ಅಂಬರೀಶ್ ಪುಣ್ಯ ತಿಥಿ : ಅಭಿಮಾನಿಗಳಿಂದ ಕೇಶ ಮುಂಡನ

Recommended Video

ಅಂಬರೀಷ್ ಪುಣ್ಯ ತಿಥಿ ದಿನ ಅಭಿಮಾನಿಗಳ ಕೇಶ ಮುಂಡನೆ | FILMIBEAT KANNADA

ನಟ ಅಂಬರೀಶ್ ಅವರ ನಿಧನವಾಗಿ ಇಂದಿಗೆ 11 ದಿನ ಕಳೆದಿದೆ. ಇಂದು ಅವರ ಪುಣ್ಯ ತಿಥಿ ಕಾರ್ಯಕ್ರಮ ನಡೆದಿದೆ. ಅಂಬಿ ನಿವಾಸದಲ್ಲಿ ಹಾಗೂ ಕಂಠೀರವ ಸ್ಟುಡಿಯೋದಲ್ಲಿನ ಸಮಾಧಿಗೆ ಕುಟುಂಬದವರಿಂದ ಪೂಜೆ ಕಾರ್ಯಗಳನ್ನ ನೆರವೇರಿಸಲಾಗಿದೆ.

ಅಂಬಿ ಅವರ ಇಷ್ಟದ ತಿಂಡಿಗಳು ಹಾಗೂ ನಾಟಿ ಕೋಳಿ ಮುದ್ದೆ ಇಟ್ಟು ಪೂಜೆ ಸಲ್ಲಿಸಲಾಗಿದೆ. ಅಂಬರೀಶ್ ಪತ್ನಿ ಸುಮಲತಾ, ಮಗ ಅಭಿಷೇಕ್ ಹಾಗೂ ನಟ ದರ್ಶನ್ ಸೇರಿದಂತೆ ಆಪ್ತರು ಈ ಕಾರ್ಯದಲ್ಲಿ ಭಾಗಿಯಾಗಿದ್ದಾರೆ.

actor ambareesh post cremation rituals done in kanteerava studio

ಮನೆಯಲ್ಲಿನ ಪೂಜಾ ಕಾರ್ಯಕ್ರಮದಲ್ಲಿ ಆಪ್ತ ಸಿನಿಮಾ ಗಣ್ಯರು ಮತ್ತು ಕುಟುಂಬದವರಿಗೆ ಮಾತ್ರ ಅವಕಾಶ ನೀಡಲಾಗಿದೆ. ನಾಳೆ (ಡಿಸೆಂಬರ್ 5) ಅಭಿಮಾನಿಗಳ ಸಮ್ಮುಖದಲ್ಲಿ ವೈಕುಂಠ ಸಮಾರಾಧನೆ ಮಾಡಲಾಗುತ್ತಿದ್ದು, ಈ ಕಾರ್ಯಕ್ರಮ ಬೆಂಗಳೂರಿನ ಪ್ಯಾಲೆಸ್ ಗ್ರೌಂಡ್ ವೈಟ್ ಪೆಟಲ್ಸ್ ನಲ್ಲಿ ನಡೆಯುತ್ತಿದೆ.

ಇಂದಿನ ಕಾರ್ಯದಲ್ಲಿ ಕೂಡ ಅಂಬರೀಶ್ ಅವರ ಕೆಲ ಅಭಿಮಾನಿಗಳು ಭಾಗಿಯಾಗಿದ್ದು, ತಾವೂ ಕೂಡ ಕೇಶ ಮುಂಡನ ಮಾಡಿಸಿಕೊಂಡರು. ಇಂದು ಬಂದ ಅಭಿಮಾನಿಗಳಿಗೂ ಊಟದ ವ್ಯವಸ್ಥೆ ಮಾಡಲಾಗಿತ್ತು. ಭದ್ರತೆಗಾಗಿ 300ಕ್ಕೂ ಹೆಚ್ಚು ಪೊಲೀಸರನ್ನು ಕಂಠೀರವ ಸ್ಟುಡಿಯೊದಲ್ಲಿ ನಿಯೋಜನೆ ಮಾಡಲಾಗಿತ್ತು.

ಕಂಠೀರವ ಸ್ಟುಡಿಯೊದಲ್ಲಿ ಮಾತ್ರವಲ್ಲದೆ ಮಂಡ್ಯ, ಮದ್ದೂರು ಸೇರಿದಂತೆ ಕೆಲವೆಡೆ ಕೂಡ ಅಭಿಮಾನಿಗಳು ಅಂಬರೀಶ್ ಅವರ ಪುಣ್ಯ ತಿಥಿ ಮಾಡಿ ಅವರನ್ನು ಸ್ಮರಿಸಿದ್ದಾರೆ.

More from Filmibeat

English summary
Kannada actor Ambareesh's family members perform his Thithi-Post funeral rituals-today Thithi(Post funeral rituals).
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X