For Quick Alerts
  ALLOW NOTIFICATIONS  
  For Daily Alerts

  ದೇಶಸೇವೆಯ ಆಸೆ ಹೊಂದಿದ್ದ ಅನಂತ್ ನಾಗ್, ನಟರಾಗದಿದ್ದರೆ ಏನಾಗಿರುತ್ತಿದ್ದರು?

  |

  ನಟ ಅನಂತ್‌ನಾಗ್ ತಮ್ಮ ಮನೋಜ್ಞ ಅಭಿನಯದ ಮೂಲಕ ದೇಶದಾದ್ಯಂತ ಹೆಸರು ಮಾಡಿದವರು. ನಾಯಕ ನಟರಾಗಿ ಎಷ್ಟು ಬ್ಯುಸಿ ಆಗಿದ್ದರೂ ಈಗಲೂ ಅವರು ಅಷ್ಟೇ ಬ್ಯುಸಿ ಮತ್ತು ಸಕ್ರಿಯ.

  ದಶಕಗಳ ಕಾಲ ನೆನಪಿನಲ್ಲಿ ಉಳಿಯುವಂತಹಾ ಸಿನಿಮಾ ಮಾಡಿರುವ ಅನಂತ್‌ ನಾಗ್‌ ನಟನೆಯನ್ನು ವೃತ್ತಿಯನ್ನಾಗಿ ಆಯ್ಕೆ ಮಾಡಿಕೊಂಡಿದ್ದು ಕಾಕತಾಳೀಯ. ಆದರೆ ನಟನೆಯನ್ನು ವೃತ್ತಿಯನ್ನಾಗಿಸಿಕೊಳ್ಳುವ ಮೊದಲು ಅನಂತ್‌ ನಾಗ್ ಅವರ ಕನಸಿದ್ದಿದ್ದು ದೇಶಸೇವೆ ಮಾಡಬೇಕು, ಸೈನ್ಯಕ್ಕೆ ಸೇರಬೇಕು ಎಂಬುದು.

  ಹೌದು, ಶಿಕ್ಷಣವನ್ನೂ ಪೂರ್ತಿಯಾಗಿ ಮಾಡಲಾಗದೆ ಎಲ್ಲಿಯೂ ಸಲ್ಲದಾಗದೆ ನಿಂತಿದ್ದಾಗ 1962 ರ ಚೀನಾದೊಂದಿಗಿನ ಭಾರತದ ಯುದ್ಧ ಮತ್ತು ಹಿಂದೆಯೇ 1965 ರ ಪಾಕಿಸ್ತಾನದ ಯುದ್ಧ ಅನಂತ್ ನಾಗ್ ಅವರನ್ನು ಸೈನ್ಯದೆಡೆಗೆ ಆಕರ್ಷಿತರನ್ನಾಗಿಸಿತ್ತು.

  ದೇಶಪ್ರೇಮ ಎಲ್ಲೆಡೆ ಹಬ್ಬಿದ್ದ ಸಮಯವದು

  ದೇಶಪ್ರೇಮ ಎಲ್ಲೆಡೆ ಹಬ್ಬಿದ್ದ ಸಮಯವದು

  'ಆ ಸಮಯದಲ್ಲಿ ದೇಶದೆಲ್ಲೆಡೆ ದೇಶಾಭಿಮಾನದ ವಾತಾವರಣ ಇತ್ತು, ಸೈನಿಕರ ಬಗ್ಗೆ ಗೌರವ ಆದರಗಳು ಹೆಚ್ಚಾಗಿದ್ದ ಸಮಯವದು, ನಾನೂ ಸಹ ಸೈನ್ಯಕ್ಕೆ ಸೇರಬೇಕೆಂದು ಹೋಗಿದ್ದೆ'' ಎಂದು ಅನಂತ್ ನಾಗ್ ಬೆಂಗಳೂರು ಫಿಲ್ಮ್ ಫೆಸ್ಟ್‌ನಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಹೇಳಿದರು.

