ಸೆಲೆಬ್ರೆಟಿಗಳಲ್ಲಿ ಹೆಚ್ಚಿದ ಕೋವಿಡ್ ಪ್ರಕರಣಗಳು: ಯಾರಿಗೆಲ್ಲಾ ವಕ್ಕರಿಸಿದೆ ಕೊರೊನಾ?

ಕೊರೊನಾ ಪ್ರಕರಗಳು ಕಡಿಮೆ ಆಗುತ್ತಲೇ ಜನ ಮೈ ಮರೆಯುತ್ತಿದ್ದಾರೆ. ಆದರೆ ಈಗ ಮತ್ತೆ ಕೊರೊನಾ ಹಾವಳಿ ಆರಂಭ ಆಗಿದೆ. ದಿನೇ ದಿನೇ ಕೊರೊನಾ ಪ್ರಕರಣಗಳ ಸಂಖ್ಯೆಯಲ್ಲಿ ಹೆಚ್ಚಳ ಕಂಡುಬರುತ್ತಿದೆ. ರೂಪಾಂತರಿ ಕೊರೊನ ಓಮಿಕ್ರಾನ್ ರೂಪದಲ್ಲೂ ದೇಹ ಹೊಕ್ಕುತ್ತಿದೆ. ಇತ್ತೀಚೆಗೆ ಕೊರೊನಾ ಪ್ರಕರಣಗಳಲ್ಲಿ ಸಿನಿಮಾ ಮಂದಿಯ ಹೆಸರುಗಳು ಹೆಚ್ಚಾಗಿ ಕೇಳಿ ಬರುತ್ತಿವೆ. ಕರೀನಾ ಬಳಿಕಾ ಈಗ ಸೌತ್‌ ನಟನಿಗೆ ಕೊರೊನಾ ಬಂದಿದೆ.

ಸೆಲೆಬ್ರಿಟಿಗಳಲ್ಲಿ ಕೊರೊನಾ ಪಾಸಿಟಿವ್​ ಹೆಚ್ಚಾಗುತ್ತಿದೆ. ಇತ್ತೀಚೆಗಷ್ಟೇ ನಟಿ ಕರೀನಾ ಕಪೂರ್​ ಅವರಿಗೆ ಕೋವಿಡ್​ ಸೋಂಕು ತಗಲಿರುವ ವಿಷಯ ಬಹಿರಂಗ ಆಗಿತ್ತು. ಈಗ ನಟ ಅರ್ಜುನ್ ಸರ್ಜಾ ಅವರಿಗೆ ಕೋವಿಡ್​ ಪಾಸಿಟಿವ್​ ಆಗಿದೆ. ಈ ವಿಷಯವನ್ನು ಅವರು ಸಾಮಾಜಿಕ ಜಾಲತಾಣದಲ್ಲಿ ಬಹಿರಂಗಪಡಿಸಿದ್ದಾರೆ. ಸದ್ಯ ತಮ್ಮ ಆರೋಗ್ಯ ಸ್ಥಿತಿ ಹೇಗಿದೆ ಎಂಬುದನ್ನು ಅವರು ತಿಳಿಸಿದ್ದಾರೆ. ಜೊತೆಗೆ ಎಲ್ಲರಲ್ಲೂ ಜಾಗೃತಿ ಮೂಡಿಸುವ ಕೆಲಸ ಮಾಡಿದ್ದಾರೆ.

ಅರ್ಜುನ್ ಸರ್ಜಾ ರಿಯಾಲಿಟಿ ಶೋ ಒಂದರ ನಿರೂಪಕರಾಗಿದ್ದು, ಅದರ ಫಿನಾಲೆ ಕಾರ್ಯಕ್ರಮ ಇತ್ತೀಚೆಗಷ್ಟೇ ನಡೆದಿತ್ತು. ಚಿತ್ರೀಕರಣ ಮುಗಿದ ಬಳಿಕ ಅವರಿಗೆ ಕಡ್ಡಾಯವಾಗಿ ಕೊವಿಡ್​ ಪರೀಕ್ಷೆ ಮಾಡಿಸಲಾಯಿತು. ಆಗ ಅವರಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ. ತಮ್ಮ ಜತೆ ಇತ್ತೀಚಿನ ದಿನಗಳಲ್ಲಿ ಸಂಪರ್ಕಕ್ಕೆ ಬಂದ ಎಲ್ಲರೂ ಪರೀಕ್ಷೆ ಮಾಡಿಸಿಕೊಳ್ಳಿ ಎಂದು ಅರ್ಜುನ್​ ಸರ್ಜಾ ಮಾಹಿತಿ ರವಾನಿಸಿದ್ದಾರೆ.

Actor Arjun Sarja test positive for Covid-19

"ಎಲ್ಲರಿಗೂ ಹಾಯ್​, ನನಗೆ ಕೊವಿಡ್​ ಪಾಸಿಟಿವ್​ ಆಗಿದೆ. ಎಲ್ಲ ಅಗತ್ಯ ಕ್ರಮಗಳನ್ನು ಕೈಗೊಂಡು ನಾನು ಐಸೊಲೇಟ್​ ಆಗಿದ್ದೇನೆ. ನನ್ನ ಸಂಪರ್ಕಕ್ಕೆ ಬಂದಿರುವ ಎಲ್ಲರೂ ಕೊವಿಡ್​ ಪರೀಕ್ಷೆ ಮಾಡಿಸಿಕೊಳ್ಳಿ ಮತ್ತು ನಿಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ. ನಾನು ಈಗ ಚೆನ್ನಾಗಿದ್ದೇನೆ. ನೀವೆಲ್ಲರೂ ಸುರಕ್ಷಿತವಾಗಿರಿ. ಮಾಸ್ಕ್​ ಧರಿಸುವುದನ್ನು ಮರೆಯಬೇಡಿ. ರಾಮ ಭಕ್ತ ಹನುಮಾನ್​ ಕಿ ಜೈ" ಎಂದು ತಮ್ಮ ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ಅರ್ಜುನ್​ ಸರ್ಜಾ ಬರೆದುಕೊಂಡಿದ್ದಾರೆ.

ಈ ಮೂಲಕ ತಮ್ಮ ಸಂಪರ್ಕಕ್ಕೆ ಬಂದವರು ಎಚ್ಚರಿಕೆಯಿಂದ ಇರಲು ಸೂಚಿಸಿದ್ದಾರೆ. ಆದರೆ ಕರೀನಾ ಕಪೂರ್‌ ವಿಚಾರದಲ್ಲಿ ಇದು ಉಲ್ಟಾ ಆಗಿತ್ತು. ಕೊರೊನಾ ಇದ್ದರೂ ಹಲವರ ಸಂಪರ್ಕಕ್ಕೆ ಕರೀನಾ ಬಂದಿದ್ದರು. ಹಾಗಾಗಿ ಆಕೆಯ ಸಂಪರ್ಕಕ್ಕೆ ಬಂದವರಲ್ಲಿ ಕೊರೊನಾ ಕಾಣಿಸಿಕೊಂಡಿದೆ. ಇನ್ನು ನಟ ಕಮಲ್‌ ಹಾಸನ್‌ ಕೂಡ ಕೊರೊನಾ ಬಳಿಕ ಚೇತರಿಸಿಕೊಂಡಿದ್ದಾರೆ.

More from Filmibeat

English summary
Actor Arjun Sarja test positive for Covid-19, Many Celebrities In The List, Know More,
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X