»   » ಕನ್ನಡದಲ್ಲಿ ಅಲ್ಲು ಅರ್ಜುನ್ ಗೆ ಯಾವ ಸ್ಟೈಲ್ ಸಿನಿಮಾ ಮಾಡೋಕೆ ಇಷ್ಟ?

ಕನ್ನಡದಲ್ಲಿ ಅಲ್ಲು ಅರ್ಜುನ್ ಗೆ ಯಾವ ಸ್ಟೈಲ್ ಸಿನಿಮಾ ಮಾಡೋಕೆ ಇಷ್ಟ?

Posted By:
Subscribe to Filmibeat Kannada

ಸ್ಟೈಲಿಶ್ ಸ್ಟಾರ್ ಅಲ್ಲು ಅರ್ಜುನ್ ಗೆ ಹೈದ್ರಾಬಾದ್ ನಲ್ಲಿ ಮಾತ್ರವಲ್ಲ, ಕರ್ನಾಟಕದಲ್ಲು ಹೆಚ್ಚು ಅಭಿಮಾನಿಗಳಿದ್ದಾರೆ. ಸ್ಯಾಂಡಲ್ ವುಡ್ ಸ್ಟಾರ್ ಗಳ ಜೊತೆ ಸ್ನೇಹ ಬಾಂಧವ್ಯವಿದೆ. ಬೆಂಗಳೂರಿಗೆ ಆಗಾಗ ಸಿನಿಮಾ ಪ್ರಮೋಷನ್ ಗೆ ಬರ್ತಾನೆ ಇರ್ತಾರೆ.

ಹೀಗೆ, ಕನ್ನಡಿಗರ ಜೊತೆ ಒಂದಲ್ಲ ಒಂದು ರೀತಿಯಲ್ಲಿ ನಂಟು ಹೊಂದಿರುವ ಅಲ್ಲು ಅರ್ಜುನ್ ಕನ್ನಡದಲ್ಲಿ ಅಭಿನಯಿಸಿದ್ರೆ ಹೇಗಿರುತ್ತೆ ಅಲ್ವಾ...! ಇಂತಹದೊಂದು ಪ್ರಶ್ನೆ ಇತ್ತೀಚೆಗೆ ನಡೆದ 64ನೇ ಫಿಲ್ಮ್ ಫೇರ್ ಪ್ರಶಸ್ತಿ ಸಮಾರಂಭದಲ್ಲಿ ಕೇಳಿಬಂದಿದೆ.

Actor Allu Arjun Like to Do Mass Style Kannada cinema

RJ Rapid ರಶ್ಮಿ, ನಟ ಅಲ್ಲು ಅರ್ಜುನ್ ಅವರಿಗೆ, ಒಂದು ವೇಳೆ ಕನ್ನಡದಲ್ಲಿ ಅವಕಾಶ ಸಿಕ್ಕಿದ್ರೆ ಅಭಿನಯಿಸ್ತಿರಾ? ಮಾಡಿದ್ರು ಯಾವ ಸ್ಟೈಲ್ ಸಿನಿಮಾ ಮಾಡ್ತಿರಾ ಎಂದು ಕೇಳಿದ್ದಾರೆ, Rapid ರಶ್ಮಿ ಪ್ರಶ್ನೆಗೆ ನಗುನಗುತ್ತಾ ಉತ್ತರಿಸಿದ ಅಲ್ಲು ಅರ್ಜುನ್ ''ಖಂಡಿತಾ ಮಾಡ್ತಿನಿ, ಕನ್ನಡದಲ್ಲಿ ಮಾಸ್ ಸ್ಟೈಲ್ ಸಿನಿಮಾ ಮಾಡಲು ಇಷ್ಟಪಡುತ್ತೇನೆ ಎಂದಿದ್ದಾರೆ.

ಈ ಉತ್ತರ ಕೇಳಿದ ಮೇಲೆ ಯಾರಾದ್ರು ನಿರ್ಮಾಪಕರು ಅಲ್ಲು ಅರ್ಜುನ್ ಅವರನ್ನ ಕನ್ನಡಕ್ಕೆ ಕರೆತರುವ ಪ್ರಯತ್ನ ಪಟ್ಟರು ಪಡುಬಹುದು. ಇನ್ನು 2017ನೇ ಸಾಲಿನ ಫಿಲ್ಮ್ ಪೇರ್ ಪ್ರಶಸ್ತಿ ಸಮಾರಂಭದಲ್ಲಿ ನಟ ಅಲ್ಲು ಅರ್ಜುನ್ ಗೆ ವಿಶೇಷ ಜ್ಯೂರಿ ಪ್ರಶಸ್ತಿ ನೀಡಲಾಯಿತು.

English summary
Telugu Actor Allu Arjun Like to Do Mass Style of cinema in Kannada Industry

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada