'ಯುವರತ್ನ' ಗ್ಯಾಂಗ್ ನಲ್ಲಿ ಮತ್ತೊಬ್ಬ ನಟ, ಅಪ್ಪುಗೆ ಅರು ವಿಲನ್?
Recommended Video

ಪವರ್ ಸ್ಟಾರ್ ಪುನೀತ್ ಅವರ 'ಯುವರತ್ನ' ಸಿನಿಮಾದ ಶೂಟಿಂಗ್ ಸದ್ಯ ನಡೆಯುತ್ತಿದೆ. ಚಿತ್ರತಂಡಕ್ಕೆ ಇದೀಗ ಮತ್ತೊಬ್ಬ ನಟ ಸೇರಿಕೊಂಡಿದ್ದಾರೆ. ಅರು ಗೌಡ ಸಿನಿಮಾದಲ್ಲಿ ನಟಿಸುತ್ತಿದ್ದಾರೆ.
'ಯುವರತ್ನ' ಚಿತ್ರದಲ್ಲಿ ನಟ ಅರು ಗೌಡ ನಟಿಸುತ್ತಿದ್ದಾರೆ. ಚಿತ್ರೀಕರಣದ ವೇಳೆ ಪುನೀತ್ ಹಾಗೂ ನಿರ್ದೇಶಕ ಸಂತೋಷ್ ಆನಂದ್ ರಾಮ್ ಜೊತೆಗೆ ಫೋಟೋ ತೆಗೆದುಕೊಂಡಿರುವ ಅವರು ಧನ್ಯವಾದ ತಿಳಿಸಿದ್ದಾರೆ.
ಅಂದಹಾಗೆ, ಸಿನಿಮಾದಲ್ಲಿ ಅರು ಗೌಡ ಪಾತ್ರ ಏನು ಎನ್ನುವುದಕ್ಕೆ ಸಣ್ಣ ಸುಳಿವು ಸಿಕ್ಕಿದೆ. ಚಿತ್ರದಲ್ಲಿ ಅವರ ಪಾತ್ರಕ್ಕೆ ನೆಗೆಟಿವ್ ಶೇಡ್ ಇದೆಯಂತೆ. ಕಾಲೇಜ್ ಹುಡುಗನ ಪಾತ್ರ ಮಾಡುತ್ತಿರುವ ಪುನೀತ್ ವಿರುದ್ಧದ ಗ್ಯಾಂಗ್ ನಲ್ಲಿ ಅರು ಗೌಡ ಇರಲಿದ್ದಾರೆ.

ಸಾಮಾನ್ಯವಾಗಿ ಕಾಲೇಜ್ ಎಂದ ಮೇಲೆ ಒಂದು ಹೀರೋ ಗ್ಯಾಂಗ್ ಇದ್ದರೆ, ಇನ್ನೊಂದು ವಿಲನ್ ಗ್ಯಾಂಗ್ ಇದ್ದೇ ಇರುತ್ತದೆ. ಆ ಗ್ಯಾಂಗ್ ನಲ್ಲಿ ಅರು ಗೌಡ ಇರುತ್ತಾರೆ. ಅರು ಅವರ ಸಾಕಷ್ಟು ದೃಶ್ಯಗಳು ಪುನೀತ್ ಜೊತೆಗೆ ಇರಲಿದೆ. ಸುಮಾರು 15 ದಿನಗಳ ಕಾಲ ಅವರು ಚಿತ್ರೀಕರಣದಲ್ಲಿ ಭಾಗಿಯಾಗಲಿದ್ದಾರೆ.

ಇತ್ತೀಚಿಗಷ್ಟೆ 'ಯುವರತ್ನ' ಸಿನಿಮಾಗೆ ನಾಯಕಿಯ ಆಯ್ಕೆ ಸಹ ಆಗಿದೆ. ನಟಿ ಸಯ್ಯೇಶಾ ಚಿತ್ರದ ಲೀಡ್ ರೋಲ್ ನಲ್ಲಿ ನಟಿಸುತ್ತಿದ್ದಾರೆ.


Click it and Unblock the Notifications











