Aishwarya Sarja Engagement: ನಟ ಉಮಾಪತಿ ಜೊತೆ ಅರ್ಜುನ್ ಸರ್ಜಾ ಪುತ್ರಿ ಐಶ್ವರ್ಯಾ ಅದ್ಧೂರಿ ನಿಶ್ಚಿತಾರ್ಥ

ಬಹುಭಾಷಾ ನಟ ಅರ್ಜುನ್ ಸರ್ಜಾ ಅವರ ಪುತ್ರಿ ಐಶ್ವರ್ಯಾ ಸರ್ಜಾ ಶುಕ್ರವಾರ (ಅಕ್ಟೋಬರ್ 27) ಚೆನ್ನೈನಲ್ಲಿ ಅಧಿಕೃತವಾಗಿ ಹಸೆಮಣೆ ಏರಲು ಸಜ್ಜಾಗಿದ್ದಾರೆ. ತಮಿಳು ಹಾಸ್ಯನಟ ತಂಬಿ ರಾಮಯ್ಯ ಪುತ್ರ ಉಮಾಪತಿ ಜೊತೆ ಕುಟುಂಬ ಸದಸ್ಯರ ಸಮ್ಮುಖದಲ್ಲಿ ಅದ್ಧೂರಿಯಾಗಿ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ.

ಕನ್ನಡ ಸಿನಿರಂಗದಲ್ಲಿ 'ಪ್ರೇಮಬರಹ' ಬರೆಯಲು ಹೊರಟಿದ್ದ ಚೆಲುವೆ ಈಗ ಹಸೆಮಣೆ ಏರಲಿದ್ದಾರೆ. ಕೆಲ ದಿನಗಳಿಂದ ತಮಿಳು ಸಿನಿ ವಲಯದಲ್ಲಿ ಐಶ್ವರ್ಯಾ ಸರ್ಜಾ ಮತ್ತು ಉಮಾಪತಿ ರಾಮಯ್ಯ ಪ್ರೀತಿಯಲ್ಲಿ ಬಿದ್ದಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದ್ದು, ಇಂದು ಅವರ ಸಂಬಂಧಕ್ಕೆ ಅಧಿಕೃತ ಮುದ್ರೆ ಬಿದ್ದಿದೆ.

Actor Arjun Sarjas daughter Aishwarya Sarja engaged with Thambi Ramaiah’s son Umapathy

ಅರ್ಜುನ್ ಪುತ್ರಿ ಐಶ್ವರ್ಯ ಅಧಿಕೃತವಾಗಿ ನಟ ಉಮಾಪತಿ ರಾಮಯ್ಯ ಜೊತೆಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಕನ್ನಡ, ತೆಲುಗು, ತಮಿಳಿನಲ್ಲಿ ಆ್ಯಕ್ಷನ್ ಹೀರೋ ಇಮೇಜ್ ಹೊಂದಿರುವ ನಟ ಅರ್ಜುನ್ ಸರ್ಜಾ ಇಂದಿನವರೆಗೂ ಸಿನಿಮಾ ರಂಗದಲ್ಲಿ ತಮ್ಮದೆ ಛಾಪು ಮೂಡಿಸಿದ್ದಾರೆ. ನಟನೆ ಜೊತೆಗೆ ಈ ನಡುವೆ ನಿರ್ದೇಶಕರಾಗಿಯೂ ಸಿನಿಮಾ ನಿರ್ದೇಶನ ಮಾಡುತ್ತಿದ್ದಾರೆ.

