»   » ದರ್ಶನ್ ಹೊಸ ಚಿತ್ರದ ಸತ್ಯ ಬಿಚ್ಚಿಟ್ಟ ತರುಣ್ ಸುಧೀರ್

ದರ್ಶನ್ ಹೊಸ ಚಿತ್ರದ ಸತ್ಯ ಬಿಚ್ಚಿಟ್ಟ ತರುಣ್ ಸುಧೀರ್

Posted By:
Subscribe to Filmibeat Kannada
ದರ್ಶನ್ ಹೊಸ ಚಿತ್ರದ ಸತ್ಯ ಬಿಚ್ಚಿಟ್ಟ ತರುಣ್ ಸುಧೀರ್ | Filmibeat Kannada

ಚಾಲೆಂಜಿಂಗ್ ಸ್ಟಾರ್ ದರ್ಶನ್ ಒಂದು ಸಿನಿಮಾದಲ್ಲಿ ಅಭಿನಯಿಸಿ ಅದು ತೆರೆ ಮೇಲೆ ಬರುವವರೆಗೂ ಮುಂದೆ ಯಾವ ಚಿತ್ರದಲ್ಲಿ ಅಭಿಯಿಸುತ್ತೇನೆ ಎನ್ನುವುದರ ಬಗ್ಗೆ ಮಾತನಾಡುವುದಿಲ್ಲ. ಆದರೆ ದರ್ಶನ್ ಅಭಿನಯಿಸುವ ಮುಂದಿನ ಚಿತ್ರದ ಬಗ್ಗೆ ಒಂದುಷ್ಟು ಮಾಹಿತಿಯನ್ನ ನಿರ್ದೇಶಕ ಹಾಗೂ ನಟ ತರುಣ್ ಸುಧೀರ್ ಬಿಟ್ಟುಕೊಟ್ಟಿದ್ದಾರೆ.

ಶಿವರಾಜ್ ಕುಮಾರ್ ನಡೆಸಿಕೊಡುವ ಯಾರಿ ನಂ 1 ವಿತ್ ಶಿವಣ್ಣ ಕಾರ್ಯಕ್ರಮದಲ್ಲಿ ತರುಣ್, ಚಿಕ್ಕಣ್ಣ ಹಾಗೂ ಶರಣ್ ಭಾಗಿ ಆಗಿದ್ದರು. ಈ ಸಂದರ್ಭದಲ್ಲಿ ಈ ಬಗ್ಗೆ ಮಾತನಾಡಿದ್ದಾರೆ ತರುಣ್. ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ಚಾಲೆಂಜಿಂಗ್ ಸ್ಟಾರ್ ಅಭಿನಯದ 51 ನೇ ಚಿತ್ರವನ್ನ ತರುಣ್ ಸುಧೀರ್ ನಿರ್ದೇಶನ ಮಾಡಬೇಕಿತ್ತು.

actor and director Tarun will be directing Darshan movie.

ಪರೋಕ್ಷವಾಗಿ ಅಶ್ವಥ್ ಕುಟುಂಬಕ್ಕೆ ನೆರವಾದರಾ ಡಿ ಬಾಸ್ ?

ಆದರೆ ಕಾರಣಾಂತರಗಳಿಂದ ಅದು ಸಾಧ್ಯವಾಗಲಿಲ್ಲ. ಚೌಕಾ ಸಿನಿಮಾ ಐವತ್ತು ದಿನ ಪೂರೈಸಿದಾಗ ಈ ಬಗ್ಗೆ ಸಾಕಷ್ಟು ಸುದ್ದಿ ಆಗಿತ್ತು. ಸದ್ಯ ದರ್ಶನ್ ಗಾಗಿ ಕಥೆ ಮಾಡಿಕೊಳ್ಳುತ್ತಿರುವ ತರುಣ್ ಸುಧೀರ್ ಸಿನಿಮಾ ಹೇಗಿರಲಿದೆ ಎನ್ನುವುದನ್ನ ತಿಳಿಸಿದ್ದಾರೆ. ದರ್ಶನ್ ಅಭಿಮಾನಿ ಡಿ ಬಾಸ್ ಅವರನ್ನ ತೆರೆ ಮೇಲೆ ಹೇಗೆ ನೋಡಬೇಕು ಎಂದುಕೊಳ್ಳುತ್ತಾನೋ ಅದೇ ರೀತಿಯಲ್ಲಿ ಚಿತ್ರ ಇರಲಿದ್ಯಂತೆ.

ಗೆಳೆಯ ದರ್ಶನ್ ಕಾರಿನ ಮೇಲೆ ಕಣ್ಣು ಹಾಕಿದ ತರುಣ್ ಸುಧೀರ್

actor and director Tarun will be directing Darshan movie.

ಪಕ್ಕಾ ಕಮರ್ಷಿಯಲ್ ಆಗಿ ಚಿತ್ರದ ತೆರೆ ಮೇಲೆ ಬರಲಿದೆ ತಯಾರಿ ಆಗುತ್ತಿದೆ ಎನ್ನುವ ಮಾತನ್ನ ತಿಳಿಸಿದ್ದಾರೆ ನಿರ್ದೇಶಕ ತರುಣ್. ಒಟ್ಟಾರೆ ದರ್ಶನ್ ಅಕೌಂಟ್ ನಿಂದ ಮತ್ತೊಂದು ಕಮರ್ಷಿಯಲ್ ಸಿನಿಮಾ ತೆರೆ ಮೇಲೆ ಬರುವುದು ಕನ್ಫರ್ಮ್ ಆಗಿದೆ.

English summary
Kannada actor and director Tarun will be directing Darshan movie. Tharun said about this in Shivanna's No 1 Yaari program. Tarun Director of Chowka Movie.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada