For Quick Alerts
  ALLOW NOTIFICATIONS  
  For Daily Alerts

  ರಚಿತಾ ರಾಮ್‌ ಬಿಟ್ಟು ಹರ್ಷಿಕಾ ಜೊತೆಗೆ ಅಜಯ್‌ ರಾವ್‌ ಹೆಜ್ಜೆ!

  |

  ನಟ ಅಜಯ್‌ ರಾವ್‌ ಮತ್ತು ರಚಿತಾ ರಾಮ್‌ ಅಭಿನಯದ 'ಲವ್‌ ಯು ರಚ್ಚು' ಚಿತ್ರ ಸಿಕ್ಕಾ ಪಟ್ಟೆ ಸದ್ದು ಮಾಡುತ್ತಿದೆ. ಈ ಚಿತ್ರದ ಟೀಸರ್‌, ಟ್ರೇಲರ್‌, ಹಾಡುಗಳು ಹಲವು ಕಾರಣಕ್ಕೆ ನಿರೀಕ್ಷೆ ಹುಟ್ಟು ಹಾಕಿವೆ. ಎಲ್ಲವೂ ಸರಿ ಎಂದು ಚಿತ್ರತಂಡ ಸಿನಿಮಾ ರಿಲೀಸ್ ಮಾಡಲು ಮುಂದಾಗಿದೆ. ಆದರೆ ಚಿತ್ರದ ನಾಯಕ ಚಿತ್ರ ತಂಡದಿಂದ ದೂರ ಉಳಿದಿರುವುದು ವಿವಾದಕ್ಕೆ ಕಾರಣ ಆಗಿದೆ.

  Recommended Video

  ಲವ್‌ ಯೂ ರಚ್ಚು ಪ್ರಚಾರ ಕಾರ್ಯದಲ್ಲಿ ಭಾಗಿ ಆಗದ ಅಜಯ್ ಬೇರೆ ಕಾರ್ಯಕ್ರಮದಲ್ಲಿ ಬ್ಯುಸಿಯಾಗಿದ್ದಾರೆ.

  ಇತ್ತೀಚೆಗೆ 'ಲವ್‌ ಯು ರಚ್ಚು' ಚಿತ್ರದ ಟ್ರೇಲರ್‌ ರಿಲೀಸ್ ಕಾರ್ಯಕ್ರಮ ಇತ್ತೀಚೆಗೆ ಅದ್ದೂರಿಯಾಗಿ ನೆರವೇರಿತು. ಕಾರ್ಯಕ್ರಮದಲ್ಲಿ ಇಡೀ ಚಿತ್ರ ಭಾಗಿ ಆಗಿತ್ತು. ಆದರೆ ನಾಯಕ ಅಜಯ್‌ ರಾವ್‌ ಗೈರು ಎದ್ದು ಕಾಣುತ್ತಿತ್ತು. ಈ ಚಿತ್ರದ ಕಾರ್ಯಕ್ರಮದಲ್ಲಿ ಅತಿಥಿ ಆಗಿ ಬಂದಿದ್ದ ನಟ ಧ್ರುವ ಸರ್ಜಾ ಹವಾ ಜೋರಾಗಿತ್ತು. ಚಿತ್ರ ತಂಡ ಅಜಯ್‌ ರಾವ್‌ ಅವರ ಬಗ್ಗೆ ಮಾತನಾಡುವ ಆಸಕ್ತಿಯೂ ತೋರಲಿಲ್ಲ. ಹಾಗಾಗಿ ಏನೋ ಅಲ್ಲಿ ಸರಿ ಇಲ್ಲ ಎನ್ನುವ ಗುಮಾನಿ ಹರಿದಾಡುತ್ತಿದೆ.

  ಈ ವಿವಾದಕ್ಕೆ ಈಗ ನಟ ಅಜಯ್‌ ರಾವ್‌ ಮತ್ತೊಂದು ಟ್ವಿಸ್ಟ್‌ ಕೊಟ್ಟಿದ್ದಾರೆ. ಚಿತ್ರತಂಡದಲ್ಲಿ ಎಲ್ಲವೂ ಸರಿ ಇಲ್ಲ. ಅಜಯ್‌ ರಾವ್‌ ಚಿತ್ರ ತಂಡದಿಂದ ದೂರ ಉಳಿದ್ದಾರೆ. ಎನ್ನುವುದನ್ನು ಯಾರು ಬಾಯಿ ಬಿಡದೇ ಇದ್ದರು ಈಗ ಅದು ಸಾಬೀತಾಗಿದೆ.

