ಅಸಂಖ್ಯಾತ ಚಿತ್ರಗಳ ಸರದಾರ ಅನಂತ್ ನಾಗ್

ಹಾಸ್ಯ ಚಿತ್ರಗಳಾದ 'ಚಾಲೆಂಜ್ ಗೋಪಾಲಕೃಷ್ಣ', 'ಗೋಲ್ ಮಾಲ್ ರಾಧಾಕೃಷ್ಣ', 'ಸುಖ ಸಂಸಾರಕ್ಕೆ ಹನ್ನೆರಡು ಸೂತ್ರಗಳು', 'ಹೆಂಡ್ತೀಗ್ಹೇಳ್ಬೇಡಿ', 'ಗೌರಿ ಗಣೇಶ', 'ಗಣೇಶ ಸುಬ್ರಮಣ್ಯ', 'ಮನೇಲಿ ಇಲಿ ಬೀದೀಲಿ ಹುಲಿ', 'ಧೈರ್ಯಲಕ್ಷ್ಮಿ', 'ನಾರದ ವಿಜಯ', 'ಹಾಸ್ಯರತ್ನ ರಾಮಕೃಷ್ಣ', 'ಯಾರಿಗೂ ಹೇಳ್ಬೇಡಿ', 'ಗಾಯತ್ರಿ ಮದುವೆ', 'ಇನ್ನೊಂದು ಮದುವೆ', 'ಯಾರಿಗೆ ಸಾಲುತ್ತೆ ಸಂಬಳ', 'ಉಂಡು ಹೋದ ಕೊಂಡೂ ಹೋದ', 'ಉದ್ಭವ', 'ಹೆಂಡ್ತಿ ಬೇಕು ಹೆಂಡ್ತಿ', 'ಸಮಯಕ್ಕೊಂದು ಸುಳ್ಳು', 'ನಾನೇನೂ ಮಾಡ್ಲಿಲ್ಲ' ಇಂಥಹ ಹಲವಾರು ಚಿತ್ರಗಳು ಈ ಲಿಸ್ಟ್ ನಲ್ಲಿವೆ.
ಇಷ್ಟೊಂದು ದೊಡ್ಡ ನಟರಾದರೂ ಬೇರೆ ನಟರೊಂದಿಗೆ ಬೆರೆತು ಸಾಕಷ್ಟು ಚಿತ್ರಗಳಲ್ಲಿ ನಟಿಸಿದ್ದಾರೆ ಅನಂತ್ ನಾಗ್. ಡಾ ರಾಜ್ ಕುಮಾರ್ ಅವರೊಡನೆ 'ಕಾಮನಬಿಲ್ಲು'; ಡಾ ವಿಷ್ಣುವರ್ಧನ್ ಅವರೊಡನೆ 'ನಿಷ್ಕರ್ಷ', 'ಮತ್ತೆ ಹಾಡಿತು ಕೋಗಿಲೆ', 'ಜೀವನದಿ'; ರವಿಚಂದ್ರನ್ ಜೊತೆ 'ರಣಧೀರ', ಶಾಂತಿಕ್ರಾಂತಿ'; ಉಪೇಂದ್ರ ಅವರೊಡನೆ 'ಹಾಲಿವುಡ್' ಈ ಮುಂತಾದ ಚಿತ್ರಗಳು ಇದಕ್ಕೊಂದು ಸ್ಪಷ್ಟ ಉದಾಹರಣೆ.
ಕನ್ನಡ ಮಾತ್ರವಲ್ಲದೇ ಮರಾಠಿ, ತಮಿಳು, ತೆಲುಗು, ಹಿಂದಿ ಹಾಗೂ ಮಲಯಾಳಂ ಚಿತ್ರಗಳಲ್ಲೂ ನಟಿಸಿರುವ ಅನಂತ್ ನಾಗ್, ಆರ್ ಕೆ ನಾರಾಯಣ್ ಕಥೆಯಾಧಾರಿತ 'ಮಾಲ್ಗುಡಿ ಡೇಸ್' ನಲ್ಲಿಯೂ ತಮ್ಮ ಪ್ರತಿಭೆ ಮೆರೆದವರು. ಇಂಥ ಅನಂತ್ ನಾಗ್, ಇಂದು ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ದೇಶವನ್ನೂ ಮೀರಿ ಎಲ್ಲೆಡೆ ಇರುವ ಅನಂತ್ ನಾಗ್ ಅಭಿಮಾನಿಗಳು ತಮ್ಮ ಮೆಚ್ಚಿನ ನಟ ಅನಂತ್ ನಾಗ್ ಹುಟ್ಟುಹಬ್ಬವನ್ನು ತಮ್ಮದೇ ಆದ ರೀತಿಯಲ್ಲಿ ಖುಷಿಯಿಂದ ಆಚರಿಸುತ್ತಿದ್ದಾರೆ.
ಇಂದಿನ ಜನರೇಷನ್ ಅಭಿಮಾನಿಗೂ ಅನಂತ್ ನಾಗ್ ಅವರಿಗೆ ಹೇರಳವಾಗಿದ್ದಾರೆ ಎಂಬ ಅಂಶ ಇಂದು ಸಾಮಾಜಿಕ ತಾಣಗಳಲ್ಲಿ ಅವರ ಹುಟ್ಟುಹಬ್ಬಕ್ಕೆ ವ್ಯಕ್ತವಾಗುತ್ತಿರುವ ಭಾರಿ ಪ್ರತಿಕ್ರಿಯೆ, ಸಂಭ್ರಮ ಹಾಗೂ ಶುಭಾಶಯ ವಿನಿಮಯಗಳ ಮೂಲಕ ಸಾಕ್ಷಿ ಸಮೇತ ವ್ಯಕ್ತವಾಗುತ್ತಿದೆ. ಅನಂತ್ ನಾಗ್ ಸಹೋದರ ಶಂಕರ್ ನಾಗ್ ನಮ್ಮನ್ನಗಲಿದ್ದರೂ, ಈ ಸಂದರ್ಭದಲ್ಲಿ ಎಲ್ಲರ ನೆನಪಿಗೆ ಬರುತ್ತಿದ್ದಾರೆ. ಹಟ್ಟುಹಬ್ಬದ ಸಂಭ್ರಮದಲ್ಲಿರುವ ಅನಂತ್ ನಾಗ್ ಅವರಿಗೆ 'ಒನ್ ಇಂಡಿಯಾ ಕನ್ನಡ'ದ ಹಾರ್ದಿಕ ಶುಭಾಶಯಗಳು. (ಒನ್ ಇಂಡಿಯಾ ಕನ್ನಡ)


Click it and Unblock the Notifications