ತಮ್ಮ ಮಗಳು 'ಐಶ್ವರ್ಯ ಸರ್ಜಾ' ಅವರನ್ನು ನಾಯಕಿಯಾಗಿ ಮಾಡಲು ಪ್ರಯತ್ನ ಪಟ್ಟಿದ್ದ ಅವರು, 5 ವರ್ಷಗಳ ಹಿಂದೆ ಅ 'ಪ್ರೇಮ ಬರಹ' ಚಿತ್ರದಲ್ಲಿ ಐಶ್ವರ್ಯಾ ಅವರನ್ನು ನಾಯಕಿಯಾಗಿ ಲಾಂಚ್ ಮಾಡಿದ್ದರು. ಕಿರುತೆರೆಯಲ್ಲಿ ಖ್ಯಾತಿ ಪಡೆದಿದ್ದ ಚಂದನ್ ಜೋಡಿಯಾಗಿ ನಟಿ ಸಿನಿಮಾದಲ್ಲಿ ನಟಿಸಿದ್ದರು. ಇದೇ ಸಿನಿಮಾ ತಮಿಳಿಗೂ ಡಬ್ ಆಗಿತ್ತು. ಆ ನಂತರ ಯಾವುದೇ ಸಿನಿಮಾದಲ್ಲಿ ಐಶ್ವರ್ಯ ನಟಿಸಲಿಲ್ಲ. ಈಗ ವೈವಾಹಿಕ ಜೀವನಕ್ಕೆ ಕಾಲಿಡುತ್ತಿದ್ದಾರೆ.

ಉಮಾಪತಿ ರಾಮಯ್ಯ ಯಾರು...?

ಐಶ್ವರ್ಯಾ ಸರ್ಜಾ ಮದುವರಯಾಗುತ್ತಿರುವ ಉಮಾಪತಿ ರಾಮಯ್ಯ ತಮಿಳಿನ ಹಾಸ್ಯನಟ 'ತಂಬಿ ರಾಮಯ್ಯ' ಅವರ ಪುತ್ರ. ತಮಿಳು ಇಂಡಸ್ಟ್ರಿಯಲ್ಲಿ ತಮ್ಮ ಹಾಸ್ಯದ ಮೂಲಕ ಪ್ರೇಕ್ಷಕರನ್ನು ರಂಜಿಸುತ್ತಿರುವ ತಂಬಿ ರಾಮಯ್ಯ ಅವರ ಪುತ್ರ ಉಮಾಪತಿ ಕೂಡ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ.

Actor Arjun Sarjas daughter Aishwarya Sarja engaged with Thambi Ramaiah’s son Umapathy

ಉಮಾಪತಿ ರಾಮಯ್ಯ ತಮಿಳಿನಲ್ಲಿ ಹೀರೋ ಆಗಿ ಸಿನಿಮಾ ಮಾಡುತ್ತಿದ್ದಾರೆ. ಇದುವರೆಗೆ ನಾಲ್ಕು ಚಿತ್ರಗಳಲ್ಲಿ ನಟಿಸಿದ್ದಾರೆ. ಸದ್ಯ 'ದೇವದಾಸ್' ಚಿತ್ರದಲ್ಲಿ ಕೆಲಸ ಮಾಡುತ್ತಿದ್ದಾರೆ. ಟಿವಿ ಕಾರ್ಯಕ್ರಮವನ್ನೂ ಮಾಡುತ್ತಿದ್ದಾರೆ. ಸದ್ಯ, ನಿಶ್ಚಿತಾರ್ಥದ ಫೋಟೋಗಳು ಮತ್ತು ವೀಡಿಯೊಗಳು ಅಂತರ್ಜಾಲದಲ್ಲಿ ವೈರಲ್ ಆಗುತ್ತಿವೆ. ನಿಶ್ಚಿತಾರ್ಥ ಸಮಾರಂಭವನ್ನು ಎರಡು ಕುಟುಂಬ ಸದಸ್ಯರ ಸಮ್ಮುಖದಲ್ಲಿ ಮಾಡಲಾಗಿದೆ. ಡಿಸೆಂಬರ್‌ನಲ್ಲಿ ಮದುವೆ ಎಂಬ ಮಾತುಗಳನ್ನು ಮೂಲಗಳು ತಿಳಿಸಿವೆ. ಆದರೆ ಅಧಿಕೃತವಾಗಿ ಕುಟುಂಬ ಸದಸ್ಯರು ತಿಳಿಸಿಲ್ಲ.

More from Filmibeat

English summary
Arjun Sarjas daughter Aishwarya Sarja engaged with Umapathy Ramaiah.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X