»   » ಅಂಬಿ ಮಾಮನ ಆರೋಗ್ಯದಲ್ಲಿ ಚೇತರಿಕೆ: ಸುದೀಪ್

ಅಂಬಿ ಮಾಮನ ಆರೋಗ್ಯದಲ್ಲಿ ಚೇತರಿಕೆ: ಸುದೀಪ್

Posted By:
Subscribe to Filmibeat Kannada

ಶ್ವಾಸಕೋಶದ ಸೋಂಕಿನಿಂದ ಬಳಲುತ್ತಿರುವ ನಟ ಹಾಗೂ ವಸತಿ ಸಚಿವ ಅಂಬರೀಶ್ ಅವರ ಆರೋಗ್ಯದಲ್ಲಿ ದಿನದಿಂದ ದಿನಕ್ಕೆ ಚೇತರಿಕೆ ಕಂಡುಬರುತ್ತಿದೆ. ಮಂಗಳವಾರ (ಫೆ.25) ಬೆಂಗಳೂರು ಮಿಲ್ಲರ್ಸ್ ರಸ್ತೆಯ ವಿಕ್ರಂ ಆಸ್ಪತ್ರೆಗೆ ಭೇಟಿ ನೀಡಿದ ಕಿಚ್ಚ ಸುದೀಪ್ ಅವರು ಅವರ ಆರೋಗ್ಯ ವಿಚಾರಿಸಿದರು.

ಅಂಬರೀಶ್ ಅವರ ಪತ್ನಿ ಸುಮಲತಾ ಅವರ ಬಳಿ ಆರೋಗ್ಯ ವಿಚಾರಿಸಿದ ಸುದೀಪ್ ಬಳಿಕ ಪ್ರತಿಕ್ರಿಯಿಸಿ, ಸದ್ಯದಲ್ಲೇ ಅಂಬರೀಶ್ ಅವರನ್ನು ಐಸಿಯೂನಿಂದ ಜನರಲ್ ವಾರ್ಡ್ ಗೆ ಸ್ಥಳಾಂತರಿಸಲಾಗುತ್ತದೆ. ಅವರ ಆರೋಗ್ಯದಲ್ಲಿ ಇನ್ನಷ್ಟು ಚೇತರಿಕೆ ಕಂಡುಬಂದಿದೆ ಎಂದರು. [ನಟ ಅಂಬರೀಶ್ ಬಗ್ಗೆ ನಿಮಗೆ ಗೊತ್ತಿಲ್ಲದ ಸಂಗತಿಗಳು]


ಅಂಬರೀಶ್ ಅವರು ಐಸಿಯೂನಲ್ಲಿರುವುದರಿಂದ ಇಲ್ಲಸಲ್ಲದ ವದಂತಿಗಳನ್ನು ಹಬ್ಬಿಸಬೇಡಿ ಎಂದು ವಿನಂತಿಸಿಕೊಂಡರು. ಈ ಬಗ್ಗೆ ಸುದೀಪ್ ಟ್ವೀಟಿಸಿದ್ದು, "ಅಂಬರೀಶ್ ಮಾಮನ ಆರೋಗ್ಯದಲ್ಲಿ ಸಾಕಷ್ಟು ಚೇತರಿಕೆ ಕಂಡುಬಂದಿದೆ. ಅವರು ಎದ್ದು ಓಡಾಡಲು, ಎಂದಿನಂತಾಗಲು ಸ್ವಲ್ಪ ಸಮಯ ಬೇಕಾಗಿದೆ ಅಷ್ಟೇ" ಎಂದಿದ್ದಾರೆ.

ಇನ್ನೊಂದು ಕಡೆ ಅಂಬರೀಶ್ ಅವರು ಆದಷ್ಟು ಬೇಗ ಚೇತರಿಸಿಕೊಳ್ಳಲಿ ಎಂದು ಹೋಮ ಹವನ ಪೂಜೆ ಪ್ರಾರ್ಥನೆಗಳು ನಾಡಿನಾದ್ಯಂತ ನಡೆಯುತ್ತಿವೆ. ಅಂಬರೀಶ್ ಅಭಿಮಾನಿಗಳು ಅವರ ಆದಷ್ಟು ಬೇಗ ಎಲ್ಲರ ಮುಂದೆ ಬಂದು ಮಾತನಾಡಿದರೆ ಸಾಕು ಎಂಬಂತಿದ್ದಾರೆ.

ಇನ್ನು ವಿಕ್ರಂ ಆಸ್ಪತ್ರೆಯ ವೈದ್ಯರು ನಿಯಮಿತವಾಗಿ ಅವರ ಆರೋಗ್ಯದ ಬಗ್ಗೆ ವಿವರಗಳನ್ನು ನೀಡುತ್ತಲೇ ಇದ್ದಾರೆ. ಅಂಬರೀಶ್ ಅವರ ದೇಹದಿಂದ 10 ರಿಂದ 11 ಲೀಟರ್ ನೀರು ಹೊರತೆಗೆಯಲಾಗಿದ್ದು ಇನ್ನೂ 8 ಲೀಟರ್ ನೀರನ್ನು ಹೊರತೆಗೆಯಬೇಕಾಗಿದೆ. (ಒನ್ಇಂಡಿಯಾ ಕನ್ನಡ)
<blockquote class="twitter-tweet blockquote" lang="en"><p>Ambrish mama's health is mch better n is improving a lot...it's jus a matter of time bfr he walks out hale n healthy...</p>— Kichcha Sudeepa (@KicchaSudeep) <a href="https://twitter.com/KicchaSudeep/statuses/438003801287450624">February 24, 2014</a></blockquote> <script async src="//platform.twitter.com/widgets.js" charset="utf-8"></script>

English summary
Kichcha Sudeep tweets about Rebel Star Ambareesh, "Ambrish mama's health is mch better n is improving a lot...it's jus a matter of time bfr he walks out hale n healthy..."
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada