twitter
    For Quick Alerts
    ALLOW NOTIFICATIONS  
    For Daily Alerts

    ಬರಿ ಲಾಕ್‌ಡೌನ್‌ನಿಂದ ಪರಿಸ್ಥಿತಿ ಸುಧಾರಣೆ ಆಗಲ್ಲ, ಅರಿವು ಮೂಡಿಸಬೇಕು: ಅಜಯ್ ರಾವ್

    |

    ಕೊರೊನಾದಿಂದ ದೇಶದ ಪರಿಸ್ಥಿತಿ ತೀರ ಹದಗೆಟ್ಟಿದೆ. ದಿನದಿಂದ ದಿನಕ್ಕೆ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದ್ದು, ಆಸ್ಪತ್ರೆ, ಚಿಕಿತ್ಸೆ ಸಿಗದೆ ಪರದಾಡುತ್ತಿದ್ದಾರೆ. ಸಾವಿರಕ್ಕೂ ಹೆಚ್ಚು ಮಂದಿ ಕೊರೊನಾಗೆ ಬಲಿಯಾಗುತ್ತಿದ್ದಾರೆ. ಸದ್ಯ ಎದುರಾಗಿರುವ ಪರಿಸ್ಥಿತಿ ಜನರಲ್ಲಿ ಆತಂಕ ಮೂಡಿಸಿದೆ.

    Recommended Video

    ಕೊರೊನಾ ಬಗ್ಗೆ ಹೆದರಿಸುವ ಬದಲು ಎದುರಿಸುವುದು ಹೇಗೆ ಅಂತಾ ತಿಳಿಸಿ | Filmibeat Kannada

    ಸಾಕಷ್ಟು ಮಂದಿ ಕೊರೊನಾ ಬಗ್ಗೆ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದ್ದಾರೆ. ಇದೀಗ ಸ್ಯಾಂಡಲ್‌ವುಡ್ ನಟ ಅಜೇಯ್ ರಾವ್ ಕೊರೊನಾ ಬಗ್ಗೆ ಭಯ ಪಡಿಸಬೇಡಿ, ಜಾಗೃತಿ ಮೂಡಿಸಿ ಎಂದು ವಿಡಿಯೋ ಮೂಲಕ ಮನವಿ ಮಾಡಿಕೊಂಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಶೇರ್ ಮಾಡಿದ್ದು, ಇದನ್ನು ಎಲ್ಲರಿಗೂ ತಿಳಿಸಿ ಎಂದಿದ್ದಾರೆ. ಮುಂದೆ ಓದಿ...

    ಕೊರೊನಾ 2ನೇ ಅಲೆ ಭೀಕರವಾಗಿದೆ

    ಕೊರೊನಾ 2ನೇ ಅಲೆ ಭೀಕರವಾಗಿದೆ

    'ಕೊರೊನಾ ಎರಡನೇ ಅಲೆ ಭೀಕರವಾಗಿದೆ. ಎಷ್ಟೋ ಜನ ಪರದಾಡುತ್ತಿದ್ದಾರೆ. ಸಾಕಷ್ಟು ಮಂದಿ ತೊಂದರೆಗಳಲ್ಲಿ ಇದ್ದಾರೆ. ಪಾಸಿಟಿವ್ ಆಗುವ ಸಂಖ್ಯೆಗಳು ಏರುತ್ತಿವೆ. ಸಾಮಾನ್ಯ ವ್ಯಕ್ತಿಗಳು, ಕುಟುಂಬ ಭಯ ಪಟ್ಟಿದ್ದಾರೆ. ಆತಂಕ ಪಟ್ಟಿದ್ದಾರೆ. ನಾನು ಎಲ್ಲರಲ್ಲೂ ಕೇಳಿಕೊಳ್ಳುವುದೇನೆಂದರೆ ಪರಿಸ್ಥಿತಿ ಹೇಗಿದೆ ಎಂದು ಪದೇ ಪದೇ ಜನಕ್ಕೆ ತೋರಿಸಿ ಭಯಪಡಿಸುವುದಕ್ಕಿಂತ ಇದನ್ನ ಎದುರಿಸುವುದು ಹೇಗೆ ಎಂದು ಹೆಚ್ಚು ತೋರಿಬೇಕು' ಎಂದಿದ್ದಾರೆ.

