'ಅಭಿಮನ್ಯು' ಡಬ್ಬಿಂಗ್ ಅಂದವರಿಗೆ ಅರ್ಜುನ್ ಸರ್ಜಾ ತಿರುಗೇಟು
ಬಹುಭಾಷಾ ನಟ ಕನ್ನಡಿಗ ಅರ್ಜುನ್ ಸರ್ಜಾ ಅವರು ತಮ್ಮದೇ ನಿರ್ದೇಶನ ಮತ್ತು ನಿರ್ಮಾಣದಲ್ಲಿ 2014 ರಲ್ಲಿ 'ಅಭಿಮನ್ಯು' ಎಂಬ ದೇಶಪ್ರೇಮವನ್ನು ಸಾರುವ ಸಿನಿಮಾ ಮಾಡಿದ್ದರು. ಅಂದಹಾಗೆ ಈ ಸಿನಿಮಾ ಕನ್ನಡ, ತಮಿಳು ಮತ್ತು ತೆಲುಗು ಭಾಷೆಗಳಲ್ಲಿ ಏಕಕಾಲದಲ್ಲಿ ತೆರೆ ಕಂಡಿತ್ತು.
ಕನ್ನಡದಲ್ಲಿ 'ಅಭಿಮನ್ಯು', ತಮಿಳು ಮತ್ತು ತೆಲುಗಿನಲ್ಲಿ 'ಜೈ ಹಿಂದ್' ಎಂಬ ಹೆಸರಿನಲ್ಲಿ ತೆರೆ ಕಂಡಿತ್ತು. ತದನಂತರ ಹಿಂದಿ ಭಾಷೆಗೆ 'ಅರ್ಜುನ್ ಕ ಬದ್ಲಾ' ಎಂದು ಡಬ್ ಆಗಿತ್ತು.[ಅಕ್ಟೋಬರ್ ನಲ್ಲಿ ಅರ್ಜುನ್ ಸರ್ಜಾ 'ಅಭಿಮನ್ಯು' ]

ಈ ಚಿತ್ರಕ್ಕೆ 2014 ರಲ್ಲಿ ಎರಡನೇ ಅತ್ಯುತ್ತಮ ಪ್ರಶಸ್ತಿ ಸಂದ ಸಂದರ್ಭದಲ್ಲಿ ಹಲವಾರು ಮಂದಿ ಅದೊಂದು ಡಬ್ಬಿಂಗ್ ಸಿನಿಮಾ ಆಗಿದೆ. ಆದ್ರಿಂದ ಅದಕ್ಕೆ ಪ್ರಶಸ್ತಿ ಕೊಟ್ಟಿರುವುದು ಸರಿಯಲ್ಲ ಎಂದು ಆರೋಪ ಮಾಡಿದ್ದರು.
ಇದೀಗ ನಟ ಅರ್ಜುನ್ ಸರ್ಜಾ ಅವರು ಈ ಸಿನಿಮಾ ಡಬ್ಬಿಂಗ್ ಅಲ್ಲ ಎನ್ನುವ ಎಲ್ಲಾ ಆರೋಪಗಳಿಗೆ ಸ್ಪಷ್ಟನೆ ನೀಡುವ ಮೂಲಕ ತಿರುಗೇಟು ನೀಡಿದ್ದಾರೆ. 'ನಾನು ಅಭಿಮನ್ಯು ಚಿತ್ರವನ್ನು ಕನ್ನಡ, ತಮಿಳು ಮತ್ತು ತೆಲುಗಿನಲ್ಲಿ ಏಕಕಾಲಕ್ಕೆ ಮಾಡಿದ್ದೆ. ಮೂರು ಭಾಷೆಗಾಗಿ ಬೇರೆ ಬೇರೆಯೇ ಶೂಟಿಂಗ್ ಮಾಡಿದ್ದೆ.[ಅಪ್ಪನ ಲವ್ ಸ್ಟೋರಿಗೆ, ಮಗಳು ನಾಯಕಿ..!]

