ಈ ಭಾವನಾತ್ಮಕ ಫೋಟೋ ಹಿಂದಿನ ಛಾಯಾಗ್ರಾಹಕ ಇವರೇ

ನಿನ್ನೆಯಿಂದ ಸಾಮಾಜಿಕ ಜಾಲತಾಣಗಳಲ್ಲಿ ಒಂದು ಫೋಟೋ ಸಾಕಷ್ಟು ವೈರಲ್ ಆಗುತ್ತಿದೆ. ಫೇಸ್ ಬುಕ್, ವಾಟ್ಸ್ ಅಪ್, ಟ್ವಿಟ್ಟರ್ ಹೀಗೆ ಎಲ್ಲಿ ನೋಡಿದರೂ ಆ ಫೋಟೋ ಕಣ್ಣಿಗೆ ಬೀಳುತ್ತದೆ.

ರೆಬಲ್ ಸ್ಟಾರ್ ಅಂಬರೀಶ್ ಅಂತಿಮ ದರ್ಶನದ ವೇಳೆ ತೆಗೆದ ಆ ಒಂದು ಫೋಟೋ ಎಲ್ಲರ ಮನ ಕಲಕುವಂತೆ ಇದೆ. ತಂದೆ ಅಂಬರೀಶ್ ಅವರ ಮೃತದೇಹವನ್ನು ಮಗ ಅಭಿಷೇಕ್ ನೋಡುತ್ತಿದ್ದರೆ, ಅದೇ ರೀತಿ ತಾಯಿ ಸುಮಲತಾ ಮಗನನ್ನು ನೋಡುತ್ತಿದ್ದಾರೆ. ಈ ಫೋಟೋ ತುಂಬ ಭಾವನಾತ್ಮಕವಾಗಿದ್ದು, ಬದುಕಿನ ಕಥೆಯನ್ನು ಹೇಳುತ್ತಿದೆ. ಒಬ್ಬೊಬ್ಬರು ಒಂದೊಂದು ರೀತಿ ಈ ಫೋಟೋವನ್ನು ವರ್ಣಿಸುತ್ತಿದ್ದಾರೆ.

ಅಂದಹಾಗೆ, ಇಂತಹ ಮನಕಲಕುವ ಫೋಟೋವನ್ನು ಕ್ಲಿಕ್ ಮಾಡಿದವರು ಯಾರು? ಎನ್ನುವುದು ಅನೇಕರಿಗೆ ತಿಳಿದಿಲ್ಲ. ಈ ಫೋಟೋ ಹಿಂದಿನ ಛಾಯಾಗ್ರಾಹಕ ರಂಜು. ಮುಂದಿದೆ ಓದಿ...

ಛಾಯಾಗ್ರಾಹಕ ರಂಜು ಗೌಡ

ಛಾಯಾಗ್ರಾಹಕ ರಂಜು ಗೌಡ

ಅಂಬರೀಶ್ ಅವರ ಈ ಭಾವನಾತ್ಮಕ ಫೋಟೋವನ್ನು ಸೆರೆ ಹಿಡಿದವರು ಛಾಯಾಗ್ರಾಹಕ ರಂಜು ಗೌಡ. ಕಳೆದ ಆರುವರೆ ವರ್ಷದಿಂದ ಇವರು ಪ್ರಜಾವಾಣಿ ಪತ್ರಿಕೆಯಲ್ಲಿ ಕೆಲಸ ಮಾಡುತ್ತಿದ್ದಾರೆ. ಫೋಟೋ ಜರ್ನಲಿಸಂ ಓದಿದ ಇವರು ಮೊದಲು ಕೆಲಸ ಶುರು ಮಾಡಿದ್ದು, ಇದೆ ಸಂಸ್ಥೆಯಲ್ಲಿ.