    ಜನರಿಗೆ ಅರಿವು ಮೂಡಿಸಿ

    ಜನರಿಗೆ ಅರಿವು ಮೂಡಿಸಿ

    'ಮಾಸ್ಕ್ ಧರಿಸಿ ಎಂದು ಹೇಳುತ್ತೀರಿ, ಆದರೆ ಹೇಗೆ ಬಳಕೆ ಮಾಡಬೇಕು ಎನ್ನುವುದನ್ನು, ಜೀವನದ ಜೊತೆಗೆ ಕೊರೊನಾವನ್ನು ಹೇಗೆ ಎದುರಿಸಬೇಕು ಎನ್ನುವುದನ್ನು ಜನರಿಗೆ ಮನವರಿಕೆ, ಅರಿವು ಮಾಡಿಕೊಡಬೇಕು' ಎಂದಿದ್ದಾರೆ. ಜೊತೆಗೆ ಮಾಸ್ಕ್ ಹೇಗೆ ಧರಿಸಬೇಕು ಎನ್ನುವುದನ್ನು ಬಗ್ಗೆಯೂ ಅಜೇಯ್ ರಾವ್ ಹೇಳಿದ್ದಾರೆ.

    ಸ್ವಚ್ಛತೆ ಕಾಪಾಡಿ

    ಸ್ವಚ್ಛತೆ ಕಾಪಾಡಿ

    'ಹೊರಗೆ ಹೋಗಿ ವಾಪಸ್ ಮನೆಗೆ ಬಂದಾಗ ಬಟ್ಟೆಗಳನ್ನು ಬಿಸಿ ನೀರಿನಲ್ಲಿ ವಾಶ್ ಮಾಡಿ, ಬಿಸಿ ನೀರಲ್ಲಿ ಸ್ನಾನ ಮಾಡಿ, ತುಂಬಾ ಸ್ವಚ್ಛತೆ ಕಾಪಾಡಬೇಕು' ಎಂದಿದ್ದಾರೆ. ಮಾಸ್ಕ್ ಹೇಗೆ ಧರಿಸಬೇಕು ಎನ್ನುವುದನ್ನು ಜೊತೆಯಲ್ಲಿ ಇದ್ದವರಿಗೂ ಹೇಳಿಕೊಡಿ ಎಂದಿದ್ದಾರೆ.

    ಏನೆ ಸಹಾಯ ಬೇಕಾದರೂ ಕೇಳಿ

    ಏನೆ ಸಹಾಯ ಬೇಕಾದರೂ ಕೇಳಿ

    'ಈ ವಿಚಾರಗಳನ್ನು ಹೆಚ್ಚು ತಲುಪಿಸಿ, ಮಾಧ್ಯಮಗಳಿಗೆ ಕೈ ಮುಗಿದು ಕೇಳಿಕೊಳ್ಳುತ್ತೇನೆ, ಜನರಿಗೆ ಜಾಗೃತಿ ಮೂಡಿಸುವ ವಿಚಾರಗಳನ್ನು ಹೇಳಿ. ನಮ್ಮ ಕಡೆಯಿಂದ ಏನಾದರು ಸಹಾಯ ಬೇಕಾದರೆ, ಖಂಡಿತ ಮಾಡುತ್ತೇವೆ, ಎಲ್ಲರೂ ಒಟ್ಟಿಗೆ ಸೇರಿ ಈ ಪರಿಸ್ಥಿತಿಯನ್ನು ಎದುರಿಸಬೇಕಿದೆ.'

    ಬರಿ ಲಾಕ್‌ಡೌನ್‌ನಿಂದ ಪರಿಸ್ಥಿತಿ ಸುಧಾರಿಸಲ್ಲ

    'ಮನೆಯಲ್ಲೇ ಕುಳಿತು ಈ ಪರಿಸ್ಥಿತಿ ಎದುರಿಸುತ್ತೇವೆ ಎನ್ನುವುದು ಸುಳ್ಳು. ಜೀವನ ಸಾಗಬೇಕು, ಎಲ್ಲರೂ ಕೆಲಸ ಮಾಡಬೇಕು, ದುಡಿಮೆ ಮಾಡಬೇಕು, ಹೊಟ್ಟೆ ಪಾಡು ನಡಿಬೇಕು. ಈ ವಿಚಾರಗಳು ಮನವರಿಕೆಯಾಗಬೇಕು. ಬರಿ ಲಾಕ್‌ಡೌನ್‌, ಕರ್ಫ್ಯೂಯಿಂದ ಈ ಪರಿಸ್ಥಿತಿ ಸುಧಾರಣೆ ಆಗಲ್ಲ. ಎಲ್ಲಾ ಮುನ್ನೆಚ್ಚರಿಕೆ ಕ್ರಮಗಳನ್ನು ಹೇಗೆ ಬಳಸಿಕೊಳ್ಳಬೇಕು ಎನ್ನುವುದು ಪ್ರತಿಯೊಬ್ಬ ಕಾಮನ್ ಮ್ಯಾನ್ ಗೂ ಅರಿವಾಗಬೇಕು. ಭಯಕ್ಕೆ ಒಳಗಾಗಬೇಡಿ' ಎಂದು ಕೇಳಿಕೊಂಡಿದ್ದಾರೆ.

    English summary
    Sandalwood Actor Ajay Rao shares video of awareness of Corona.
    Friday, April 23, 2021, 14:32
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X