For Quick Alerts
  ALLOW NOTIFICATIONS  
  For Daily Alerts

  ರಾಷ್ಟ್ರಗೀತೆಗೆ ಎದ್ದು ನಿಲ್ಲದವರಿಗೆ ಚಿತ್ರಮಂದಿರದಲ್ಲೇ ಕ್ಲಾಸ್ ತೆಗೆದುಕೊಂಡ ಕನ್ನಡ ನಟ, ನಟಿ

  |

  ಸಿನಿಮಾ ನೋಡುವಾಗ ರಾಷ್ಟ್ರಗೀತೆ ಬರುತ್ತಿದ್ದ ಹಾಗೆ, ಎಲ್ಲರೂ ಎದ್ದು ನಿಂತು ಅದಕ್ಕೆ ಗೌರವ ನೀಡುತ್ತಾರೆ. ಆದರೆ, ಕೆಲವೊಮ್ಮೆ ಕೆಲವರು ರಾಷ್ಟ್ರಗೀತೆ ಬರುತ್ತಿದ್ದರು, ಸೀಟ್ ನಿಂದ ಮೇಲೆ ಏಳುವುದಿಲ್ಲ.

  ಈ ರೀತಿ ರಾಷ್ಟ್ರಗೀತೆಗೆ ಅಗೌರವವಾಗಿ ನಡೆದುಕೊಂಡವರ ಮೇಲೆ ಕನ್ನಡದ ನಟ ಹಾಗೂ ನಟಿ ಕ್ಲಾಸ್ ತೆಗೆದುಕೊಂಡಿದ್ದಾರೆ. ಚಿತ್ರಮಂದಿರದಲ್ಲಿಯೇ ಅಂತಹ ಪ್ರೇಕ್ಷಕರ ವಿರುದ್ಧ ಅಸಮಾಧಾನ ಹೊರ ಹಾಕಿದ್ದಾರೆ.

  ಸಾಧುಕೋಕಿಲ ವಿರುದ್ಧ ಅತ್ಯಾಚಾರ ಆರೋಪ: ಸರ್ಕಾರಕ್ಕೆ ನೋಟಿಸ್ ನೀಡಿದ ಹೈಕೋರ್ಟ್ಸಾಧುಕೋಕಿಲ ವಿರುದ್ಧ ಅತ್ಯಾಚಾರ ಆರೋಪ: ಸರ್ಕಾರಕ್ಕೆ ನೋಟಿಸ್ ನೀಡಿದ ಹೈಕೋರ್ಟ್

  ನಟ ಅರು ಗೌಡ, ನಟಿ ಐಶ್ವರ್ಯ ಹಾಗೂ ಸ್ನೇಹಿತರು ಬೆಂಗಳೂರಿನ ಪಿವಿಆರ್ ಒಂದರಲ್ಲಿ ಸಿನಿಮಾ ನೋಡಲು ಹೋಗಿದ್ದರು. ಎಂದಿನಂತೆ ರಾಷ್ಟ್ರಗೀತೆ ಬಂತು. ಎಲ್ಲ ಪ್ರೇಕ್ಷಕರು ಎದ್ದು ನಿಂತು ಗೌರವ ನೀಡಿದರೆ, ಐದಾರು ಜನರ ಗ್ಯಾಂಗ್ ಸುಮ್ಮನೆ ಕುಳಿತಿದ್ದರು. ಇದರಿಂದ ಕೋಪಗೊಂಡ ಅರು ಮತ್ತು ಐಶ್ವರ್ಯ ಹೋಗಿ ಅವರಿಗೆ ಪ್ರಶ್ನೆ ಮಾಡಿದರು.

  ಅರು ಮತ್ತು ಐಶ್ವರ್ಯ ಪ್ರಶ್ನೆಗೆ ಮೊದಲು ಸರಿಯಾಗಿ ಪ್ರತಿಕ್ರಿಯೆ ನೀಡಲಿಲ್ಲ. ಹಾಗಾಗಿ, ಅವರ ಜೊತೆಗೆ ಮಾತಿನ ಚಕಮಕಿ ಆಗಿದೆ. ನಂತರ ಸಹ ಪ್ರೇಕ್ಷಕರು ಅರು ಹಾಗೂ ಐಶ್ವರ್ಯಗೆ ಸಾಥ್ ನೀಡಿದ್ದಾರೆ. ಕೊನೆಗೆ ಅಲ್ಲಿದ್ದ ಜನರು ಅವರನ್ನು ಚಿತ್ರಮಂದಿರದಿಂದ ಹೊರಗೆ ಕಳುಹಿಸಿದ್ದಾರೆ. ಜೈ ಭಾರತ್ ಮಾತಾಕಿ ಎಂದು ಜೈಕಾರ ಹಾಕಿದ್ದಾರೆ.

  ಮಿ. ಪರ್ಫೆಕ್ಷನಿಸ್ಟ್ ಆಮೀರ್ ಖಾನ್ ವಿವಾದದ ಸರಮಾಲೆಗೆ ಮತ್ತೊಂದು ಸೇರ್ಪಡೆಮಿ. ಪರ್ಫೆಕ್ಷನಿಸ್ಟ್ ಆಮೀರ್ ಖಾನ್ ವಿವಾದದ ಸರಮಾಲೆಗೆ ಮತ್ತೊಂದು ಸೇರ್ಪಡೆ

  ಅಂದಹಾಗೆ, ನಟ ಅರು ಗೌಡ 'ಯುವರತ್ನ' ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಹಿಂದೆ ನಾಟಿ ಕೋಳಿ 'ಮುದ್ದು ಮನಸೇ' ಸಿನಿಮಾಗಳಲ್ಲಿಯೂ ಇವರು ಕಾಣಿಸಿಕೊಂಡಿದ್ದರು. ನಟಿ ಐಶ್ವರ್ಯ 'ಪ್ಯಾಟೆ ಹುಡ್ಗಿರ್ ಹಳ್ಳಿ ಲೈಫ್' ಕಾರ್ಯಕ್ರಮದ ಸ್ಪರ್ಧಿಯಾಗಿದ್ದರು. ಆ ಬಳಿಕ 'ಜಂಗಲ್ ಜಾಕಿ', 'ಪುಣ್ಯತ್ ಗಿತ್ತಿಯರು' ಸಿನಿಮಾದಲ್ಲಿ ನಟಿಸಿದರು.

  English summary
  Kannada actor Aru Gowda and actress Aishwarya unhappy with the people who are not giving respect to national anthem.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X