  ಹರ್ಷಿಕಾ ಜೊತೆಗೆ ರ್‍ಯಾಂಪ್ ಮೇಲೆ ಹೆಜ್ಜೆ ಹಾಕಿದ ಅಜಯ್‌ ರಾವ್!

  ನಟ ಅಜಯ್‌ ರಾವ್‌ ಇತ್ತೀಚೆಗಷ್ಟೆ ನಡೆದ 'ಲವ್‌ ಯು ರಚ್ಚು' ಕಾರ್ಯಕ್ರಮಕ್ಕೆ ಗೈರಾಗಿದ್ದರು. ಈಗ ಫ್ಯಾಷನ್‌ ಶೋ ಕಾರ್ಯಕ್ರಮ ಒಂದರಲ್ಲಿ ಭಾಗಿ ಆಗಿ ನಟಿ ಹರ್ಷಿಕಾ ಪೂಣಚ್ಚ ಜೊತೆಗೆ ಹೆಜ್ಜೆ ಹಾಕಿದ್ದಾರೆ. ಈ ವಿಡಿಯೋ ಈಗ ಎಲ್ಲೆಡೆ ವೈರಲ್‌ ಆಗಿದೆ. ಜೊತೆಗೆ 'ಲವ್‌ ಯು ರಚ್ಚು' ಚಿತ್ರದ ಬಗ್ಗೆ ಚರ್ಚೆ ಹುಟ್ಟು ಹಾಕಿದೆ. ಅಜಯ್‌ ರಾವ್‌ ರಿಲೀಸ್‌ಗೆ ರೆಡಿ ಇರುವ ತಮ್ಮ ಸಿನಿಮಾದ ಬಗ್ಗೆ ಮಾತನಾಡದೆ ಬೇರೆ ಕಾರ್ಯಕ್ರಮದಲ್ಲಿ ಖುಷಿಯಿಂದ ಭಾಗಿ ಆಗಿರುವುದು ಚರ್ಚೆಗೆ ಕಾರಣ ಆಗಿದೆ.

  'ಲವ್‌ ಯು ರಚ್ಚು' ವಿವಾದದ ಬಗ್ಗೆ ಸದ್ಯಕ್ಕೆ ಮಾತನಾಡುವುದಿಲ್ಲ: ಅಜಯ್‌ ರಾವ್‌!

  'ಲವ್‌ ಯು ರಚ್ಚು' ವಿವಾದದ ಬಗ್ಗೆ ಸದ್ಯಕ್ಕೆ ಮಾತನಾಡುವುದಿಲ್ಲ: ಅಜಯ್‌ ರಾವ್‌!

  ಸುದ್ದಿಗೋಷ್ಠಿಯಲ್ಲಿ ಭಾಗಿ ಆಗದೇ ಇದ್ದರು ನಟ ಅಜಯ್‌ ರಾವ್‌ ಚಿತ್ರದ ಟ್ರೇಲರ್ ರಿಲೀಸ್ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿಯೂ ಚಿತ್ರದ ಬಗ್ಗೆ ಏನನ್ನೂ ಹಂಚಿಕೊಂಡಿಲ್ಲ. ಇದುವೆ ಅವರು ಚಿತ್ರ ತಂಡದ ಮೇಲೆ ಮುನಿಕೊಂಡಿದ್ದಾರೆ ಎನ್ನುವುದನ್ನು ತೋರಿಸುತ್ತದೆ. ಜೊತೆಗೆ ಈ ಮಾತನಾಡಲು ನಟ ಅಜಯ್‌ ರಾವ್‌ ನಿರಾಕರಿಸಿದ್ದಾರೆ. "ಲವ್‌ ಯು ರಚ್ಚು ಚಿತ್ರ ತಂಡದಿಂದ ದೂರ ಇರುವ ಕಾರಣ ಇದೆ. ಆದರೆ ಅದನ್ನು ಸದ್ಯಕ್ಕೆ ಹೇಳಲು ಸಾಧ್ಯವಿಲ್ಲ" ಎಂದು ಅಜಯ್‌ ರಾವ್‌ ಫಿಲ್ಮೀಬೀಟ್‌ಗೆ ಹೇಳಿಕೆ ನೀಡಿದ್ದಾರೆ. ಅಂದರೆ ಅವರ ತಂಡದಲ್ಲಿ ವೈಮನಸ್ಸು ಹುಟ್ಟಿ ಕೊಂಡಿದೆ ಎನ್ನುವುದು ಬಹಿರಂಗ ಆಗಿದೆ. ಆದರೆ ಅದು ಯಾಕೆ ಎನ್ನುವ ಸ್ಪಷ್ಟ ಕಾರಣ ತಿಳಿಯ ಬೇಕು ಅಷ್ಟೇ.

