ರೆಬೆಲ್ ಸ್ಟಾರ್ ಅಂಬಿ ಪ್ರಕಾರ ಸ್ಯಾಂಡಲ್ ವುಡ್ 'ಬಾಸ್' ಯಾರು?

By Naveen

Recommended Video

ಅಂಬಿ ಹೇಳಿದ್ರು ಸ್ಯಾಂಡಲ್‌ವುಡ್ ಬಾಸ್ ಯಾರು ಅಂತ...!! | Filmibeat Kannada

ಸ್ಯಾಂಡಲ್ ವುಡ್ ನಲ್ಲಿ 'ಬಾಸ್' ಯಾರು? ಎಂಬುದು ಎಲ್ಲರಿಗೆ ಇರುವ ದೊಡ್ಡ ಪ್ರಶ್ನೆ. ಅಭಿಮಾನಿಗಳಂತು 'ಬಾಸ್' ಪಟ್ಟಕ್ಕಾಗಿ ಹೊಡೆದಾಟಕ್ಕೆ ನಿಂತಿದ್ದಾರೆ. ಶಿವಣ್ಣನ ಅಭಿಮಾನಿಗಳು ನಮ್ಮ ಅಣ್ಣ 'ಬಾಸ್ ಆಫ್ ಸ್ಯಾಂಡಲ್ ವುಡ್' ಎನ್ನುತ್ತಿದ್ದಾರೆ. ಇತ್ತ ದರ್ಶನ್ ಫ್ಯಾನ್ಸ್ ನಮ್ಮ ಅಣ್ಣ 'ಡಿ ಬಾಸ್' ಎಂದು ಹೇಳುತ್ತಿದ್ದಾರೆ.

ಅಭಿಮಾನಿಗಳ ನಡುವಿನ 'ಬಾಸ್' ಗಲಾಟೆ ಜೋರಾಗಿತ್ತು. ಅದರ ಜೊತೆಗೆ 'ದಿ ವಿಲನ್' ಸಿನಿಮಾದ ಬಗ್ಗೆ ಶಿವಣ್ಣನ ಅಭಿಮಾನಿಗಳು ಬೇಸರಗೊಂಡಿದ್ದರು. ಚಿತ್ರದ ಪೋಸ್ಟರ್ ಸೇರಿದಂತೆ ಕೆಲವು ಕಡೆ ಶಿವಣ್ಣನಿಗಿಂತ ಸುದೀಪ್ ಅವರಿಗೆ ಪ್ರಾಮುಖ್ಯತೆ ನೀಡಲಾಗಿದೆ ಎಂದು ಅಭಿಮಾನಿಗಳು ಅಸಮಾಧಾನ ಹೊರ ಹಾಕಿದ್ದರು.

ಅಭಿಮಾನಿಗಳಿಗೆ ತಾವು ಇಷ್ಟ ಪಡುವ ನಟರೇ ಬಾಸ್ ಆಗಿರುತ್ತಾರೆ. ಆದರೆ, ನಟ ರೆಬೆಲ್ ಸ್ಟಾರ್ ಅಂಬರೀಶ್ ಪ್ರಕಾರ ಕನ್ನಡದ ನಟರ ಪೈಕಿ ಬಾಸ್ ಯಾರು? ಎಂಬುದು ಕುತುಹಲ ಮೂಡಿಸುತ್ತಿದೆ.

'ಬಾಸ್' ವಿವಾದ ವಿಚಾರದ ಬಗ್ಗೆ ಈಗ ರೆಬೆಲ್ ಸ್ಟಾರ್ ಅಂಬರೀಶ್ ಮಾತನಾಡಿದ್ದಾರೆ. ಇಲ್ಲಿ 'ಯಾರಿಗೆ ಯಾರು ಬಾಸ್ ಇಲ್ಲ' ಎಂದಿರುವ ಅಂಬಿ ಅಭಿಮಾನಿಗಳಿಗೆ ಕಿವಿಮಾತು ಹೇಳಿದ್ದಾರೆ. ಮುಂದೆ ಓದಿ....

ಸಿನಿಮಾ ಹಿಟ್ ಆದರೆ ಅವರೇ 'ಬಾಸ್'

ಸಿನಿಮಾ ಹಿಟ್ ಆದರೆ ಅವರೇ 'ಬಾಸ್'

''ಇಲ್ಲಿ ಯಾರು 'ಬಾಸ್' ಅಲ್ಲ. ಸಿನಿಮಾ ಹಿಟ್ ಆದರೆ ಆ ಸಿನಿಮಾಗೆ ಅವರೇ 'ಬಾಸ್' ಇಂಡಸ್ಟ್ರಿಗೆ ಯಾರು 'ಬಾಸ್' ಆಗೋದಿಲ್ಲ. ಇಲ್ಲಿ ಯಾರು ಇನ್ನೊಬ್ಬರಿಗೆ ಬಾಸ್ ಅಲ್ಲ. ನಾವೆಲ್ಲ ಒಂದೇ ಕುಟುಂಬದವರ ತರ ಬಂದಿದ್ದೇವೆ. ಕಲಾವಿದರಲ್ಲಿಯೂ ಆ ರೀತಿ ಭಾವನೆ ಇದೆ.''

