ಕಾವೇರಮ್ಮನ ಮಡಿಲು ಸೇರಿದ ಅಂಬಿ ಅಸ್ತಿ
Recommended Video

ನಟ ಅಂಬರೀಶ್ ಅವರ ಮರಣದ ನಂತರದ ವಿಧಿ ವಿಧಾನ ಕಾರ್ಯಗಳು ಇಂದು ನಡೆಯುತ್ತಿದೆ. ಶ್ರೀರಂಗಪಟ್ಟಣದ ಸಂಗಮ ಕ್ಷೇತ್ರದಲ್ಲಿ ಇಂದು ಚಿತಾ ಬಸ್ಮವನ್ನು ವಿಸರ್ಜನೆ ಮಾಡಲಾಯಿತು.
ಕಾವೇರಿ ನೀರು ಕುಡಿದು ಬೆಳೆದ ಅಂಬರೀಶ್ ಇಂದು ಅದೇ ತಾಯಿಯ ಮಡಿಲಲ್ಲಿ ಲೀನವಾಗಿದ್ದಾರೆ. ಅವರ ಪುತ್ರ ಅಭಿಷೇಕ್ ಮೂರು ಬಾರಿ ಮುಳುಗಿ ಚಿತಾ ಬಸ್ಮವನ್ನು ನೀರಿನಲ್ಲಿ ವಿಸರ್ಜನೆ ಮಾಡಿದರು.
ಈ ವೇಳೆ ನಟ ದರ್ಶನ್, ನಿರ್ಮಾಪಕ ಮುನಿರತ್ನ, ರಾಕ್ ಲೈನ್ ವೆಂಕಟೇಶ್ ಸೇರಿದಂತೆ ಕೆಲವರು ಭಾಗಿಯಾಗಿದ್ದರು. ಮೂರು ಮಡಿಕೆಗಳಲ್ಲಿ ಇದ್ದ ಅಸ್ತಿಗೆ ಮೊದಲು ಪೂಜೆ ಮಾಡಿ ವಿಧಿ ವಿಧಾನಗಳನ್ನು ಸಂಪೂರ್ಣ ಮಾಡಲಾಯಿತು.

ಕಾವೇರಿ ನದಿಯ ಜೊತೆಗೆ ಕಾಶಿ ಹಾಗೂ ಗೋಕರ್ಣದಲ್ಲಿ ಸಹ ಚಿತಾ ಬಸ್ಮವನ್ನ ವಿಸರ್ಜನೆ ಮಾಡಲಾಗುತ್ತದೆ. ಇಂದು ಬೆಳಗ್ಗೆ ಕಂಠೀರವ ಸ್ಟುಡಿಯೊದಲ್ಲಿರುವ ಅಂಬಿ ಸಮಾಧಿಗೆ ಪೂಜೆ ಸಲ್ಲಿಸಿ ಹಾಲು ತುಪ್ಪ ಕಾರ್ಯ ನೆರವೇರಿತು.

ಇವುಗಳ ಜೊತೆಗೆ ಬೆಂಗಳೂರಿನ ದೇವಸ್ಥಾನವೊಂದರಲ್ಲಿ ಯಾಗ ಮತ್ತು ಹೋಮ ನಡೆಯುತ್ತಿದೆ. ದೇವಸ್ಥಾನದ ಸಿಬ್ಬಂದಿಗಳೇ ಅಂಬರೀಶ್ ಅವರ ಅಭಿಮಾನದಿಂದ ಸ್ವತಃ ಪ್ರೇರಿತವಾಗಿ ಈ ಕಾರ್ಯ ಮಾಡುತ್ತಿದ್ದಾರೆ.


Click it and Unblock the Notifications