  ನಿರ್ಮಾಪಕ ಗುರುದೇಶ್‌ ಪಾಂಡೆ- ಅಜಯ್‌ ರಾವ್‌ಗೂ ವೈಮನಸ್ಸು!

  ನಿರ್ಮಾಪಕ ಗುರುದೇಶ್‌ ಪಾಂಡೆ- ಅಜಯ್‌ ರಾವ್‌ಗೂ ವೈಮನಸ್ಸು!

  ಸದ್ಯ ಚಿತ್ರ ತಂಡದ ಆಪ್ತ ಬಳಗದಲ್ಲಿ ಹರಿದಾಡುತ್ತಿರುವ ಸುದ್ದಿ ಅಂದರೆ ನಟ ಅಜಯ್‌ ರಾವ್ ಮತ್ತು ನಿರ್ಮಾಪಕ ಗುರುದೇಶ್‌ ಪಾಂಡೆ ನಡುವೆ ವೈಮನಸ್ಸು ಇದೆ ಎನ್ನುವುದು. ಹಾಗಾಗಿ ಅವರು ಚಿತ್ರದ ಪ್ರಚಾರ ಕಾರ್ಯಗಳಲ್ಲಿ ಭಾಗಿ ಆಗುತ್ತಿಲ್ಲ. ಎನ್ನುವ ಮಾತುಗಳು ಕೇಳಿ ಬರುತ್ತಿವೆ. ಆದರೆ ಚಿತ್ರದ ಸುದ್ದಿಗೋಷ್ಟಿಗೆ ನಟ ಅಜಯ್‌ ರಾವ್‌ ಗೈರಿನ ಬಗ್ಗೆ ಮಾತನಾಡಿದ ನಿರ್ಮಾಪಕ ಗುರುದೇಶ್‌ ಪಾಂಡೆ ಕೊಟ್ಟ ಬೇರೆ ಆಗಿತ್ತು. ಅಜಯ್‌ ರಾವ್‌ ಆರೋಗ್ಯ ಸರಿ ಇಲ್ಲ ಎಂದು ಕಾರ್ಯಕ್ರಮಕ್ಕೆ ಬಂದಿಲ್ಲ ಎಂದಿದ್ದರು.

  ಫೈಟರ್‌ ವಿನೋದ್‌ ಸಾವಿನ ಬಳಿಕ ಹುಟ್ಟಿದ ಮುನಿಸು!

  ಫೈಟರ್‌ ವಿನೋದ್‌ ಸಾವಿನ ಬಳಿಕ ಹುಟ್ಟಿದ ಮುನಿಸು!

  'ಲವ್‌ ಯು ರಚ್ಚು' ಚಿತ್ರದ ಶೂಟಿಂಗ್‌ ವೇಳೆ ನಡೆದ ಅವಘಡದಲ್ಲಿ ವಿನೋದ್‌ ಎನ್ನುವ ಫೈಟರ್ ಸಾವನ್ನಪ್ಪಿದ್ದ. ಈ ಘಟನೆಯ ಬಗ್ಗೆ ಮೊದಲು ಮಾತನಾಡಿದ್ದೇ ನಟ ಅಜಯ್ ರಾವ್. ಈ ಬಗ್ಗೆ ಚಿತ್ರ ತಂಡ ಯಾರೂ ಪ್ರತಿಕ್ರಿಯೆ ನೀಡದೇ ಇದ್ದಾಗ, ನಟ ಅಜಯ್ ರಾವ್‌ ಘಟನೆ ಬಗ್ಗೆ ಮಾತನಾಡಿದ್ದು, ಜೊತೆಗೆ ಮೃತ ವಿನೋದ್‌ ಮನೆಗೆ ಭೇಟಿ ನೀಡಿ ಸಾಂತ್ವನ ಹೇಳುವ ಕೆಲಸ ಮಾಡಿದ್ದರು. ಆದರೆ ಈ ವೇಳೆ ಅಜಯ್‌ ರಾವ್‌ ನೀಡಿದ ಕೆಲವು ಹೇಳಿಕೆಗಳು ನಿರ್ಮಾಪಕರ ಕೋಪಕ್ಕೆ ಕಾರಣ ಆಗಿದೆ ಎನ್ನಲಾಗುತ್ತಿದೆ.

  English summary
  Actor Ajay Rao Did Not Attend Love You Rachchu Movie Event Now He Appear In A Fashionn Show, Know More About The Controversy
  Monday, December 20, 2021, 13:39
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X