ಮುದ್ದು ಮಗಳ ಮೊದಲ ಫೋಟೋ ಹಂಚಿಕೊಂಡ ಅಜಯ್ ರಾವ್
Recommended Video
ಚೆರಿಷ್ಮಾ ಫೋಟೋ ರಿವೀಲ್ ಮಾಡಿದ ಅಜಯ್ ರಾವ್
ನಟ ಅಜಯ್ ರಾವ್ ಇತ್ತೀಚಿಗಷ್ಟೆ ತಂದೆಯಾಗಿದ್ದಾರೆ. ಮುದ್ದು ಕಂದನ ಆಗಮನ ಅಜಯ್ ಕುಟುಂಬದ ಸಂತಸಕ್ಕೆ ಕಾರಣ ಕಾರಣ ಆಗಿದೆ.
ಇದೀಗ ತಮ್ಮ ಮಗಳ ಮೊದಲ ಫೋಟೋವನ್ನು ಅಜಯ್ ರಾವ್ ಅಭಿಮಾನಿಗಳ ಜೊತೆಗೆ ಹಂಚಿಕೊಂಡಿದ್ದಾರೆ. ಪತ್ನಿ ಸ್ವಪ್ನ ಹುಟ್ಟುಹಬ್ಬದ ವಿಶೇಷವಾಗಿ ಮಗಳ ಫೋಟೋವನ್ನು ಶೇರ್ ಮಾಡಿದ್ದಾರೆ.
ಹ್ಯಾಪಿ ಬರ್ತ್ ಡೇ ಸ್ವಪ್ನ ಎಂದು ಪತ್ನಿಗೆ ಶುಭಾಶಯ ಕೋರಿ ಇದೇ ಸಮಯದಲ್ಲಿ ಮಗಳ ಫೋಟೋ ರಿವೀಲ್ ಮಾಡಿದ್ದಾರೆ. ಮುದ್ದು ಕಂದನ ಫೋಟೋಗೆ ಅಭಿಮಾನಿಗಳ ಲೈಕ್ ಸಿಕ್ಕಿದೆ.

23 ನವೆಂಬರ್ 2018 ರಂದು ಸ್ವಪ್ನ ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು. ಪ್ರೀತಿಯ ಮಗಳಿಗೆ ಈ ದಂಪತಿ ಚೆರಿಶ್ಮ ಎಂಬ ಹೆಸರನ್ನು ಇಟ್ಟಿದ್ದರು. ಚೆರಿಶ್ಮ ಎಂದರೆ, ಕಳೆ ಅಥವಾ ವರ್ಚಸು ಎನ್ನುವ ಅರ್ಥ ಬರುತ್ತದೆ.
ಅಂದಹಾಗೆ, ಅಜಯ್ ಹಾಗೂ ಸ್ವಪ್ನ ದಂಪತಿಯ ವಿವಾಹ 2014ರ ಡಿಸೆಂಬರ್ 18 ರಂದು ಕೊಪ್ಪಳದ ದೇವಸ್ಥಾನದಲ್ಲಿ ನಡೆದಿತ್ತು. ಸ್ವಪ್ನ ಕೂಡ ಅಜಯ್ ಅವರ ಹುಟ್ಟೂರಾದ ಹೊಸಪೇಟೆಯವರೇ ಆಗಿದ್ದಾರೆ. ಇವರಿಬ್ಬರದ್ದೂ ಲವ್ ಕಮ್ ಅರೇಂಜ್ಡ್ ಮ್ಯಾರೇಜ್ ಆಗಿದೆ.
English summary
Kannada actor Ajay Rao reveals his cute daughter first photo on the occasion of his wife Swapna birthday.


Click it and Unblock the Notifications