ಅರ್ಜುನ್ ಸರ್ಜಾ ಮನೆಯಲ್ಲಿ ಮತ್ತೆ ವಿಷಾದ: ತಾಯಿ ನಿಧನ
ಚಿರಂಜೀವಿ ಸರ್ಜಾ ಅಗಲಿಕೆಯ ನೋವಿನಿಂದ ಇನ್ನೂ ಹೊರಬರದೆ ಒದ್ದಾಡುತ್ತಿರುವ ಸರ್ಜಾ ಕುಟುಂಬಕ್ಕೆ ಕುಟುಂಬದ ಹಿರಿಯರಲ್ಲಿ ಒಬ್ಬರಾಗಿದ್ದ ನಟ ರಾಜೇಶ್ ಅಗಲಿಕೆ ಆಘಾತ ಉಂಟುಮಾಡಿತ್ತು. ಈಗ ಮತ್ತೊಂದು ಆಘಾತ ಸರ್ಜಾ ಕುಟುಂಬಕ್ಕೆ ಎದುರಾಗಿದೆ.
ಸರ್ಜಾ ಕುಟುಂಬದ ಹಿರಿಯ ಸದಸ್ಯೆ ಲಕ್ಷ್ಮಿ ದೇವಮ್ಮ ಇಂದು ನಿಧನ ಹೊಂದಿದ್ದಾರೆ, ಕನ್ನಡದ ಹೆಸರಾಂತ ನಟ ಶಕ್ತಿ ಪ್ರಸಾದ್‌ರ ಪತ್ನಿ, ಅರ್ಜುನ್ ಸರ್ಜಾ, ಕಿಶೋರ್ ಸರ್ಜಾರ ತಾಯಿಯಾಗಿದ್ದ ಲಕ್ಷ್ಮಿ ದೇವಮ್ಮ ನಿಧನ ಹೊಂದಿದ್ದಾರೆ.
ಮೈಸೂರಿನಲ್ಲಿ ವಾಸವಿದ್ದ ಲಕ್ಷ್ಮಿ ದೇವಮ್ಮ ಕೆಲ ಸಮಯದಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. ಬೆಂಗಳೂರಿನ ಅಪೋಲೋ ಆಸ್ಪತ್ರೆಗೆ ಅವರನ್ನು ದಾಖಲಿಸಲಾಗಿತ್ತು. ಇಂದು ಚಿಕಿತ್ಸೆಗೆ ಸ್ಪಂದಿಸದೆ ಲಕ್ಷ್ಮಿ ದೇವಮ್ಮನವರು ನಿಧನ ಹೊಂದಿದ್ದಾರೆ. ಅವರಿಗೆ 85 ವರ್ಷ ವಯಸ್ಸಾಗಿತ್ತು.

ಕನ್ನಡದ ಖ್ಯಾತ ನಟ ಶಕ್ತಿ ಪ್ರಸಾದ್ ಅನ್ನು ಲಕ್ಷ್ಮಿ ದೇವಮ್ಮನವರು ವಿವಾಹವಾದರು. ಇವರಿಗೆ ಮೂರು ಮಂದಿ ಮಕ್ಕಳು. ಅರ್ಜುನ್ ಸರ್ಜಾ, ಕಿಶೋರ್ ಸರ್ಜಾ ಹಾಗೂ ಇನ್ನೊಬ್ಬರು.
ಕಳೆದ ಕೆಲ ತಿಂಗಳುಗಳ ಹಿಂದೆಯಷ್ಟೆ ಅರ್ಜುನ್ ಸರ್ಜಾ ತಮ್ಮ ಮಾವ ನಟ ರಾಜೇಶ್ ಅವರನ್ನು ಕಳೆದುಕೊಂಡರು. ಆ ನೋವಿನಿಂದ ಹೊರಗೆ ಬರುವ ಮುನ್ನವೇ ತಾಯಿ ಲಕ್ಷ್ಮಿ ದೇವಮ್ಮನವರನ್ನು ಕಳೆದುಕೊಂಡಿದ್ದಾರೆ. ಒಟ್ಟಿನಲ್ಲಿ ಸರ್ಜಾ ಕುಟುಂಬದಲ್ಲಿ ಸಾಲು-ಸಾಲು ವಿಷಾದಕರ ಘಟನೆಗಳು ನಡೆಯುತ್ತಲೇ ಇವೆ.


Click it and Unblock the Notifications











