ಗಣೇಶ ಬೀಡಿ, ಕಾಫಿ ಜೊತೆ ಒಲೆ ಮುಂದೆ ಕುಳಿತರೆ ಸ್ವರ್ಗ...!: ಬಾಲ್ಯದ ದಿನಗಳನ್ನು ಮೆಲುಕು ಹಾಕಿದ ನಟ ಜಗ್ಗೇಶ್
ಚಳಿಗಾಲ ಆರಂಭವಾಗಿದೆ. ಚುಮು ಚುಮು ಚಳಿಯ ನಡುವೆ ಬಿಸಿ ಬಿಸಿ ಕಾಫಿ, ಟೀ ಜೊತೆಗೆ ಮುಂಜಾನೆಯನ್ನು, ಬಿಸಿ ಬಿಸಿ ಬೋಂಡಾ ತಿನ್ನುತ್ತಾ ಸಂಜೆಯನ್ನು ಕಳೆಯುವ ದಿನಗಳು ಬಂದಿದೆ. ಬೆಡ್‌ಶಿಟ್ ಸದ್ಯ ನಮ್ಮ ಫೇವರಿಟ್ ಆಗಿದೆ. ಇದರ ಜೊತೆಗೆ ಸೋಶಿಯಲ್ ಮಿಡಿಯಾದಲ್ಲಿಯೂ ಕೂಡ ಹಲವು ಪೋಸ್ಟ್‌ಗಳು, ಮೀಮ್‌ಗಳು ಓಡಾಡುತ್ತಿವೆ. ಅಂತಹ ಪೋಸ್ಟ್ ನೋಡಿದ ನಟ ಜಗ್ಗೇಶ್ ತಮ್ಮ ಬಾಲ್ಯದ ದಿನಗಳನ್ನು ನೆನಪಿಸಿಕೊಂಡಿದ್ದಾರೆ.
ಚಳಿಗೆ ಗಣೇಶ ಬೀಡಿ, ಒಂದು ಲೋಟ ಕಾಫಿ!
"ಜಾಲತಾಣದಲ್ಲಿ ಈ ಪೋಸ್ಟ್ ನೋಡಿ ಭಾವುಕನಾಗಿ ನನ್ನ ಬಾಲ್ಯ ನೆನಪಾಯಿತು..!!. ಹೌದು ನನ್ನ ಬಾಲ್ಯದ ಬಹುತೇಕ ಕಳೆದ ಜಾಗ ಈ ಅಡುಗೆ ಮನೆ. ಕಾರಣ ಕರುವಿಗೆ ಶ್ರೇಷ್ಠಜಾಗ ಹಸುವಿನ ಮಡಿಲು, ಮಕ್ಕಳಿಗೆ ಶ್ರೇಷ್ಠ ಅಮ್ಮನ ಸಾಂಗತ್ಯ. ಅವಳು ಇರುತ್ತಿದ್ದದ್ದು ಬಹುತೇಕ ಸಮಯ ಅಡುಗೆಮನೆ ಹಾಗಾಗಿ ನಾವು ಅಲ್ಲೆ. ಅಮ್ಮನಿಗೆ ಬೇಕಾದ ತರಕಾರಿ ಹೆಚ್ಚಿ ಕೈಯಲ್ಲೆ ರುಬ್ಬಿ ಅಥವ ಅರೆದು ಸಹಾಯ ಮಾಡೋದು".

"ವಿಶೇಷವಾಗಿ ಚಳಿಗಾಲದಲ್ಲಿ ರಾತ್ರಿಯ ಹೊತ್ತು ಅಡುಗೆಮನೆ ಉರಿವ ಒಲೆ ಪ್ರಯುಕ್ತ ಬೆಚ್ಚನೆಯ ಹೊದಿಕೆ. ಮತ್ತೆ ಬೆಳಗಾದರೆ ನೀರು ಒಲೆ ಹುರಿ ಹಾಕೋ ಕಾಯಕ ಅಲ್ಲು ಬೆಚ್ಚಗೆ. ಜೊತೆಗೆ ಅಲ್ಲಿಗೆ ಅಮ್ಮ ಕಾಫಿ ಕೊಡುತ್ತಿದ್ದಳು. 10 ಜನಕ್ಕೆ ಬಿಸಿನೀರು ಬೇಕು ಹಾಗಾಗಿ ಹಂಡೆ ಮುಂದೆ ಅರ್ಧಘಂಟೆ ಕಾಯಮ್ಮು. ಅಪ್ಪ ದೂರ ಇರುವ ಪ್ರಯುಕ್ತ ಜೇಬಿಂದ ಗಣೇಶ ಬೀಡಿ ಹೊರಬಂದು ಕಾಫಿ ಜೊತೆ ಒಲೆ ಮುಂದೆ.. ಸ್ವರ್ಗಕ್ಕೆ ಸಮವಾಗಿ ಚಳಿಗಾಲ ಓಡಿಹೋಗುತ್ತಿತ್ತು"
ಇಂದಿನ ಕಾಲದಲ್ಲಿ ಒಲೆ ಅಡುಗೆ ಮನೆಗೆ ಕೆಲಸ ಇಲ್ಲಾ!?
"ಹೇಳಿ ಇಂದಿನ ಮಕ್ಕಳಿಗೆ ಈ ಸೌಭಾಗ್ಯ ಇದೆಯ? ನೋ ಚಾನ್ಸ್ ಒಲೆ ಅಡುಗೆಮನೆಗೆ ಕೆಲಸ ಇಲ್ಲ! ನೆಂಟರು ಬಂದಾಗ ಮಾತ್ರ ನೋಡಿ ಇದು ಅಡುಗೆಮನೆ. ಇಂಪೋರ್ಟೆಡ್ ಚಿಮಣಿ, ಟಾಯ್ಲೆಟ್ ಕಂಪ್ಲೀಟ್ ಫಾರಿನ್‌ದು ಎಂಬ ಬಿಂಕ ಮಾತ್ರ. ಊಟ ಬರೋದು ಆನ್‌ಲೈನ್‌ನಲ್ಲಿ. ಅದು ಚಿಕ್ಕ ಮಕ್ಕಳೆ ಮೊಬೈಲ್ ಹಿಡಿದು ಅಮ್ಮ ನಿಮಗೆ... ಅಪ್ಪ ನಿಮಗೆ... ಲೇ ನಿನಗೇನೋ.. ಲೇ ನಿನಗೇನೆ...ಅಲ್ಲಿಗೆ ಮ್ಯಾಟರ್ ಫಿನಿಶ್!!!!".

