»   » 'ಸಿಲ್ಕ್' ಅಕ್ಷಯ್ ಈಗ ಸಖತ್ ಹಾಟ್ ಮಗಾ..!

'ಸಿಲ್ಕ್' ಅಕ್ಷಯ್ ಈಗ ಸಖತ್ ಹಾಟ್ ಮಗಾ..!

Posted By:
Subscribe to Filmibeat Kannada

'ಸಿಲ್ಕ್...ಸಖತ್ ಹಾಟ್ ಮಗಾ' ಚಿತ್ರದಲ್ಲಿ ಪಾಕ್ ತುಪಾಕಿ ವೀಣಾ ಮಲಿಕ್ ಜೊತೆ ರೋಮ್ಯಾನ್ಸ್ ಮಾಡಿದ್ದ ಸಿಲ್ಕ್ ಹುಡುಗ ಅಕ್ಷಯ್ ಇದೀಗ ಸಿಕ್ಸ್ ಪ್ಯಾಕ್ ಬಾಡಿ ಬಿಲ್ಡ್ ಮಾಡಿಕೊಂಡು ಹಾಟ್ ಅಂಡ್ ಹ್ಯಾಂಡ್ಸಮ್ ಆಗಿದ್ದಾರೆ.

ಉತ್ತಮ ಅವಕಾಶಕ್ಕಾಗಿ ಎದುರು ನೋಡುತ್ತಿದ್ದ ಅಕ್ಷಯ್, ಕಳೆದ ಎರಡು ಮೂರು ತಿಂಗಳಿನಿಂದ ಜಿಮ್ ನಲ್ಲಿ ತಮ್ಮ ದೇಹವನ್ನ ದಂಡಿಸುತ್ತಿದ್ದಾರೆ. ಹಗಲು ರಾತ್ರಿ ಅನ್ನದೇ ಬೆವರಿಳಿಸುತ್ತಿರುವ ಅಕ್ಷಯ್, ಇದೀಗ ಕಟ್ಟುಮಸ್ತಾದ ಸಿಕ್ಸ್ ಪ್ಯಾಕ್ ಆಬ್ಸ್ ನಲ್ಲಿ ಮಿಂಚುತ್ತಿದ್ದಾರೆ.

Actor Akshay's six pack look for his new film Honey Bee

ಅಸಲಿಗೆ, ಈ ಹೊಸ ಗೆಟಪ್ ಅವರ ಮುಂದಿನ ಚಿತ್ರ 'ಹನಿಬೀ' ಗಾಗಿ. ಹೆಸರು ಕೇಳ್ತಿದ್ದ ಹಾಗೆ, ಇದು ರೋಮ್ಯಾಂಟಿಕ್ ಲವ್ ಸ್ಟೋರಿ ಅನ್ನುವ ಫೀಲ್ ಬರಬಹುದು. ಆದ್ರೆ, ಇದು ಕಂಪ್ಲೀಟ್ ಕಾಮಿಡಿ ಸಿನಿಮಾ. ಅಕ್ಷಯ್ ಜೊತೆಗೆ ನಿಮ್ಮನ್ನೆಲ್ಲಾ ನಕ್ಕು-ನಲಿಸುವುದಕ್ಕೆ ಚಿತ್ರದಲ್ಲಿ ಚಿಕ್ಕಣ್ಣ ಇರಲಿದ್ದಾರೆ. [ಸೆನ್ಸಾರ್ ನಲ್ಲಿ ಕ್ಲೀನ್ ಸರ್ಟಿಫಿಕೇಟ್ ಪಡೆದ 'ಚಿಲ್ರೆ ಶೋಕಿ']

ಮುಂಬೈ ಬೆಡಗಿ ದಿಶಾ ಪಾಂಡೆ ಅಕ್ಷಯ್ ಗೆ ಜೋಡಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಅಂದ್ಮೇಲೆ ಸಿನಿಮಾದಲ್ಲಿ ಸ್ವಲ್ಪ ಲವ್ವಿ-ಡವ್ವಿ ಇದ್ದೇ ಇರುತ್ತೆ. ಯುವ ಪ್ರತಿಭೆ ಉದಯ್ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಸದ್ಯದಲ್ಲೇ 'ಹನಿಬೀ' ಸೆಟ್ಟೇರಲಿದೆ.

English summary
Kannada Actor Akshay showcases his six pack for his new film 'Honey Bee'. Disha Pandey is roped into play opposite Akshay in the movie which is directed by Uday.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada