಅಜಯ್ ಅವರ ಹುಟ್ಟೂರಾದ ಹೊಸಪೇಟೆಯವರೇ ಆಗಿದ್ದಾರೆ. ಇವರಿಬ್ಬರದ್ದೂ ಲವ್ ಕಮ್ ಅರೇಂಜ್ಡ್ ಮ್ಯಾರೇಜ್ ಆಗಿದೆ.
More from Filmibeat
English summary
Kannada actor Ajay Rao daughter named as Cherishma.


Click it and Unblock the Notifications











