ಮುತ್ತಪ್ಪ ರೈ ಸಾವಿನ ಬಳಿಕ ಜಯರಾಜ್ ಪುತ್ರನ ಫೇಸ್‌ಬುಕ್ ಪೋಸ್ಟ್ ವೈರಲ್

ಮುತ್ತಪ್ಪ ರೈ ಸಾವನ್ನಪ್ಪಿದ್ದಾರೆ. ಕ್ಯಾನ್ಸರ್‌ನಿಂದಾಗಿ ಸುಮಾರು ಎರಡು ವರ್ಷಗಳ ಕಾಲ ಹೋರಾಡಿ ಅಂತಿಮವಾಗಿ ಇಂದು ನಸುಕಿನಲ್ಲಿ ನಗರದ ಮಣಿಪಾಲ್ ಆಸ್ಪತ್ರೆಯಲ್ಲಿ ನಿಧನ ಹೊಂದಿದ್ದಾರೆ.

Recommended Video

ಗಾಡ್ ಫಾದರ್ ಗಳಿಗೇ ಗಾಡ್ ಫಾದರ್ ಮುತ್ತಪ್ಪ ರೈ | Muthappa Rai | Ram Gopa Varma

ಆದರೆ ಮುತ್ತಪ್ಪ ರೈ ದೊಡ್ಡ ಡಾನ್ ಆಗಿ ಬೆಳೆಯಲು ಕಾರಣವಾದ ಮೊದಲ ಕೊಲೆ; ಜಯರಾಜ್‌ ಮರ್ಡರ್ ಹಲವು ಜನರ ನೆನಪಿನಿಂದ ಮಾಸಿಲ್ಲ. ಇಂದಿಗೂ ಅಲ್ಲಲ್ಲಿ ಆ ಘಟನೆ ಬಗ್ಗೆ ಮಾತುಗಳು ಕೇಳಿಬರುತ್ತಲೇ ಇರುತ್ತವೆ.

ಜಯರಾಜ್ ಪುತ್ರ ಫೇಸ್‌ಬುಕ್ ಪೋಸ್ಟ್ ಒಂದನ್ನು ಹಾಕಿದ್ದಾರೆ. ಮುತ್ತಪ್ಪ ರೈ ಹತವಾದ ಬಳಿಕ ಆತನ ಆಜನ್ಮ ವೈರಿಯಾಗಿದ್ದ ಜಯರಾಜ್ ಅವರ ಪುತ್ರ ಹಾಕಿರುವ ಈ ಪೋಸ್ಟ್ ಭಾರಿ ವೈರಲ್ ಆಗಿದೆ. ಮೇ 14 ರ ಮಧ್ಯರಾತ್ರಿ ಈ ಪೋಸ್ಟ್ ಅನ್ನು ಜಯರಾಜ್ ಪುತ್ರ ಹಾಕಿದ್ದಾರೆ.

ಅಜಿತ್ ಜಯರಾಜ್ ಫೇಸ್‌ಬುಕ್ ಪೋಸ್ಟ್

ಅಜಿತ್ ಜಯರಾಜ್ ಫೇಸ್‌ಬುಕ್ ಪೋಸ್ಟ್

ಜಯರಾಜ್ ಪುತ್ರ ಅಜಿತ್ ಜಯರಾಜ್ ಫೇಸ್‌ಬುಕ್‌ನಲ್ಲಿ ಜಯರಾಜ್ ಚಿತ್ರ ಹಂಚಿಕೊಂಡು, 'ಕೆಲವೊಮ್ಮೆ ರಾಜ ಮೂರ್ಖರಿಗೆ ನೆನಪಿಸಬೇಕಾಗುತ್ತದೆ, ತಾನೇಕೆ ರಾಜ ಎಂದು' ಎಂದು ಅಜಿತ್ ಜಯರಾಜ್ ಬರೆದಿದ್ದಾರೆ. ಜೊತೆಗೆ ಅಪ್ಪನ ಚಿತ್ರ ಮತ್ತು ಗರೀಬಿ ಹಟಾವೋ ಪತ್ರಿಕೆಯ ಮುಖಪುಟವನ್ನು ಹಂಚಿಕೊಂಡಿದ್ದಾರೆ.

ಮುತ್ತಪ್ಪ ರೈ ಸಾವಿನ ಬಗ್ಗೆ ಸುಳ್ಳು ಸುದ್ದಿ

ಮುತ್ತಪ್ಪ ರೈ ಸಾವಿನ ಬಗ್ಗೆ ಸುಳ್ಳು ಸುದ್ದಿ

ಮುತ್ತಪ್ಪ ರೈ ಮರಣಹೊಂದಿದ್ದಾರೆ ಎಂಬ ಗಾಳಿ ಸುದ್ದಿ ಹರಿದಾಡುತ್ತಿರುವ ಸಮಯದಲ್ಲಿ ಈ ಪೋಸ್ಟ್ ಅನ್ನು ಅಜಿತ್ ಪೋಸ್ಟ್ ಮಾಡಿದ್ದಾರೆ. ಹಾಗಾಗಿ ಮುತ್ತಪ್ಪ ರೈ ಸಾವನ್ನು ಉದ್ದೇಶಿಸಿಯೇ ಅಜಿತ್ ಈ ಪೋಸ್ಟ್ ಮಾಡಿದ್ದಾರೆ ಎನ್ನಲಾಗುತ್ತಿದೆ. ಆದರೆ ಇದನ್ನು ಅಜಿತ್ ಅಲ್ಲಗಳೆದಿದ್ದಾರೆ.

