For Quick Alerts
For Daily Alerts
Just In
Don't Miss!
- News
ಅಕ್ರಮ ಆಸ್ತಿ ಪ್ರಕರಣ: ಶಶಿಕಲಾ ಜೈಲು ಶಿಕ್ಷೆ ಇಂದಿಗೆ ಅಂತ್ಯ, ಆಸ್ಪತ್ರೆಯಿಂದಲೇ ಬಿಡುಗಡೆ ಸಾಧ್ಯತೆ
- Lifestyle
ಬುಧವಾರದ ರಾಶಿಫಲ: ಈ ದಿನ ನಿಮ್ಮ ಭವಿಷ್ಯ ಹೇಗಿದೆ ನೋಡಿ
- Sports
ಸಯ್ಯದ್ ಮುಷ್ತಾಕ್ ಅಲಿ: ಹಿಮಾಚಲ ಪ್ರದೇಶ ಮಣಿಸಿದ ತಮಿಳುನಾಡು
- Education
ECIL Recruitment 2021: 3 ಟೆಕ್ನಿಕಲ್ ಅಧಿಕಾರಿ ಹುದ್ದೆಗಳಿಗೆ ನೇರ ಸಂದರ್ಶನ
- Automobiles
ವಿನೂತನ ಫೀಚರ್ಸ್ಗಳೊಂದಿಗೆ ನ್ಯೂ ಜನರೇಷನ್ ಟಾಟಾ ಸಫಾರಿ ಎಸ್ಯುವಿ ಅನಾವರಣ
- Finance
ಗಣರಾಜ್ಯೋತ್ಸವಕ್ಕೆ ಬಿಎಸ್ಎನ್ಎಲ್ನಿಂದ ವಿಶೇಷ ಆಫರ್
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಅಂಬರೀಷ್ ಬರ್ತ್ ಡೇ ಸ್ಪೆಷಲ್; ರಿಹರ್ಸಲ್ ಪ್ರಾರಂಭ
News
oi-Sriram
By Sriram
|
ರೆಬೆಲ್ ಸ್ಟಾರ್, ಕನ್ನಡದ ಹಿರಿಯ ನಟ ಅಂಬರೀಷ್ ಅವರ 60 ನೇ ಹುಟ್ಟುಹಬ್ಬ ಸಮೀಪಿಸಿದೆ. ಇದೇ ತಿಂಗಳು, ಮೇ 29ರಂದು ನಡೆಯುವ ಅಂಬರೀಷ್ ಹುಟ್ಟುಹಬ್ಬವನ್ನು ಅದ್ದೂರಿಯಾಗಿ ಆಚರಿಸಲು ಚಿತ್ರರಂಗ ನಿರ್ಧರಿದೆ. ಈ ಸಂಬಂಧ ನಿನ್ನೆ (ಮೇ 13, 2012) ರಾಲ್ ಲೈನ್ ವೆಂಕಟೇಶ್ ಸ್ಟುಡಿಯೋದಲ್ಲಿ ಕಾರ್ಯಕ್ರಮದ ರಿಹರ್ಸಲ್ ಪ್ರಾರಂಭವಾಗಿದೆ. ಕನ್ನಡದ ನಟ, ನಟಿಯರೆಲ್ಲಾ ಬಂದು ಅಂದು ನೀಡಲಿರುವ ತಮ್ಮ ಪ್ರದರ್ಶನದ ರಿಹರ್ಸಲ್ ಪ್ರಾರಂಭಿಸಿದ್ದಾರೆ.
ಇಂದು ಹಿರಿಯ ನಟ ಎನ್ನಿಸಿಕೊಂಡಿರುವ ಅಂಬರೀಷ್ ಚಿತ್ರರಂಗಕ್ಕೆ ಬಂದು 40 ವರ್ಷಗಳಾಗಿವೆ. ಇಷ್ಟು ವರ್ಷಗಳಲ್ಲಿ 200ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿರುವ ಅಂಬಿ ಕನ್ನಡದ ಜನಪ್ರಿಯ ಹಿರಿಯ ನಟರಲ್ಲಿ ಒಬ್ಬರು. ಹಾಗಾಗಿ ಅವರ ಹುಟ್ಟುಹಬ್ಬಕ್ಕೆ ಇಡೀ ಸ್ಯಾಂಡಲ್ ವುಡ್ ಒಂದಾಗಿದೆ. ಎಲ್ಲರೂ ನಾ ಮುಂದೆ ತಾ ಮುಂದೆ ಎಂದು ಹುಟ್ಟುಹಬ್ಬ ಆಚರಿಸಲು ತುದಿಗಾಲಲ್ಲಿದ್ದಾರೆ. ಈ ತಲೆಮಾರಿನ ಅತಿರಥಮಹಾರಥರೆಲ್ಲರೂ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ.
ನಿನ್ನೆ ನಡೆದ ರಿಹರ್ಸಲ್ ನಲ್ಲಿ ನಟರಾದ ಪುನೀತ್, ಶಿವಣ್ಣ, ದರ್ಶನ್, ರಮೇಶ್, ಉಪೇಂದ್ರ ಅವರಲ್ಲದೇ ಉದಯೋನ್ಮುಖ ನಟರಾದ ಯಶಸ್, ಚಿರಂಜೀವಿ ಸರ್ಜಾ, ಅಜಿತ್ ಮುಂತಾದವರು ಹಾಜರಿದ್ದರು. ನಟಿಯರಾದ ಮಾಲಾಶ್ರೀ, ಶ್ರುತಿ, ಹರಿಪ್ರಿಯಾ, ನಿರ್ದೇಶಕ ಎಸ್ ನಾರಾಯಣ್ ಕೂಡ ನಿನ್ನೆ ಬಂದಿದ್ದರು. ಭರ್ಜರಿ ಔತಣಕೂಟವನ್ನು ಏರಪಡಿಸಲಾಗಿತ್ತು. ಸದ್ಯದಲ್ಲೇ ಇತರರೂ ಕೂಡ ಬಂದು ರಿಹರ್ಸಲ್ ನಲ್ಲಿ ಪಾಲ್ಗೊಂಡು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. (ಒನ್ ಇಂಡಿಯಾ ಕನ್ನಡ)
ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ
Allow Notifications
You have already subscribed
Comments
Read more about: ಅಂಬರೀಷ್ ಹುಟ್ಟುಹಬ್ಬ ದರ್ಶನ್ ಉಪೇಂದ್ರ ಪುನೀತ್ ಶಿವರಾಜ್ ಕುಮಾರ್ ambarish birthday darshan upendra puneeth rajkumar shiva rajkumar
English summary
Actor Ambarish's 60th Birthday to Celebrate in Bangalore Palace Ground on May 29 2012. Kannada Film Industry will be involved totally in this function. Yesterday (May 13, 2012) rehearsal started at Rockline Studio and Puneeth, Darshan, upendra and Ramesh participated in this.
Story first published: Monday, May 14, 2012, 11:47 [IST]
Other articles published on May 14, 2012