'ಆದರೆ ಕೆಲವರು ಇದು ಡಬ್ಬಿಂಗ್ ಸಿನಿಮಾ ಎಂದೆಲ್ಲಾ ಹೇಳಿದರು. ನಾನು ಅದರ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳಲಿಲ್ಲ. ಏಕೆಂದರೆ ನಾನು ತಮಿಳು ಮತ್ತು ತೆಲುಗು ಚಿತ್ರಗಳನ್ನು ಹೆಚ್ಚಾಗಿ ಮಾಡುತ್ತಿರುತ್ತೇನೆ ಮತ್ತು ಜನ ಆ ಸಿನಿಮಾಗಳ ಪೋಸ್ಟರ್ ಗಳನ್ನು ನೋಡುತ್ತಾರೆ. ಹಾಗಾಗಿ ಇದು ಡಬ್ಬಿಂಗ್ ಸಿನಿಮಾ ಅಂತ ಅಂದುಕೊಂಡಿದ್ದರೆ ಆಶ್ಚರ್ಯವಿಲ್ಲ' ಎಂಬ ಉತ್ತರ ನೀಡಿದ್ದಾರೆ.[ಅರ್ಜುನ್ ಸರ್ಜಾ ಅವರ ಹೆಂಡತಿಯಾದ ಲೂಸಿಯಾ ಬೆಡಗಿ]

'ಕನ್ನಡದಲ್ಲಿ ಸಿನಿಮಾ ನಿರ್ದೇಶಿಸಬೇಕಾದರೆ ಒಂದು ಒಳ್ಳೆಯ ಕಥೆಗಾಗಿ ಹುಡುಕುತ್ತಿದ್ದೆ. ಕಮರ್ಷಿಯಲ್ ಸಿನಿಮಾವಾದರೂ ಅದರಲ್ಲೊಂದು ಸಂದೇಶ ಇರಬೇಕೆಂದು ಆಸೆ ಆಗಿತ್ತು, ಅದರಂತೆ 'ಅಭಿಮನ್ಯು' ಚಿತ್ರದಲ್ಲಿ ಶಿಕ್ಷಣದ ಕುರಿತಾಗಿ ಹೇಳಿದ್ದೇನೆ. ಜನ ಕೂಡ ಇಷ್ಟಪಟ್ಟಿದ್ದಾರೆ. ಆ ಬಗ್ಗೆ ನನಗೆ ಸಂತೋಷ ಇದೆ. ಇದೀಗ ನನ್ನ ಆಸೆ ಎಲ್ಲಾ 'ಅಭಿಮನ್ಯು' ಚಿತ್ರದಿಂದ ಈಡೇರಿದೆ' ಎಂದು ನಟ ಅರ್ಜುನ್ ಸರ್ಜಾ ನುಡಿಯುತ್ತಾರೆ.[ಅರ್ಜುನ್ ಸರ್ಜಾ, ಮನಿಷಾ 'ಗೇಮ್' ಟ್ರೈಲರ್ ನೋಡಿದ್ರಾ?]
'ಒಳ್ಳೆಯ ಸಿನಿಮಾ ಮಾಡಬೇಕು ಅನ್ನೋದಷ್ಟೆ ನನ್ನ ಉದ್ದೇಶವಾಗಿತ್ತೇ, ಹೊರತು ಪ್ರಶಸ್ತಿಗಾಗಿ ಅಲ್ಲ, ಪ್ರಶಸ್ತಿಯನ್ನು ನಿರೀಕ್ಷಿಸಿಯೂ ಇರಲಿಲ್ಲ. ಆದರೆ ಪ್ರಶಸ್ತಿ ಬಂದಿದ್ದಕ್ಕೆ ಖುಷಿ ಇದೆ ಎಂದು ಅರ್ಜುನ್ ಸರ್ಜಾ ಸಂತಸ ವ್ಯಕ್ತಪಡಿಸಿದ್ದಾರೆ.


Click it and Unblock the Notifications












