ನಟ ಶಿವರಾಜ್‌ಕುಮಾರ್‌ ಚಿತ್ರಕ್ಕೆ ಅಲ್ಲು ಅರ್ಜುನ್‌ ಶುಭಾಶಯ

ಕೊರೊನಾ ಬಳಿಕ ಸಿನಿಮಾರಂಗದ ಸಿದ್ಧ ಸೂತ್ರಗಳು ಬದಲಾದಂತೆ ಇದೆ. ಸಿನಿಮಾ ರಂಗದಲ್ಲಿ ಈಗ ಹೊಸ ಪರ್ವವೇ ಶುರುವಾಗಿದೆ ಎಂದು ಹೇಳಬಹುದು. ಕೊರೊನಾ ಸುಳಿಯುವುದಕ್ಕೂ ಮೊದಲು ಚಿತ್ರರಂಗದಲ್ಲಿ ಇದ್ದಂತಹ ಒಂದಷ್ಟು ವಿಚಾರಗಳು ಈಗ ಅಕ್ಷರಶಃ ಬದಲಾಗುತ್ತಿದೆ. ಬಣ್ಣದ ಲೋಕದ ಮಂದಿ ಒಂದಿಷ್ಟು ಬದಲಾವಣೆಗಳನ್ನು ತಮ್ಮಲ್ಲಿಯೇ ಮಾಡಿಕೊಂಡಿದ್ದಾರೆ. ಈ ಬದಲಾವಣೆಗೆ ಈಗ ಸಾಕ್ಷಿ ಆಗಿರುವುದು ನಟ ಅಲ್ಲು ಅರ್ಜುನ್. ಅಲ್ಲು ಅರ್ಜುನ್ ಹೊಸ ಹೇಳಿಕೆಗಳು ಹೊಸ ಭರವಸೆಯ ಆರಂಭ ಎನ್ನುವ ಸೂಚನೆ ಕೊಟ್ಟಿದೆ.

ತೆಲುಗಿನ 'ವರುಡು ಕಾವಾಲೇನು' ಚಿತ್ರದ ಪ್ರೀ-ರಿಲೀಸ್‌ ಕಾರ್ಯಮದಲ್ಲಿ ನಟ ಅಲ್ಲು ಅರ್ಜುನ್ ಮಾತನಾಡಿದ್ದಾರೆ. ವೇದಿಕೆಯ ಮೇಲೆ ಅಲ್ಲು ನೀಡಿರುವ ಹೇಳಿಕೆ ಸದ್ಯ ವೈರಲ್‌ ಆಗಿದೆ. ಸಿನಿಮಾರಂಗದ ಒಳಗಿನ ಬದಲಾವಣೆಯನ್ನು ಅಲ್ಲು ಅರ್ಜುನ್ ಎತ್ತಿ ತೋರಿಸಿದ್ದಾರೆ. ಸಿನಿಮಾ ರಂಗಕ್ಕೆ ಸೀಮಿತವಾಗಿರೋ ಎಲ್ಲೆಗಳನ್ನು ಸ್ಟಾರ್‌ ನಟರು ಮೀರಿದ್ದಾರೆ. ಪರಭಾಷೆ ಎನ್ನುವ ಭೇದವಿಲ್ಲದೆ ಮತ್ತೊಂದು ಸಿನಿಮಾದ ಬಗ್ಗೆ ಹಮ್ಮು ಬಿಮ್ಮು ಇಲ್ಲದೆ ಮಾತನಾಡುತ್ತಿದ್ದಾರೆ. ಅಲ್ಲು ಅರ್ಜುನ್ ಸದ್ಯ ಶಿವರಾಜ್ ಕುಮಾರ್ ಅಭಿನಯದ ಕನ್ನಡದ ಭಜರಂಗಿ 2 ಸಿನಿಮಾದ ಬಗ್ಗೆ ಮಾತನಾಡಿ ಸುದ್ದಿಯಾಗಿದ್ದಾರೆ.

ಜೈ ಭಜರಂಗಿ ಎಂದ ನಟ ಅಲ್ಲು ಅರ್ಜುನ್!

