ಡ್ರಗ್ಸ್ ಪ್ರಕರಣ: ಸಿಸಿಬಿ ವಿಚಾರಣೆ ಬಳಿಕ ಅನುಶ್ರೀ ಹೇಳಿದ್ದೇನು?

ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಖ್ಯಾತ ನಿರೂಪಕಿ ಮತ್ತು ನಟಿ ಅನುಶ್ರೀ ಅವರ ವಿಚಾರಣೆ ಮುಕ್ತಾಯವಾಗಿದೆ. ಇಂದು ಬೆಳಗ್ಗೆ ಮಂಗಳೂರಿನ ಸಿಸಿಬಿ ಅಧಿಕಾರಿಗಳ ಮುಂದೆ ಅನುಶ್ರೀ ಹಾಜರಾಗಿದ್ದರು. ಡಿಸಿಪಿ ವಿನಯ್ ಗಾಂವ್ಕರ್ ನೇತೃತ್ವದಲ್ಲಿ ಸತತ ಮೂರುವರೆ ಗಂಟೆಕಾಲ ಅನುಶ್ರೀ ವಿಚಾರಣೆ ಎದುರಿಸಿದ್ದಾರೆ.

ಬಳಿಕ ಮಾಧ್ಯಮದವರ ಜೊತೆ ಮಾತನಾಡಿದ ಅನುಶ್ರೀ, ಅಧಿಕಾರಿಗಳು ಕೇಳಿರುವ ಎಲ್ಲಾ ಪ್ರಶ್ನೆಗಳಿಗೆ ಉತ್ತರ ನೀಡಿದ್ದೇನೆ, ಮತ್ತೆ ವಿಚಾರಣೆಗೆ ಕರೆದರೆ ಬರುತ್ತೇನೆ, ವಿಚಾರಣೆಗೆ ಎಲ್ಲಾ ರೀತಿಯ ಸಹಕಾರ ನೀಡುತ್ತೇನೆ ಎಂದು ಹೇಳಿದ್ದಾರೆ. ಪಾರ್ಟಿಯಲ್ಲಿ ಭಾಗಿಯಾಗಿರುವ ಬಗ್ಗೆ ಪ್ರತಿಕ್ರಿಯಿಸಿದ ಅನುಶ್ರೀ, ಪಾರ್ಟಿಯ ವಿಚಾರವಾಗಿ ನನ್ನನ್ನು ವಿಚಾರಣೆಗೆ ಕರೆದಿಲ್ಲ. ಅವರು ನನ್ನ ಕೊರಿಯೋಗ್ರಾಫರ್ ಆಗಿದ್ದ ಕಾರಣ ಕರೆದಿದ್ದಾರೆ ಎಂದಿದ್ದಾರೆ.

ಡ್ರಗ್ಸ್ ಪ್ರಕರಣ: ಮಂಗಳೂರು CCB ಅಧಿಕಾರಿಗಳ ಮುಂದೆ ಹಾಜರಾದ ಅನುಶ್ರೀ

ಡ್ರಗ್ಸ್ ಪ್ರಕರಣದಲ್ಲಿ ಬಂಧನಕ್ಕೊಳಕ್ಕಾಗಿರುವ ತರಣ್ 12 ವರ್ಷಗಳ ಹಿಂದೆ ನನಗೆ ಕೊರಿಯೋಗ್ರಾಫರ್ ಆಗಿದ್ದರು ಎಂದಿದ್ದಾರೆ. ಆಗ ಅವರು ಏನು ಮಾಡುತ್ತಿದ್ದರೊ ನನಗೆ ಗೊತ್ತಿಲ್ಲ. ಮಂಗಳೂರಿನಲ್ಲಿ ಅವರ ಡ್ಯಾನ್ಸ್ ಕ್ಲಾಸ್ ಉದ್ಘಾಟನೆ ಮಾಡಿಕೊಟ್ಟಿದೆ. ಅದು ಬಿಟ್ಟರೆ ಅವರ ಪರಿಚಯ ಜಾಸ್ತಿ ಇಲ್ಲ ಎಂದಿದ್ದಾರೆ.

Actor And Anchor Anushree Reaction After CCB Inquiry In Mangalore

Recommended Video

ಅನುಶ್ರೀ ಹುಡುಕಿಕೊಂಡು ಮಂಗಳೂರಿನಿಂದ ಬೆಂಗಳೂರಿಗೆ ಬಂದ CCB ಪೊಲೀಸ್ | Filmibeat Kannada

ಪೊಲೀಸರು ಕೇಳಿರುವ ಎಲ್ಲಾ ಪ್ರಶ್ನೆಗಳಿಗೆ ಉತ್ತರ ನೀಡಿದ್ದೇನೆ. ಮತ್ತೆ ವಿಚಾರಣೆಗೆ ಕರೆದರೆ ಹಾಜರಾಗುತ್ತೇನೆ ಎಂದಿದ್ದಾರೆ. ಶನಿವಾರ ವಿಚಾರಣೆ ಇದಿದ್ದರಿಂದ ಶುಕ್ರವಾರ ಬೆಂಗಳೂರಿನಿಂದ ಹೊರಟು ಮಂಗಳೂರಿಗೆ ಬಂದಿದ್ದೇನೆ. ಪೊಲೀಸರು ಹೇಳಿದ ಸಮಯಕ್ಕೆ ಹಾಜರಾಗಿರುವುದಾಗಿ ಅನುಶ್ರೀ ಹೇಳಿದ್ದಾರೆ.

More from Filmibeat

English summary
Sandalwood drugs case: Actor And Anchor Anushree reaction after ccb inquiry In Mangalore.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X