ಈ ನಂಬರ್ ನಿಂದ ಕರೆ ಬಂದರೆ ಅಂಬಿ ರಿಸೀವ್ ಮಾಡದೇ ಇರ್ತಿರಲಿಲ್ಲ

ನಟ ಅಂಬರೀಶ್ ಪ್ರೀತಿಯಲ್ಲಿ ಆಕಾಶ. ನಾವು, ನಮ್ಮವರು ಎನ್ನುವ ಗುಣ ಅವರಲ್ಲಿ ಇತ್ತು. ನೇರವಾಗಿ ಬೈದರು, ಮನಸ್ಸಿನಲ್ಲಿ ಪ್ರೀತಿ ತುಂಬಿರುತ್ತಿತ್ತು. ಅದೇ ಕಾರಣಕ್ಕೆ ಅವರ ಸ್ನೇಹಿತರ ಬಳಗ ದೊಡ್ಡದಿತ್ತು.

ಹೀಗಿದ್ದ ಅಂಬರೀಶ್ ತಮ್ಮ ಕುಟುಂಬಕ್ಕೆ ಅಷ್ಟೇ ಸಮಯ ನೀಡುತ್ತಿದ್ದರು. ಸಿನಿಮಾ, ರಾಜಕೀಯದಲ್ಲಿ ಬ್ಯುಸಿ ಇದ್ದ ಅಂಬಿ ಕೆಲಸದ ನಡುವೆ ಯಾರಾದಾರೂ ಕರೆ ಬಂದರೆ ತಲೆ ಕೆಡಿಸಿಕೊಳ್ಳುತ್ತಿರಲಿಲ್ಲ. ಆದರೆ, ಆ ಒಂದು ನಂಬರ್ ನಿಂದ ಕರೆ ಬಂದರೆ ಅಂಬಿ ಮಿಸ್ ಮಾಡದೆ ರಿಸೀವ್ ಮಾಡುತ್ತಿದ್ದರು.

ಅಂದಹಾಗೆ, ಅಂಬರೀಶ್ ಅವರ ಬಗ್ಗೆ ಅವರ ಜೀವನದ ಅನೇಕ ವಿಷಯಗಳು ಅನೇಕರಿಗೆ ತಿಳಿದಿಲ್ಲ. ಆ ಕುರಿತ ಈ ಒಂದು ಕುತೂಹಲಕಾರಿ ಸಂಗತಿ ಮುಂದಿದೆ ಓದಿ...

ಸುಮಲತಾ ಕರೆ ಮಿಸ್ ಮಾಡುತ್ತಿರಲಿಲ್ಲ

ಸುಮಲತಾ ಕರೆ ಮಿಸ್ ಮಾಡುತ್ತಿರಲಿಲ್ಲ

ಅಂಬಿ ಯಾವುದೇ ದೊಡ್ಡ ವ್ಯಕ್ತಿಗಳ, ಗೆಳೆಯರ ಕರೆ ಬಂದರೂ ಕೆಲವು ಬಾರಿ ಮಿಸ್ ಮಾಡುತ್ತಿದ್ದರಂತೆ. ಆದರೆ, ಸುಮಲತಾ ಅವರ ಫೋನ್ ಕರೆ ಬಂದರೆ ಯಾವುದೇ ಪರಿಸ್ಥಿತಿಯಲ್ಲಿ ಇದ್ದರು ಅವರ ಜೊತೆಗೆ ಮಾತನಾಡುತ್ತಿದ್ದರಂತೆ. ಪತ್ನಿಯ ಮೇಲೆ ಅಷ್ಟೊಂದು ಪ್ರೀತಿ ಅಂಬಿ ತೋರುತ್ತಿದ್ದರು.

'ಗಾಡೆಸ್' ಎಂದು ಸೇವ್ ಮಾಡಿದ್ದರು

'ಗಾಡೆಸ್' ಎಂದು ಸೇವ್ ಮಾಡಿದ್ದರು

ಸಾಮಾನ್ಯವಾಗಿ ಬಹುತೇಕರು ಹೆಂಡತಿಯ ಹೆಸರನ್ನು ಫೋನ್ ನಲ್ಲಿ 'wife', 'my life' ಹೀಗೆ ಸೇವ್ ಮಾಡಿರುತ್ತಾರೆ. ಆದರೆ, ಸುಮಲತಾ ಅವರ ಹೆಸರನ್ನು ಅಂಬರೀಶ್ ತಮ್ಮ ಫೋನ್ ನಲ್ಲಿ 'ಗಾಡೆಸ್' ಎಂದು ಸೇವ್ ಮಾಡಿದ್ದರಂತೆ. 'ಗಾಡೆಸ್' ಎಂದರೆ, ದೇವತೆ ಅಂತ ಅರ್ಥ.