'ವರುಡು ಕಾವಾಲೇನು' ಚಿತ್ರದ ಪ್ರಮೋಶನ್ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಅಲ್ಲು ಅರ್ಜುನ್ ಸಿನಿಮಾ ರಂಗದ ಪರಿಸ್ಥಿತಿ ಹೇಗಿದೆ. ಸಿನಿಮಾ ರಂಗ ಚೇತರಿಸಿ ಕೊಳ್ಳಲು ಏನೆಲ್ಲ ಮಾಡುತ್ತಿದೆ. ಅನ್ನುವ ಬಗ್ಗೆ ಮಾತನಾಡಿದ್ದರೆ. ಇನ್ನು ಇದೇ ಸಂದರ್ಭದಲ್ಲಿ ಕರ್ನಾಟಕದಲ್ಲಿ ಚಿತ್ರಮಂದಿರಗಳು ಭರ್ತಿಯಾಗುತ್ತಿವೆ ಇಲ್ಲಿ 100% ಆಕ್ಯೂಪೆನ್ಸಿಗೆ ಅವಕಾಶ ನೀಡಿರುವ ಬಗ್ಗೆಯೂ ಅಲ್ಲು ಅರ್ಜುನ್ ಮಾತನಾಡಿದರು. ಜೊತೆಗೆ ರಿಲೀಸ್‌ಗೆ ರೆಡಿ ಆಗಿರುವ ಶಿವರಾಜ್ ಕುಮಾರ್ ಅಭಿನಯದ ಭಜರಂಗಿ 2 ಚಿತ್ರಕ್ಕೆ ಒಳ್ಳೆದಾಗಲಿ ಎಂದು ಅಲ್ಲು ಅರ್ಜುನ್‌ ಶುಭ ಕೋರಿದ್ದಾರೆ.

Actor Allu Arjun Wish Good Luck To Bhajarangi2 Movie

ಇದೇ ವೇಳೆ ಕನ್ನಡ ಸಿನಿಮಾದ ಜೊತೆಗೆ ಬಾಲಿವುಡ್‌ ಚಿತ್ರದ ಬಗ್ಗೆಯೂ ಅಲ್ಲು ಅರ್ಜುನ್ ಪ್ರಸ್ತಾಪಿಸಿದ್ದಾರೆ. ಬಾಲಿವುಡ್‌ನ ಸೂರ್ಯವಂಶಿ ಸಿನಿಮಾ ಕೂಡ ದೊಡ್ಡ ಸಕ್ಸಸ್‌ ಕಾಣಲಿ ಎಂದು ಅಲ್ಲು ಅರ್ಜುನ್ ಶುಭಕೋರಿದರು. ಅಲ್ಲು ಅರ್ಜುನ್ ಮಾತಿಗೆ ಫಿದಾ ಆದ ನಿರ್ದೇಶಕ ರೋಹಿತ್‌ ಶೆಟ್ಟಿ ಮತ್ತು ನಿರ್ಮಾಪಕ ಕರಣ್‌ ಜೋಹರ್‌ ಟ್ವೀಟ್‌ ಮೂಲಕ ಪ್ರತಿಕ್ರಿಯೆ ನೀಡಿದ್ದಾರೆ. ಜೊತೆಗೆ ಅಲ್ಲು ಅರ್ಜುನ್‌ ಪುಷ್ಪ ಸಿನಿಮಾಗೆ ಶುಭ ಕೋರಿದ್ದಾರೆ.

ಮೊದಲೆಲ್ಲಾ ಸಿನಿಮಾ ರಂಗದಲ್ಲಿ ಈ ರೀತಿಯ ಬೆಳವಣಿಗೆ ತೀರಾ ಕಡಿಮೆ ಇತ್ತು. ಆದರೆ, ಕೊರೊನಾ ಬಂದ ನಂತರ ಬದಲಾವಣೆಗಳು ಆಗುತ್ತಿರುವುದಂತೂ ಸತ್ಯ. ಸಿನಿಮಾ ಮಂದಿ ತಮ್ಮ ಸುತ್ತಲೂ ತಾವೇ ಹಾಕಿ ಕೊಂಡಿದ್ದ ಒಂದಷ್ಟು ಸಿದ್ಧ ಸೂತ್ರಗಳನ್ನು ಮುರಿದು ಹೊರ ಬರುತ್ತಿದ್ದಾರೆ. ನಟ ಅಲ್ಲು ಅರ್ಜುನ್ ಇಂಡಿಯಾದ ಟಾಪ್ ಸ್ಟಾರ್ ಗಳಲ್ಲಿ ಒಬ್ಬರು. ಅಲ್ಲು ಅರ್ಜುನ್ ಗೆ ಪ್ರಪಂಚದಾದ್ಯಂತ ತನ್ನದೇ ಅಭಿಮಾನಿ ಬಳಗ ಇದೆ. ಅಲ್ಲು ಅರ್ಜುನ್ ಒಂದು ಒಳ್ಳೆ ಬದಲಾವಣೆಗೆ ಸಾಕ್ಷಿ ಆಗಿದ್ದಾರೆ ಅಂತಲೇ ಹೇಳಬಹುದು. ಅಲ್ಲು ಅರ್ಜುನ್ ಭಜರಂಗಿಗೆ ಶುಭ ಕೋರಿರುವುದು ಕನ್ನಡ ಪ್ರೇಕ್ಷಕರಲ್ಲಿ ಎಲ್ಲಿಲ್ಲದ ಸಂತಸ ತಂದಿದೆ. ಜೊತೆಗೆ ಭಜರಂಗಿ ಚಿತ್ರದ ಬಗ್ಗೆ ಅಲ್ಲು ಅರ್ಜುನ್ ಮಾತನಾಡಿರುವ ವಿಡಿಯೋ ಕೂಡ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.

