ಅನಿರುದ್ಧ್ ಬರ್ತಡೇ ಪಾರ್ಟಿ ವಿಡಿಯೋ: ಅಳಿಯನೊಂದಿಗೆ ನಟಿ ಭಾರತಿ ಸೂಪರ್ ಡ್ಯಾನ್ಸ್

ಕನ್ನಡ ಕಿರುತೆರೆ ಲೋಕದಲ್ಲಿ ಸಂಚಲನ ಮೂಡಿಸಿರುವ ನಟ ಅನಿರುದ್ಧ್ ಇತ್ತೀಚಿಗಷ್ಟೆ ತಮ್ಮ ಹುಟ್ಟುಹಬ್ಬವನ್ನು ಅದ್ದೂರಿಯಾಗಿ ಆಚರಿಸಿಕೊಂಡಿದ್ದಾರೆ. ಸಿನಿಮಾಗಿಂತ ಕಿರುತೆರೆಯಲ್ಲಿ ಹೆಚ್ಚು ಜನಪ್ರಿಯತೆ ಪಡೆದಿರುವ ಅನಿರುದ್ಧ್ ಅಪಾರ ಸಂಖ್ಯೆಯ ಅಭಿಮಾನಿ ಬಳಗ ಹೊಂದಿದ್ದಾರೆ. ಅನಿರುದ್ಧ್ ಜನ್ಮ ದಿನಕ್ಕೆ ಶುಭಾಶಯಗಳ ಮಹಾಪೂರವೆ ಹರಿದು ಬಂದಿದೆ.

ಅನಿರುದ್ಧ್ ನಿನ್ನೆ ಕುಟುಂಬ, ಸ್ಯಾಂಡಲ್ ವುಡ್ ಗಣ್ಯರು ಮತ್ತು ಕಿರುತೆರೆ ಸ್ನೇಹಿತರ ಜೊತೆ ಹುಟ್ಟುಹಬ್ಬ ಆಚರಿಸಿಕೊಂಡು ಸಂಭ್ರಮಿಸಿದ್ದಾರೆ. ವಿಶೇಷ ಅಂದರೆ ಅನಿರುದ್ಧ್ ಹುಟ್ಟುಹಬ್ಬ ಸಂಭ್ರಮದಲ್ಲಿ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಕೂಡ ಭಾಗಿಯಾಗಿ ವಿಶ್ ಮಾಡಿದ್ದಾರೆ.

 Actor Anirudh Celebrating His Birthday With Friends And Sandalwood Stars

ನಿನ್ನೆ ಖಾಸಗಿ ಹೋಟೆಲ್ ನಲ್ಲಿ ಅದ್ದೂರಿ ಪಾರ್ಟಿ ಹಮ್ಮಿಕೊಳ್ಳಲಾಗಿತ್ತು. ಪಾರ್ಟಿಯಲ್ಲಿ ಪ್ರಿಯಾಂಕಾ ಉಪೇಂದ್ರ, ಶಿಲ್ಪಾ ಗಣೇಶ್, ಹರ್ಷಿಕಾ ಪೂಣಚ್ಚ ಸೇರಿದಂತೆ ಸಾಕಷ್ಟು ಕಲಾವಿದರು ಭಾಗಿಯಾಗಿದ್ದರು. ಎಲ್ಲರು ಪಾರ್ಟಿಯಲ್ಲಿ ಮಸ್ತ್ ಎಂಜಾಯ್ ಮಾಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಹಿರಿಯ ನಟಿ ಭಾರತಿ ವಿಷ್ಣವರ್ಧನ್ ಡ್ಯಾನ್ಸ್ ಮಾಡಿರುವ ವಿಡಿಯೋ ಈಗ ಎಲ್ಲಾ ಕಡೆ ಹರಿದಾಡುತ್ತಿದೆ. ಹಿಂದಿ ಹಾಡಿಗೆ ಭಾರತಿ ವಿಷ್ಣುವರ್ಧನ್ ಮತ್ತು ಹರ್ಷಿಕಾ ಪೂಣಚ್ಚ ಸೇರಿದಂತೆ ಪಾರ್ಟಿಯಲ್ಲಿ ಭಾಗಿಯಾಗಿದ್ದವರು ಮಸ್ತ್ ಡ್ಯಾನ್ಸ್ ಮಾಡಿದ್ದಾರೆ. ಅನಿರುದ್ಧ್ ಸದ್ಯ ಕಿರುತೆರೆಯಲ್ಲಿ ಬ್ಯುಸಿಯಾಗಿದ್ದಾರೆ. ಸಿನಿಮಾಗಿಂತ ಕಿರುತರೆಯಲ್ಲಿ ಹೆಚ್ಚು ಖ್ಯಾತಿಗಳಿಸಿರುವ ಅನಿರುದ್ಧ್ ಆರ್ಯವರ್ಧನ್ ಮೂಲಕ ಎಲ್ಲರ ಮನಗೆದ್ದಿದ್ದಾರೆ.

More from Filmibeat

English summary
Kannada Actor Anirudh celebrating his birthday in Hotel with friends and Sandalwood stars.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X