For Quick Alerts
  ALLOW NOTIFICATIONS  
  For Daily Alerts

  ಮುದ್ದಾದ ಹೆಣ್ಣು ಮಗುವಿಗೆ ಅಪ್ಪನಾದ ಅಜೇಯ್ ಕೃಷ್ಣ ರಾವ್

  |

  ನಟ ಅಜಯ್ ರಾವ್ ಅವರ 'ತಾಯಿಗೆ ತಕ್ಕ ಮಗ' ಸಿನಿಮಾ ಕಳೆದ ವಾರ ಬಿಡುಗಡೆಯಾಗಿ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಈ ಸಂತೋಷದ ನಡುವೆ ಅಜಯ್ ಬದುಕಿನಲ್ಲಿ ಈಗ ಮರೆಯಲಾಗದ ಒಂದು ಕ್ಷಣ ಎದುರಾಗಿದೆ.

  ಅಜಯ್ ರಾವ್ ಈಗ ತಂದೆ ಆಗಿದ್ದಾರೆ. ಅಜಯ್ ಪತ್ನಿ ಸ್ವಪ್ನ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಈ ಸುಂದರ ಕ್ಷಣವನ್ನು ಸೆಲ್ಫಿ ಫೋಟೋ ಮೂಲಕ ಅಜಯ್ ಸೆರೆ ಹಿಡಿದಿದ್ದಾರೆ. ತಾಯಿ ಮಗು ಇಬ್ಬರೂ ಆರೋಗ್ಯವಾಗಿ ಇದ್ದಾರೆ. ಇನ್ನು ಸಾಮಾಜಿಕ ಜಾಲತಾಣಗಳಲ್ಲಿ ಅವರ ಅಭಿಮಾನಿಗಳು ಅವರಿಗೆ ಶುಭ ಹಾರೈಸುತ್ತಿದ್ದಾರೆ.

  ಸ್ವಪ್ನ ಜೊತೆ ಸಪ್ತಪದಿ ತುಳಿದ ಕೃಷ್ಣ ಅಜೇಯ್ ರಾವ್

  ಅಂದಹಾಗೆ, ಅಜಯ್ ಹಾಗೂ ಸ್ವಪ್ನ ದಂಪತಿಯ ವಿವಾಹ 2014ರ ಡಿಸೆಂಬರ್ 18 ರಂದು ಕೊಪ್ಪಳದ ದೇವಸ್ಥಾನದಲ್ಲಿ ನಡೆದಿತ್ತು. ಸ್ವಪ್ನ ಕೂಡ ಅಜಯ್ ಅವರ ಹುಟ್ಟೂರಾದ ಹೊಸಪೇಟೆಯವರೇ ಆಗಿದ್ದಾರೆ. ಇವರಿಬ್ಬರದ್ದೂ ಲವ್ ಕಮ್ ಅರೇಂಜ್ಡ್ ಮ್ಯಾರೇಜ್ ಆಗಿದೆ.

  ಇನ್ನು, ಅಜಯ್ ರಾವ್ ನಟ ಮಾತ್ರವಲ್ಲದೆ ನಿರ್ಮಾಪಕನಾಗಿ ಕೂಡ ಗುರುತಿಸಿಕೊಂಡಿದ್ದಾರೆ. ತಮ್ಮ ನಟನೆಯ 'ಕೃಷ್ಣ ಲೀಲಾ' ಸಿನಿಮಾವನ್ನು ತಾವೇ ನಿರ್ಮಾಣ ಮಾಡಿದ್ದರು.

  English summary
  Kannada actor Ajay Rao wife Swapna give birth to baby girl.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X