twitter
    For Quick Alerts
    ALLOW NOTIFICATIONS  
    For Daily Alerts

    ಮತ್ತೊಬ್ಬರು ಪತ್ರಕರ್ತರ ಸಿನಿಮಾ 'ನೀನೆ ಬರಿ ನೀನೆ'

    |

    Anish Tejeshwar
    ಸ್ಯಾಂಡಲ್ ವುಡ್ ಚಿತ್ರಗಳ ಪಟ್ಟಿಗೆ ಹೊಸದೊಂದು ಚಿತ್ರದ ಸೇರ್ಪಡೆಯಾಗಿದೆ. 'ನೀನೆ ಬರಿ ನೀನೆ' ಎಂಬ ಹೆಸರಿನ ಚಿತ್ರ ಮೊನ್ನೆ ಬುಧವಾರ, 13 ಜೂನ್ 2012 ರಂದು ಸೆಟ್ಟೇರಿದೆ. ಅನೀಶ್ ನಟನೆಯ ಈ ಚಿತ್ರವನ್ನು ನಿರ್ಮಿಸಲಿರುವವರು ಅಶೋಕ್ ಖೇಣಿ. ಇತ್ತೀಚಿಗೆ ಅವರದೇ ನಿರ್ಮಾಣ ಹಾಗೂ ಅರ್ಜುನ್ ಸರ್ಜಾ ನಾಯಕತ್ವದ 'ಪ್ರಸಾದ್' ಬಿಡುಗಡೆಯಾಗಿತ್ತು.

    ಚಿತ್ರದ ನಾಯಕ ಅನೀಶ್ ತೇಜೇಶ್ವರ್ ಈ ಮೊದಲು ಪೊಲೀಸ್ ಕ್ವಾಟ್ರಸ್, ನಮ್ ಏರಿಯಾಲಿ ಒಂದಿನ ಚಿತ್ರಗಳಲ್ಲಿ ನಟಿಸಿ ಕನ್ನಡ ಚಿತ್ರರಸಿಕರಿಗೆ ಪರಿಚಿತರಾದವರು. ಇವರು ತೆಲುಗು, ತಮಿಳು ಚಿತ್ರಗಳಲ್ಲೂ ನಟಿಸಿದ್ದಾರೆ. ಕನ್ನಡದಲ್ಲಿ ಇತ್ತೀಚಿಗಷ್ಟೇ 'ನಮ್ ಲೈಫಲ್ಲಿ' ಚಿತ್ರದ ಚಿತ್ರೀಕರಣವನ್ನು ಮುಗಿಸಿದ್ದು ಅದು ಸದ್ಯದಲ್ಲೇ ಬಿಡುಗಡೆಯಾಗಲಿದೆ.

    ನೀನೆ ಬರಿ ನೀನೆ ಚಿತ್ರದ ಕಥೆ ಹಾಗೂ ನಿರ್ದೇಶನ ಬರಹಗಾರ ಹಾಗೂ ನಿರೂಪಕ ದೀಪಕ್ ತಿಮ್ಮಯ ಅವರದು. ಇವರು ಉದಯ ಪ್ರಸಾರವಾಗುತ್ತಿದ್ದ 'ಜೇಡರ ಬಲೆ' ಎಂಬ ಕಾರ್ಯಕ್ರಮದ ಮೂಲಕ ಕರ್ನಾಟಕದಾದ್ಯಂತ ಪರಿಚಿತರು. ಅಷ್ಟೇ ಅಲ್ಲ, ಟಿವಿ ಹೌಸ್ ಎಂಬ ಸಂಸ್ಥೆಯನ್ನು ಹಲವಾರು ವರ್ಷಗಳಿಂದ ಯಶಸ್ವಿಯಾಗಿ ನಡೆಸಿಕೊಂಡು ಬರುತ್ತಿರುವವರು.

    ದೀಪಕ್ ತಿಮ್ಮಯ ನಿರ್ದೇಶನದ ಈ ಚಿತ್ರಕ್ಕೆ ಚಿತ್ರಕಥೆ ಹಾಗೂ ಸಂಭಾಷಣೆ, ಕಥೆಗಾರ ವಿನಾಯಕ್ ಭಟ್ ಅವರದು. ಚಿತ್ರದಲ್ಲಿ ಆರು ಹಾಡುಗಳಿದ್ದು ಎಲ್ಲದಕ್ಕೂ ಸಾಹಿತ್ಯ ಬರೆದಿರುವವರು ಜಯಂತ್ ಕಾಯ್ಕಿಣಿ. ಸಂಗೀತ ಮನೋಮೂರ್ತಿಯವರದು. ಸೋನು ನಿಗಮ್ ಧ್ವನಿಯಲ್ಲಿ ಮೂಡಿಬಂದಿರುವ ಹಾಡುಗಳು ಈ ಚಿತ್ರದ ಬೋನಸ್.

    ಈ ಚಿತ್ರದಲ್ಲಿ ಇಬ್ಬರು ನಾಯಕಿಯರಿದ್ದು ಒಬ್ಬರು ತಶು ಕೌಶಿಕ್, ಇನ್ನೊಬ್ಬರ ಆಯ್ಕೆ ಇನ್ನಷ್ಟೇ ಆಗಬೇಕಿದೆ. ಅಂದಹಾಗೆ, ಈ ಚಿತ್ರದಲ್ಲಿ ಗಾಯಕ ಸೋನು ನಿಗಮ್ ಪ್ರಮುಖ ಪಾತ್ರವೊಂದರಲ್ಲಿ ನಟಿಸಲಿದ್ದಾರೆ. ಅದು ಯಾವ ರೀತಿಯ ಪಾತ್ರ, ಅವರೂ ನಾಯಕರಲ್ಲೊಬ್ಬರೋ ಅಥವಾ ಖಳನಾಯಕರೋ ಮುಂತಾದ ಪ್ರಶ್ನೆಗಳಿಗೆ ಸದ್ಯಕ್ಕೆ ಉತ್ತರವಿಲ್ಲ. ಒಟ್ಟಿನಲ್ಲಿ, 'ನೀನೆ ಬರಿ ನೀನೆ' ಎಂಬ ಆಕರ್ಷಕ ಶೀರ್ಷಿಕೆ ಹೊಂದಿರುವ ಚಿತ್ರ ಭಾರೀ ಸುದ್ದಿ ಮಾಡದೇ ಸೆಟ್ಟೇರಿ ಚಿತ್ರೀಕರಣ ಪ್ರಾರಂಭಿಸಿದೆ. (ಒನ್ ಇಂಡಿಯಾ ಕನ್ನಡ)

    English summary
    Actor Anish Tejeshwar Acts in a movies called Neene Bari Neene. Story and Direction by Deepak Thimmya and Screen Play and Dialogue by Vinayak Bhat. Ashok Kheni Produces this movie.
 
    Monday, June 25, 2012, 14:45
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X