ಅಭಿಮಾನಿಗಳು ಈ ರೀತಿ ಮಾಡುತ್ತಿದ್ದಾರೆ

ಅಭಿಮಾನಿಗಳು ಈ ರೀತಿ ಮಾಡುತ್ತಿದ್ದಾರೆ

''ನಮ್ಮ ಬಡಹುಟ್ಟಿದವರು, ಕುಚ್ಚುಕೂ ಕುಚ್ಚುಕು ಹಾಡು ಬಂದಾಗ ಎಷ್ಟು ಚೆನ್ನಾಗಿತ್ತು. ನಾನು ವಿಷ್ಣು ಎಷ್ಟೊಂದು ಸಿನಿಮಾ ಮಾಡಿದ್ವಿ. ನಾನು ರಾಜ್ ಕುಮಾರ್, ಶಂಕರ್ ನಾಗ್ ಅವರ ಜೊತೆ ಕೂಡ ಸಿನಿಮಾ ಮಾಡಿದೆ. ಹಾಗೆಲ್ಲ ಯಾವುದೇ ತೊಂದರೆ ಇರಲಿಲ್ಲ. ಈಗ ಅಭಿಮಾನಿಗಳು ಈ ರೀತಿ ಮಾಡುತ್ತಿದ್ದಾರೆ.''

ಬೇರೆ ನಟರ ವಿರೋಧಿ ಆಗಬಾರದು

ಬೇರೆ ನಟರ ವಿರೋಧಿ ಆಗಬಾರದು

''ಅಭಿಮಾನಿಗಳು ಗೊಂದಲ ಮಾಡಿಕೊಳ್ಳಬಾರದು. ಯಾವುದೇ ಸ್ಟಾರ್ ಗಳು ನಿಮಗೆ ಇಷ್ಟ ಇದ್ದರೂ ಓಕೆ. ನೀವು ಶಿವರಾಜ್ ಕುಮಾರ್, ಪುನೀತ್ ರಾಜ್ ಕುಮಾರ್, ಸುದೀಪ್, ಯಶ್, ಗಣೇಶ್ ಹೀಗೆ ಯಾರದ್ದೆ ಅಭಿಮಾನಿ ಆಗಿರಿ ತೊಂದರೆ ಇಲ್ಲ. ಆದರೆ ನೀವು ಇಷ್ಟ ಪಡುವ ಆ ನಟರು ಬೇರೆ ನಟರ ವಿರೋಧಿ ಅಲ್ಲ. ಅಭಿಮಾನಿಗಳು ಕೂಡ ಆ ರೀತಿ ಅಂದುಕೊಳ್ಳಬಾರದು.''

ಸ್ಟಾರ್ ಗಳು ವರ್ಷಕ್ಕೆ ಎರಡು ಸಿನಿಮಾ ಮಾಡಬೇಕು

ಸ್ಟಾರ್ ಗಳು ವರ್ಷಕ್ಕೆ ಎರಡು ಸಿನಿಮಾ ಮಾಡಬೇಕು

''ನಾನು ದೊಡ್ಡ ದೊಡ್ಡ ಸ್ಟಾರ್ ಗಳಿಗೆ ಮುಂಚೆಯಿಂದ ಹೇಳುತ್ತಿದ್ದೇನೆ ಅವರು ವರ್ಷಕ್ಕೆ ಎರಡು ಮೂರು ಸಿನಿಮಾ ಮಾಡಬೇಕು. ಆ ಕಾಲದಲ್ಲಿ ರಾಜ್ ಕುಮಾರ್, ವಿಷ್ಣುವರ್ಧನ್, ನಾನು ಎಲ್ಲರೂ ಒಟ್ಟಿಗೆ ಇದ್ವಿ. ವರ್ಷಕ್ಕೆ ಎಷ್ಟೊಂದು ಸಿನಿಮಾ ಮಾಡುತ್ತಿದ್ವಿ. ಈಗ ಇರುವ ದೊಡ್ಡ ನಟರು ವರ್ಷಕ್ಕೆ, ಎರಡು ವರ್ಷಕ್ಕೆ ಒಂದು ಸಿನಿಮಾ ಮಾಡಿದರೆ ಸರಿ ಆಗೋದಿಲ್ಲ.''

'ಬಾಸ್' ವಿವಾದದ ಬಗ್ಗೆ

'ಬಾಸ್' ವಿವಾದದ ಬಗ್ಗೆ

ಕನ್ನಡ ನಟರ ಪೈಕಿ ಬಾಸ್ ಯಾರು ಎಂಬ ವಿವಾದ ಅಭಿಮಾನಿಗಳ ನಡುವೆ ಶುರುವಾಗಿದೆ. 'ಟಗರು' ಸಿನಿಮಾ ಗೆಲುವಿನ ನಂತರ ಶಿವಣ್ಣನಿಗೆ 'ಬಾಸ್ ಆಫ್ ಸ್ಯಾಂಡಲ್ ವುಡ್' ಎಂಬ ಬಿರುದು ನೀಡಲಾಗಿತ್ತು. ಆ ಬಳಿಕ ದರ್ಶನ್ ಅಭಿಮಾನಿಗಳು 'ಡಿ ಬಾಸ್' ಎಂದು ಈಗಾಗಲೇ ದರ್ಶನ್ ಅವರಿಗೆ ಬಿರುದು ನೀಡಿದ್ದು, ಅವರೇ ಸ್ಯಾಂಡಲ್ ವುಡ್ ಗೆ 'ಬಾಸ್' ಎಂದಿದ್ದರು. ಅಭಿಮಾನಿಗಳ ಈ ಮಾತುಗಳು ಬಳಿಕ ವಿವಾದಕ್ಕೆ ಕಾರಣ ಆಯ್ತು.

More from Filmibeat

English summary
Kannada actor Ambareesh spoke about 'Boss' controversy.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X