ಖಾಸಗಿ ಮಾಧ್ಯಮಕ್ಕೆ ಅಜಿತ್ ಸ್ಪಷ್ಟನೆ

ಖಾಸಗಿ ಮಾಧ್ಯಮಕ್ಕೆ ಅಜಿತ್ ಸ್ಪಷ್ಟನೆ

ಖಾಸಗಿ ಮಾಧ್ಯಮದೊಂದಿಗೆ ಮಾತನಾಡಿದ ಅಜಿತ್ ಜಯರಾಜ್, ಮುತ್ತಪ್ಪ ರೈ ಸಾವಿಗೂ ನನ್ನ ಫೇಸ್‌ಬುಕ್ ಪೋಸ್ಟ್‌ಗೂ ಸಂಬಂಧವಿಲ್ಲ. ನಾನು ಅಪ್ಪನ ವಿಡಿಯೋಗಳನ್ನು ನೋಡುತ್ತಿದ್ದೆ. ಅಲ್ಲಿ ಕೆಲವರು ಅಪ್ಪನ ಬಗ್ಗೆ ನೆಗೆಟಿವ್ ಕಮೆಂಟ್ ಹಾಕಿದ್ದರು ಹಾಗಾಗಿ ಈ ಪೋಸ್ಟ್ ಹಾಕಿದೆ ಎಂದು ಸ್ಪಷ್ಟೀಕರಣ ನೀಡಿದ್ದಾರೆ.

ನಾನು ಸಿನಿಮಾದಲ್ಲಿ ಭವಿಷ್ಯ ಹುಡುಕುತ್ತಿದ್ದೇನೆ: ಅಜಿತ್ ಜಯರಾಜ್

ನಾನು ಸಿನಿಮಾದಲ್ಲಿ ಭವಿಷ್ಯ ಹುಡುಕುತ್ತಿದ್ದೇನೆ: ಅಜಿತ್ ಜಯರಾಜ್

ಮುತ್ತಪ್ಪ ರೈ ಸಾವಿನ ಬಗ್ಗೆ ಬೇಸರ ವ್ಯಕ್ತಪಡಿಸಿದ ಅಜಿತ್, 'ಯಾರೇ ಆಗಲಿ ಅದು ಒಂದು ಜೀವ, ಆ ಜೀವ ಮರಳಿ ಬರುವುದಿಲ್ಲ ಎನ್ನುವುದು ಎಲ್ಲರಿಗೂ ಬೇಸರದ ಸಂಗತಿಯೇ' ಎಂದು ಅಜಿತ್ ಹೇಳಿದ್ದಾರೆ. ಅಷ್ಟೆ ಅಲ್ಲ, ತಾವು ಸಿನಿಮಾದಲ್ಲಿ ಭವಿಷ್ಯ ಹುಡುಕುತ್ತಿದ್ದೇನೆ, ಇಲ್ಲಿಯೇ ಇರುತ್ತೇನೆ ಎಂದು ಸಹ ಹೇಳಿದ್ದಾರೆ.

ಕನ್ನಡ ಸಿನಿಮಾಗಳಲ್ಲಿ ನಟಿಸುತ್ತಿರುವ ಜಯರಾಜ್ ಪುತ್ರ

ಕನ್ನಡ ಸಿನಿಮಾಗಳಲ್ಲಿ ನಟಿಸುತ್ತಿರುವ ಜಯರಾಜ್ ಪುತ್ರ

ಅಜಿತ್ ಜಯರಾಜ್ ಕನ್ನಡ ಸಿನಿಮಾಗಳಲ್ಲಿ ತೊಡಗಿಸಿಕೊಂಡಿದ್ದಾರೆ. ರೈಮ್ಸ್ ಚಿತ್ರದಲ್ಲಿ ಅವರು ನಾಯಕರಾಗಿ ಅಭಿಯಿಸಿದ್ದಾರೆ. ತ್ರಾಟಕ ಸಿನಿಮಾದಲ್ಲಿ ಎರಡು ಭಿನ್ನ ಶೇಡ್‌ನ ಪಾತ್ರದಲ್ಲಿ ಅವರು ಅಭಿಯಿಸಿದ್ದರು. ನಾಯಕನಾಗಿ ನಟಿಸುತ್ತಿರುವ ಮೊದಲ ಸಿನಿಮಾ 'ರೈಮ್ಸ್‌'.

More from Filmibeat

English summary
Actor Ajith Jayraj who is son of former don Jayaraj facebook post went viral. He posted about his daddy.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X