ಯಾಕೆ ಆ ಹೆಸರು?

ಯಾಕೆ ಆ ಹೆಸರು?

ಅಂಬಿ ಬದುಕಿನಲ್ಲಿ ಸುಮಲತಾ ದೇವತೆಯಾಗಿ ಬಂದಿದ್ದರು. ಸುಮಲತಾ ಅವರು ಅಂಬರೀಶ್‌ ಅವರ ಬಾಳಿಗೆ ಬಂದ ಮೇಲೆ ಅಂಬರೀಶ್‌ ಅವರ ಜೀವನ ಸಾಕಷ್ಟು ಸುಧಾರಿಸಿತು. ಅದಕ್ಕೆ ಮುನ್ನ ಕೆಟ್ಟ ದಿನಗಳನ್ನೇನೂ ಅವರು ಕಂಡಿರಲಿಲ್ಲವಾದರೂ, ಅಂಬರೀಶ್‌ ರಾಜಕೀಯ ಜೀವನ ಪ್ರಾರಂಭವಾಗಿದ್ದು, ಮತ್ತು ಸಾಲು-ಸಾಲು ಹಿಟ್ ಚಿತ್ರಗಳನ್ನು ನೀಡಿದ್ದು ಮದುವೆಯ ನಂತರವೇ.

ಇಂದು ಫೋಟೋ ಬದಲಿಸಿದ ಸುಮಲತಾ

ಇಂದು ಫೋಟೋ ಬದಲಿಸಿದ ಸುಮಲತಾ

ಇಂದು ಸುಮಲತಾ ಅಂಬರೀಶ್ ಅವರ ಫೇಸ್ ಬುಕ್ ಖಾತೆಯ ಪ್ರೊಫೈಲ್ ಫೋಟೋ ಹಾಗೂ ಕವರ್ ಫೋಟೋ ಬದಲಿಸಿದ್ದಾರೆ. ಅಂಬರೀಶ್ ಅವರ ಫೋಟೋವನ್ನು ಪ್ರೊಫೈಲ್ ಫೋಟೋವಾಗಿ ಹಾಗೂ ಇಬ್ಬರ ಜೋಡಿಯ ಫೋಟೋವನ್ನು ಕವರ್ ಫೋಟೋವಾಗಿ ಮಾಡಿಕೊಂಡಿದ್ದಾರೆ.

ಪತ್ನಿ ಸುಮಲತಾ ನಂಬರ್ ಅನ್ನು ಏನೆಂದು ಸೇವ್ ಮಾಡಿದ್ದರು ಅಂಬರೀಶ್‌?

ಸಂಭ್ರಮಕ್ಕೆ 14 ದಿನ ಬಾಕಿ ಇತ್ತು

ಸಂಭ್ರಮಕ್ಕೆ 14 ದಿನ ಬಾಕಿ ಇತ್ತು

8 ಡಿಸೆಂಬರ್ 1991 ರಂದು ರೆಬೆಲ್ ಸ್ಟಾರ್ ಅಂಬರೀಶ್ ಮತ್ತು ಸುಮಲತಾ ಅವರ ಮದುವೆ ನೆರವೇರಿತ್ತು. ಆದರೆ, ಅಂಬರೀಶ್ ನವೆಂಬರ್ 24 ರಂದು ಇಹಲೋಕ ತ್ಯಜಿಸಿದರು. 14 ದಿನ ಕಳೆದಿದ್ದರೆ ಅವರ ಮನೆಯಲ್ಲಿ ಸಂಭ್ರಮ ಇರುತ್ತಿತ್ತು. ಆದರೆ, ಮದುವೆ ವಾರ್ಷಿಕೋತ್ಸವ ನಡೆಯುವ ಮುನ್ನ ವಿಧಿಯ ಆಟ ನಡೆದು ಹೋಗಿದೆ.

More from Filmibeat

English summary
Kannada actor Ambareesh saved wife Sumalatha mobile number as 'Goddess'. Ambareesh passed away on last saturday (November 24th).
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X