For Quick Alerts
  ALLOW NOTIFICATIONS  
  For Daily Alerts

  ಜೂ. ಚಿರುಗೆ ಆಂಜನೇಯನ ದರ್ಶನ ಮಾಡಿಸಿದ ಅರ್ಜುನ್ ಸರ್ಜಾ

  |

  ಖ್ಯಾತ ನಟ ಅರ್ಜುನ್ ಸರ್ಜಾ ಕಂಡಿದ್ದ ಬಹು ವರ್ಷಗಳ ಕನಸಾದ ಸಂತಸಾದ ಸಂತಸದಲ್ಲಿದ್ದಾರೆ. ಅರ್ಜುನ್ ಸರ್ಜಾ ನಿರ್ಮಿಸಿರುವ ಆಂಜನೇಯ ದೇಗುಲ ಇತ್ತೀಚಿಗಷ್ಟೆ ಲೋಕಾರ್ಪಣೆಯಾಗಿದೆ.

  ಆಂಜನೇಯ ಸ್ವಾಮಿ ದೇವಸ್ಥಾನ ನಿರ್ಮಿಸಬೇಕು ಎಂಬುದು ಅರ್ಜುನ್ ಸರ್ಜಾರ ಅನೇಕ ವರ್ಷಗಳ ಕನಸು. ಆ ಕನಸು ಇದೀಗ ಈಡೇರಿದೆ. ಚೆನ್ನೈನ ಗುರುಗಂಬಕ್ಕಮ್ ನಲ್ಲಿ ಅರ್ಜುನ್ ಸರ್ಜಾ ಬೃಹತ್ತಾದ ಆಂಜನೇಯ ಸ್ವಾಮಿ ದೇವಾಲಯ ನಿರ್ಮಿಸಿದ್ದಾರೆ.

  ಜುಲೈ 1ರಂದು ನಡೆದ ಕುಂಭಾಭಿಷೇಕ ಕಾರ್ಯಕ್ರಮದಲ್ಲಿ ಅರ್ಜುನ್ ಸರ್ಜಾ ಇಡೀ ಕುಟುಂಬ ಭಾಗಿಯಾಗಿತ್ತು. ಪೂಜೆ, ಹೋಮ ಸೇರಿದಂತೆ ಧಾರ್ಮಿಕ ಕಾರ್ಯಕ್ರಮಗಳ ಮೂಲಕ ಹನುಮನ ದೇವಸ್ಥಾನವನ್ನು ಉದ್ಘಾಟನೆ ಮಾಡಲಾಯಿತು. ಈ ಸಮಾರಂಭಕ್ಕೆ ಎಲ್ಲರನ್ನೂ ಆಹ್ವಾನಿಸಲು ಸಾಧ್ಯವಿಲ್ಲ ಎಂದು ಉದ್ಘಾಟನಾ ಸಮಾರಂಭವನ್ನು ಲೈವ್ ಮೂಲಕ ವೀಕ್ಷಿಸುವ ಅವಕಾಶ ಕಲ್ಪಿಸಿಕೊಡಲಾಗಿತ್ತು.

  ಬೆಂಗಳೂರಿನಿಂದ ಧ್ರುವ ಸರ್ಜಾ ಮತ್ತು ಪತ್ನಿ ಪ್ರೇರಣಾ ಸೇರಿದಂತೆ ಇಡೀ ಕುಟುಂಬ ಚೆನ್ನೈಗೆ ತೆರಳಿದ್ದರು. ಆದರೆ ಜೂ. ಚಿರು ಉದ್ಘಾಟನಾ ಸಮಾರಂಭಕ್ಕೆ ಗೈರಾಗಿದ್ದರು. ಕೊರೊನಾ ಕಾರಣದಿಂದ ಜೂ. ಚಿರು ಮತ್ತು ಮೇಘನಾ ಕಾರ್ಯಕ್ರಮದಲ್ಲಿ ಭಾಗಿಯಾಗದೆ ಬೆಂಗಳೂರಿನಲ್ಲೇ ಇದ್ದರು.

  ಆದರೆ ಅರ್ಜುನ್ ಸರ್ಜಾ, ಜೂ. ಚಿರುಗೆ ಚೆನ್ನೈನಿಂದನೇ ದೇವಸ್ಥಾನದ ದರ್ಶನ ಮಾಡಿಸಿದ್ದಾರೆ. ವಿಡಿಯೋ ಕಾಲ್ ಮೂಲಕ ಜೂ. ಚಿರುಗೆ ತನ್ನ ಕನಸಿನ ದೇವಸ್ಥಾನ ತೋರಿಸಿದ್ದಾರೆ. ಜೂ. ಚಿರು ಜೊತೆ ವಿಡಿಯೋ ಕಾಲ್ ನಲ್ಲಿ ಮಾತನಾಡಿದ ಸ್ಕ್ರೀನ್ ಶಾಟ್ ಶೇರ್ ಮಾಡಿ, "ಜೂ. ಚಿರುಗಾಗಿ ದೇವಸ್ಥಾನದ ಟೂರ್. ಕೊರೊನಾ ಕಾರಣದಿಂದ ಕುಂಭಾಭಿಷಕದಲ್ಲಿ ಭಾಗಿಯಾಗಲು ಸಾಧ್ಯವಾಗಿರಲಿಲ್ಲ" ಎಂದು ಬರೆದುಕೊಂಡಿದ್ದಾರೆ.

  ಅಂತರಾಷ್ಟ್ರೀಯ ಮಟ್ಟದಲ್ಲಿ ಶ್ರೇಷ್ಟ ನಟಿಯಾದ ಹರಿಪ್ರಿಯಾ | Filmibeat Kannada

  ಕೊರೊನಾ ಕಾರಣದಿಂದಾಗಿ ಕಡಿಮೆ ಮಂದಿ ಅತಿಥಿಗಳು, ಕುಟುಂಬ ಸದಸ್ಯರ ಸಮ್ಮುಖದಲ್ಲಿ ದೇವಾಲಯದ ಲೋಕಾರ್ಪಣೆ ಕಾರ್ಯಕ್ರಮ ನಡೆದಿದೆ. ಸದ್ಯದಲ್ಲೇ ದೇವಸ್ಥಾನ ಸಾರ್ವಜನಿಕ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗಿತ್ತೆ.

  English summary
  Actor Arjun Sarja shares photo of Jr. Chiru, He takes him on a virual tour of Hanuman Temple.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X