ಕಬ್ಬನ್ ಪಾರ್ಕ್ ಪೊಲೀಸರ ಎದುರು ವಿಚಾರಣೆಗೆ ಹಾಜರಾದ ಸರ್ಜಾ

ನಟಿ ಶ್ರುತಿ ಹರಿಹರನ್ ನೀಡಿರುವ ಲೈಂಗಿಕ ಕಿರುಕುಳ ದೂರಿಗೆ ಸಂಬಂಧಪಟ್ಟಂತೆ ಬಹುಭಾಷಾ ನಟ ಅರ್ಜುನ್ ಸರ್ಜಾ ಇಂದು ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಗೆ ಹಾಜರ್ ಆಗಿದ್ದಾರೆ. ಈ ವೇಳೆ ಅರ್ಜುನ್ ಸರ್ಜಾಗೆ ಅಳಿಯಂದಿರಾದ ಚಿರಂಜೀವಿ ಸರ್ಜಾ ಮತ್ತು ಧ್ರುವ ಸರ್ಜಾ ಸಾಥ್ ನೀಡಿದ್ದು, ಜೊತೆಯಲ್ಲಿ ಠಾಣೆಗೆ ಆಗಮಿಸಿದ್ದರು.

ಶ್ರುತಿ ಮಾಡಿರುವ ಆರೋಪದ ಹಿನ್ನೆಲೆ ಪೊಲೀಸರು ಸರ್ಜಾಗೆ ವಿಚಾರಣೆಗೆ ಹಾಜರಾಗುವಂತೆ ತಿಳಿಸಿದ್ದರು. ಪೊಲೀಸರ ಸೂಚನೆಯಂತೆ ಅರ್ಜುನ್ ಸರ್ಜಾ ಇಂದು ಬೆಳಿಗ್ಗೆ ಠಾಣೆಗೆ ಹಾಜರಾಗಿ ವಿವರಣೆ ನೀಡಿದ್ದಾರೆ. ತನಿಖಾಧಿಕಾರಿ ಅಣ್ಣಯ್ಯ ರೆಡ್ಡಿ ಮತ್ತು ಎಸ್ ಐ ರೇಣುಕಾ ಅವರು ವಿಚಾರಣೆ ನಡೆಸಲಿದ್ದಾರೆ.

2015ರಲ್ಲಿ 'ವಿಸ್ಮಯ' ಚಿತ್ರದ ಶೂಟಿಂಗ್ ಸೆಟ್ ನಲ್ಲಿ ಹಾಗೂ ಚಿತ್ರೀಕರಣ ಮುಗಿದ ನಂತರ ಕಿರುಕುಳ ನೀಡಿದ್ದರು ಎಂದು ಆರೋಪಿಸಿ ದೂರು ನೀಡಿದ್ದರು. ಶ್ರುತಿ ಹರಿಹರನ್ ನೀಡಿರುವ ಈ ದೂರಿನ ಅನ್ವಯ ಸರ್ಜಾ ವಿರುದ್ಧ ಎಫ್ ಐ ಆರ್ ದಾಖಲಿಸಿಕೊಂಡಿದ್ದಾರೆ.

Actor Arjun Sarja attend at Cubbon Park police station

ನಂತರ ಕಿರುಕುಳ ನಡೆದಿದೆ ಎನ್ನಲಾದ ಮೂರು ಸ್ಥಳಗಳಲ್ಲಿ ಮಹಜರು ಪ್ರಕ್ರಿಯೆ ನಡೆಸಿದ್ದರು. ನಟಿ ದೂರಿನಲ್ಲಿ ಪ್ರಸ್ತಾಪಿಸಿದ್ದ ಐವರು ಸಾಕ್ಷಿಗಳ ಹೇಳಿಕೆಯನ್ನು ಕೂಡ ಪೊಲೀಸರು ಪಡೆದುಕೊಂಡಿದ್ದಾರೆ. ಈಗ ಅರ್ಜುನ್ ಸರ್ಜಾ ಅವರ ಹೇಳಿಕೆಯನ್ನ ಪಡೆಯುತ್ತಿದ್ದಾರೆ.

ಈ ಮಧ್ಯೆ ಅರ್ಜುನ್ ಸರ್ಜಾ ಅವರನ್ನ ಬಂಧಿಸುವಂತಿಲ್ಲ ಎಂದು ಹೈಕೋರ್ಟ್ ಆದೇಶ ನೀಡಿದೆ. ಹಾಗಾಗಿ, ಸರ್ಜಾಗೆ ಬಂಧನದ ಬೀತಿಯಿಲ್ಲ. ಕೇವಲ ವಿಚಾರಣೆ ಎದುರಿಸಿ, ವಾಪಸ್ ಆಗಬಹುದು. ನಂತರ ಕೋರ್ಟ್ ಆದೇಶದ ಮೆರೆಗೆ ನಡೆದುಕೊಳ್ಳಬೇಕಾಗುತ್ತೆ.

More from Filmibeat

English summary
Actor Arjun Sarja attend at Cubbon Park police station in Bengaluru. sexul harresment case filed by actor Sruthi Hariharan.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X