ಎಲ್ಲ ಕಡೆ ವೈರಲ್

ಎಲ್ಲ ಕಡೆ ವೈರಲ್

ರಂಜು ಗೌಡ ತೆಗೆದ ಫೋಟೋ ಎಲ್ಲ ಕಡೆ ವೈರಲ್ ಆಗಿದೆ. ಈ ಬಗ್ಗೆ 'ಫಿಲ್ಮಿಬೀಟ್ ಕನ್ನಡ' ಜೊತೆಗೆ ಮಾತನಾಡಿರುವ ರಂಜಿತ್ ''ನನ್ನ ಫೋಟೋ ಸೋಷಿಯಲ್ ಮೀಡಿಯಾದಲ್ಲಿ ತುಂಬ ಹರಿದಾಡುತ್ತಿದೆ. ಕೆಲವು ಬೇರೆ ಬೇರೆ ಪೇಪರ್ ನಲ್ಲಿ ಸಹ ಈ ಫೋಟೋವನ್ನು ಬಳಸಿಕೊಂಡಿದ್ದಾರೆ'' ಎಂದಿದ್ದಾರೆ.

ಭಾವನೆಯನ್ನು ಸೆರೆ ಹಿಡಿದೆ

ಭಾವನೆಯನ್ನು ಸೆರೆ ಹಿಡಿದೆ

''ನಿನ್ನೆ ಎಲ್ಲರೂ ಅಂಬರೀಶ್ ಅವರ ಫೋಟೋ ತಗೆಯುತ್ತಿದ್ದರು. ನಾನು ಅವರ ಮೂಡ್ ಹೇಗಿರುತ್ತದೆ ಅಂತ ಗಮನಿಸಿದೆ. ನಾನು ಸ್ವಲ್ಪ ಜೂಮ್ ಮಾಡಿ ಕ್ಲಿಕ್ ಮಾಡಿದೆ. ಅವರ ಭಾವನೆಗಳು ಫೋಟೋದಲ್ಲಿ ಸೆರೆಯಾಯ್ತು. ಐವತ್ತು ಫೋಟೋ ಕ್ಲಿಕ್ ಮಾಡಿ, ಕೊನೆಗೆ ಈ ಫೋಟೋ ಓಕೆ ಮಾಡಿದೆ.'' ಎಂದು ರಂಜು ವಿವರಿಸಿದರು.

ಅದರ ಬಗ್ಗೆ ತುಂಬ ಜನ ಬರೆಯುತ್ತಿದ್ದಾರೆ

ಅದರ ಬಗ್ಗೆ ತುಂಬ ಜನ ಬರೆಯುತ್ತಿದ್ದಾರೆ

''ಅಪ್ಪನನ್ನು ಮಗ ನೋಡುತ್ತಿದ್ದರೆ, ಅದೇ ವೇಳೆಗೆ ಮಗನನ್ನು ಅಮ್ಮ ನೋಡುತ್ತಿರುವ ದೃಶ್ಯ ಮನಸ್ಸಿಗೆ ಹತ್ತಿರ ಆಗುವಂತೆ ಇತ್ತು. ಅದಕ್ಕೆ ಫೋಟೋ ಕ್ಲಿಕ್ ಮಾಡಿದೆ. ತುಂಬ ಜನ ಹುಡುಗಿರು ತಮ್ಮ ತಂದೆ ತೀರಿಕೊಂಡ ಬಗ್ಗೆ ಈ ಫೋಟೋ ನೋಡಿ ಬರೆದಿದ್ದಾರೆ. ನನ್ನ ಸ್ನೇಹಿತ ಇದರ ಬಗ್ಗೆ ಒಂದು ಸುಂದರ ಕವನ ಬರೆದಿದ್ದಾನೆ. ನಿನ್ನೆ ರಾತ್ರಿ ಮೂರು ಗಂಟೆ ವರೆಗೆ ಎಲ್ಲರೂ ಬರೆದಿದ್ದನ್ನು ಓದಿದ್ದೇನೆ.'' ಎಂದು ಫೋಟೋ ಹಿಂದಿನ ಕಥೆ ಹೇಳಿದರು ರಂಜು ಗೌಡ.

More from Filmibeat

English summary
Actor Ambareesh death journey photo going viral. Kannada Actor, Former Minister, Congress Politician Ambareesh (66) passed away on November 24th in Bengaluru.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X