For Quick Alerts
  ALLOW NOTIFICATIONS  
  For Daily Alerts

  ವಿಜಯನಗರ ಜಿಲ್ಲೆ ರಚನೆ ಬೆಂಬಲಿಸಿದ ನಟ ಅಜಯ್ ರಾವ್

  |

  ಕರ್ನಾಟಕದ ನೂತನ ಜಿಲ್ಲೆಯಾಗಿ ವಿಜಯನಗರವನ್ನು ಘೋಷಿಸಲು ಮುಂದಾಗಿರುವ ಸರ್ಕಾರದ ನಡೆಯನ್ನು ಚಲನಚಿತ್ರ ನಟ ಅಜಯ್ ರಾವ್ ಬೆಂಬಲಿಸಿದ್ದಾರೆ. ರಾಜ್ಯದ 31ನೇ ಜಿಲ್ಲೆಯಾಗಿ ವಿಜಯನಗರವನ್ನು ರಚಿಸಿರುವುದನ್ನು ಅಜಯ್ ರಾವ್ ಸ್ವಾಗತಿಸಿದ್ದಾರೆ.

  ಈ ಕುರಿತು ಕಂದಾಯ ಇಲಾಖೆಯ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದಿರುವ ಅಜಯ್ ರಾವ್ ಧನ್ಯವಾದ ತಿಳಿಸಿ ಮಂಗಳವಾರ ಅರಣ್ಯ ಸಚಿವ ಆನಂದ್ ಸಿಂಗ್‌ಗೆ ಪತ್ರ ಸಲ್ಲಿಸಿದ್ದಾರೆ.

  ಕರ್ನಾಟಕದ 31ನೇ ಜಿಲ್ಲೆಯಾಗಿ ವಿಜಯನಗರ ಘೋಷಣೆ

  ''ನನ್ನ ಜನ್ಮ ಭೂಮಿ, ನನ್ನ ಸ್ವಂತ ಊರು ಹೊಸಪೇಟೆ, ವಿಜಯ ನಗರ ಜಿಲ್ಲೆ ಎಂದು ಘೋಷಣೆಯಾಗಿರುವುದು ನನಗೆ ಒಂದು ದೊಡ್ಡ ಸಂಭ್ರಮ. ಹಾಗಾಗಿ ನಮ್ಮ ರಾಜ್ಯದ ಅರಣ್ಯ ಮತ್ತು ಪರಿಸರ ಖಾತೆ ಸಚಿವರು, ಹಾಗು ನಮ್ಮ ಜಿಲ್ಲಾ ಉಸ್ತುವಾರಿ ಸಚಿವರಾದ, "ವಿಜಯನಗರ ಜಿಲ್ಲಾ ಕಾರಣೀಭೂತ" ಸನ್ಮಾನ್ಯ ಶ್ರೀ ಆನಂದ ಸಿಂಗ್ ರವರಿಗೆ ನನ್ನ ಬೆಂಬಲ ಹಾಗು ಮೆಚ್ಚುಗೆಯ ಪತ್ರವನ್ನು ನೀಡುವುದರ ಮೂಲಕ ಸಂತಸವನ್ನು ಹಂಚಿಕೊಂಡೆ'' ಎಂದು ಸಾಮಾಜಿಕ ಜಾಲತಾಣದಲ್ಲಿ ಪತ್ರವನ್ನು ಹಂಚಿಕೊಂಡಿದ್ದಾರೆ.

  ಅಂದ್ಹಾಗೆ, ವಿಜಯನಗರವನ್ನು ಜಿಲ್ಲೆಯಾಗಿ ಘೋಷಿಸಬೇಕು ಎಂದು ಅನೇಕರು ಪ್ರತಿಭಟನೆ, ಹೋರಾಟ ಮಾಡಿದ್ದರು. ಮತ್ತೊಂದೆಡೆ ಅಖಂಡ ಬಳ್ಳಾರಿ ಜಿಲ್ಲೆಯನ್ನು ಆಗ್ರಹಿಸಿ ಸಹ ಹೋರಾಟ ನಡೆಯುತ್ತಿತ್ತು.

  ವಿಜಯನಗರ ಜಿಲ್ಲೆ ರಚನೆ: ರೆಡ್ಡಿ-ರಾಮುಲು ಬಳಗದಲ್ಲಿ ಬಿರುಕು?

  02:30 ಕ್ಕೆ ಪೊಲೀಸರು ಬಂದು ಹೀಗೆ ಮಾಡಿದ್ರು ಅಂದ Hrithik Roshan ಮಾಜಿ ಪತ್ನಿ | Filmibeat Kannada

  ಈ ನಡುವೆ ಬಳ್ಳಾರಿಯಿಂದ 6 ತಾಲೂಕುಗಳನ್ನು ಬೇರ್ಪಡಿಸಿ ಹೊಸ ಮ್ಯಾಪ್ ರಚಿಸಲಾಗಿದೆ. ನೂತನ ವಿಜಯನಗರ ಜಿಲ್ಲೆಯಲ್ಲಿ ಹೊಸಪೇಟೆ ಜಿಲ್ಲಾಕೇಂದ್ರವಾಗಿರಲಿದ್ದು, ಹೊಸಪೇಟೆ, ಹಗರಿಬೊಮ್ಮನಹಳ್ಳಿ, ಕಂಪ್ಲಿ, ಕೊಟ್ಟೂರು, ಹೂವಿನ ಹಡಗಲಿ ತಾಲೂಕುಗಳಿರಲಿವೆ.

  English summary
  Kannada Actor Ajay Rao support to newly created Vijayanagara District.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X