  ಎರಡು ಬಾರಿ ಸೈನ್ಯ ಸೇರಲು ಪ್ರಯತ್ನಿಸಿದ್ದರು ಅನಂತ್ ನಾಗ್

  ಎರಡು ಬಾರಿ ಸೈನ್ಯ ಸೇರಲು ಪ್ರಯತ್ನಿಸಿದ್ದರು ಅನಂತ್ ನಾಗ್

  ಸೈನ್ಯಕ್ಕೆ ಸೇರಲು ಒಂದಲ್ಲ ಎರಡು ಬಾರಿ ಪ್ರಯತ್ನಿಸಿದ್ದರು ಅನಂತ್ ನಾಗ್. ಮೊದಲ ಬಾರಿಗೆ ವಾಯುಪಡೆಗೆ ಸೇರಲೆಂದು ಅನಂತ್ ನಾಗ್ ಪರೀಕ್ಷೆ ಎದುರಿಸಿದ್ದರು. 'ನಿಮ್ಮ ಎಡಗಣ್ಣಿನ ದೃಷ್ಟಿ ಸರಿಯಿಲ್ಲ' ಎಂದು ಹೇಳಿ ವಾಪಸ್ಸು ಕಳಿಸಿದ್ದರು.

  ಎರಡನೇ ಬಾರಿ ಮತ್ತೆ ಪ್ರಯತ್ನ ಮಾಡಿದ್ದರು

  ಎರಡನೇ ಬಾರಿ ಮತ್ತೆ ಪ್ರಯತ್ನ ಮಾಡಿದ್ದರು

  ಆದರೆ ಸೈನ್ಯಕ್ಕೆ ಸೇರಲೇಬೆಕೆಂಬ ಅದಮ್ಯ ಆಸೆಯಿಂದ ಅನಂತ್ ನಾಗ್ ಮತ್ತೆ ಭೂ ಸೇನೆಯ ಪರೀಕ್ಷೆಗೆ ಹಾಜರಾದರು. ಆದರೆ ಅಲ್ಲೂ ನಿರಾಸೆ ಕಾದಿತ್ತು, ''ಸೈನಿಕನಿಗೆ ಇರಬೇಕಾದಷ್ಟು ದೇಹತೂಕ ಹೊಂದಿಲ್ಲ, ದೇಹ ತೂಕ ಹೆಚ್ಚಿಸಿಕೊಂಡು ಮರಳಿ ಬನ್ನಿ'' ಎಂದು ಅಧಿಕಾರಿಗಳು ಅನಂತ್ ನಾಗ್ ಅವರನ್ನು ವಾಪಸ್ಸು ಕಳಿಸಿದರು.

  ನಟರಾದಮೇಲೂ ಮುಂದುವರೆದಿದ್ದ ದೇಶಸೇವೆಯ ತುಡಿತ

  ನಟರಾದಮೇಲೂ ಮುಂದುವರೆದಿದ್ದ ದೇಶಸೇವೆಯ ತುಡಿತ

  ಅನಂತ್ ನಾಗ್ ಹೇಳಿದಂತೆ, ಅವರಿಗೆ ಬಾಲ್ಯದಿಂದಲೇ ದೇಶಸೇವೆ, ಸಮಾಜ ಸೇವೆಯ ಆಸಕ್ತಿಗಳು ಸುಪ್ತ ಮನಸ್ಸಿನಲ್ಲಿ ಸದಾ ಇದ್ದವು. ಇದೇ ಕಾರಣದಿಂದಲೇ ಅವರು ರಾಜಕೀಯ ಪ್ರವೇಶ ಮಾಡಿದರು. ಆದರೆ ಅಲ್ಲಿ ಸೇವೆ ಮಾಡಲು ಬಿಡುವುದಿಲ್ಲವೆಂಬುದು ಅರಿವಾಗಿ ನಟನೆಗೆ ಹಿಂತಿರುಗಿದರು.

  English summary
  Famous actor Ananth Nag tried to join Indian Army but failed two times.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X