"ಈ ದಿನಗಳ ನೋಡಿ ವಿಧಿಯಿಲ್ಲದೆ ಒಪ್ಪಿ ಬದುಕಬೇಕು.. ಹಿಂದಿನ ಜೀವನ ಅದರ ಕಥೆ. ಇಂದಿನವರಿಗೆ what a funk ಎಂದು ಆಶ್ಚರ್ಯಪಟ್ಟು ಬಾಯಿ ಮೇಲೆ ಬೆರಳಿಟ್ಟು ಕಣ್ಣು ಅರಳಿಸಿ ನೋಡುತ್ತಾರೆ. ಎ್...ಫ್ರೆಂಡ್ಸ್ ನಾನು ಹೀಗೆ ಬೆಳದದ್ದು. ಅದು ಇದೆ ಅಡುಗೆ ಮನೆಯಲ್ಲಿ ಅಮ್ಮನ ಕೈತುತ್ತು ತಿಂದು ಈಶ್ವರಗೌಡ ನಿಮ್ಮ ನವರಸನಾಯಕ ಆಗಿದ್ದು.."
"ಏನೆ ಹೇಳಿ ಇಂಥ ಪರಿಸರದಲ್ಲಿ ಬೆಳೆದ ನಮಗೆ ನಮ್ಮ ತಂದೆ ತಾಯಿ ಅಜ್ಜ ಅಜ್ಜಿ ಬಂಧು ಬಳಗ ಉಂಡ ತಣಿಗೆ (ತಟ್ಟೆ) ಬ್ಲಡಿ ಓಲ್ಡ್ ಅಂತ ಗುಜರಿಗೆ ಹೋಯ್ತು. ಬಂಧುಗಳು ಮಸಣದ ಮಣ್ಣಲ್ಲಿ ಕುರುಹು ಸಿಗದಂತೆ ಕರಗಿಹೋದರು... ಚಳಿಗಾಲದ ಚಿತ್ರ ಬದುಕು ಜಗತ್ತು ಸತ್ಯ ಮಿತ್ಯ ಎಂದು ಅರಿವಾಗಲು 60ಕ್ಕೆ ಬಂದು ನಿಂತ ಅಂದಿನ ಅಡುಗೆ ಮನೆಯಲ್ಲಿ ಅಮ್ಮನ ಜೊತೆ ಆಡಿಬೆಳದ ಮಗ.."
"ಡೊಂಟ್ ವರಿ ನೀವು ಅಲ್ಲಿಗೆ ಮುಂದೆ ಬರುತ್ತೀರಿ. ಪ್ರೀತಿಸಿ... ಪ್ರೀತಿಗಾಗಿ ಬಾಳಿ... ಅದೆ ಉಳಿಯೋದು ನೆನಪಿಗೆ.. ಮಿಕ್ಕದ್ದು ದುಡಿದಿದ್ದೇಲ್ಲಾ ಕಂಡವರ ಪಾಲು!!. ಇಂಥ ಕಥೆ ಹೇಳಲು ಕೆಲ ವರ್ಷಕ್ಕೆ ಯಾರು ಸಿಗರು. ಒಬಂಟಿ ಅಲೆದಾಟ ಎಲ್ಲಾ ಸೆಲ್ಫದ ಸರ್ವಿಸ್ ಮುಂದಿನ ಪೀಳಿಗೆಯ ಬದುಕು....ಶುಭಂ" ಎಂದು ತಮ್ಮ ಫೇಸ್‌ಬುಕ್‌ನಲ್ಲಿ ಸವಿವರವಾದ ಪೋಸ್ಟ್ ಹಂಚಿಕೊಂಡಿದ್ದಾರೆ.


Click it and Unblock the Notifications