Actor Allu Arjun Wish Good Luck To Bhajarangi2 Movie

ಪುಷ್ಪ ರಿಲೀಸ್ ಗಾಗಿ ಎದುರುನೋಡ್ತಾ ಇರುವ ಅಲ್ಲು ಅರ್ಜುನ್.

ಇನ್ನು ಅಲ್ಲು ಅರ್ಜುನ ಅಭಿನಯದ ಪುಷ್ಪ ಸಿನಿಮಾದಲ್ಲಿ ಕನ್ನಡತಿ ರಶ್ಮಿಕಾ ಮಂದಣ್ಣ ಅಭಿನಯಿಸಿದ್ದಾರೆ. ಈ ಸಿನಿಮಾ ಇದೇ ಡಿಸೆಂಬರ್ 17ಕ್ಕೆ ರಿಲೀಸ್‌ ಆಗುತ್ತಿದೆ. ಪುಷ್ಪ ಸಿನಿಮಾ ಬಹು ಭಾಷೆಯಲ್ಲಿ ತೆರೆಗೆ ಬರುತ್ತ ಇದೆ. ಕರ್ನಾಟಕದಲ್ಲಿ ಬೇರೆ ಭಾಷೆಯ ಜೊತೆ ಕನ್ನಡದಲ್ಲಿ ಪುಷ್ಪ ರಿಲೀಸ್‌ ಆಗುತ್ತಿದೆ. ಕನ್ನಡದಲ್ಲಿ ಕೂಡ ಸಿನಿಮಾವನ್ನು ಏಕಕಾಲಕ್ಕೆ ರಿಲೀಸ್ ಮಾಡಲಾಗುತ್ತದೆ. ಕರ್ನಾಟಕದಲ್ಲೂ ಅಲ್ಲು ಅರ್ಜುನ್ ಗೆ ದೊಡ್ಡ ಫ್ಯಾನ್ ಫಾಲೋಯಿಂಗ್ ಇದೆ. ಹಾಗಾಗಿ ಇಲ್ಲಿ ಕನ್ನಡ ಮತ್ತು ತೆಲುಗು ಎರಡು ವರ್ಷನ್‌ಗಳಲ್ಲೂ ಕೂಡ ಚಿತ್ರ ರಿಲೀಸ್‌ ಆಗಲಿದೆ. 'ಪುಷ್ಪ' ಚಿತ್ರ ವಿಶ್ವ ಮಟ್ಟದಲ್ಲಿ ಸದ್ದು ಮಾಡುವುದಕ್ಕೆ ರೆಡಿಯಾಗಿರುವ ಸಿನಿಮಾ. ಸಿನಿ ಪ್ರೇಕ್ಷಕರಲ್ಲಿ ಪುಷ್ಪ ಎಲ್ಲಿಲ್ಲದ ನಿರೀಕ್ಷೆ ಮೂಡಿಸಿದೆ. ಸುಕುಮಾರ್ ಮತ್ತು ಅಲ್ಲು ಅರ್ಜುನ್ ಕಾಂಬಿನೇಷನ್ ನಲ್ಲಿ ಬರುತ್ತಿರುವ ಮೂರನೇ ಸಿನಿಮಾ ಇದು. ಈಗಾಗಲೇ ರಿಲೀಸ್ ಆಗಿರುವ ಪುಷ್ಪ ಚಿತ್ರದ ಒಂದು ತುಣುಕುಗಳು ಸಿನಿಮಾ ಇತಿಹಾಸ ಬರೆಯುವುದು ಪಕ್ಕಾ ಎನ್ನುವ ಭರವಸೆ ಮೂಡಿಸಿದೆ. ಪುಷ್ಪ ಎರಡು ಭಾಗಗಳಲ್ಲಿ ತೆರೆಗೆ ಬರುತ್ತಿದೆ.

More from Filmibeat

English summary
Telugu Actor Allu Arjun Talk About Shivaraj Kumar Starerr Kannada Movie Bhajarangi2,
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X