ತಮಿಳಿನಲ್ಲಿ ಬರ್ತಿರೋ 'ಬೆಲ್ ಬಾಟಂ'ಗೆ ಇವರೇ ನಾಯಕರಂತೆ!
ಪ್ರತಿ ಸಿನಿಮಾದಲ್ಲಿಯೂ ಹೊಸತನವನ್ನು ಪ್ರಯತ್ನ ಮಾಡುವ ನಿರ್ದೇಶಕ ಜಯತೀರ್ಥ ಮತ್ತೆ 'ಬೆಲ್ ಬಾಟಂ' ಎಂಬ ಹೊಸ ರೀತಿಯ ಸಿನಿಮಾ ಮೂಲಕ ಬಂದಿದ್ದಾರೆ. ಫೆಬ್ರವರಿ 15 ರಂದು ಬಿಡುಗಡೆಯಾಗಿರುವ ಈ ಸಿನಿಮಾಗೆ ಎಲ್ಲೆಡೆ ಒಳ್ಳೆಯ ಪ್ರತಿಕ್ರಿಯೆ ಸಿಕ್ಕಿದೆ.
ಕನ್ನಡದ ಪ್ರೇಕ್ಷಕರನ್ನು ರಂಜಿಸುತ್ತಿರುವ ಈ ಸಿನಿಮಾ ಈಗ ತಮಿಳು ಪ್ರೇಕ್ಷಕರ ಮುಂದೆ ಸಹ ಬರುತ್ತಿದೆ. ಕನ್ನಡದ ಸಿನಿಮಾಗಳು ಬೇರೆ ಬೇರೆ ಭಾಷೆಗಳಲ್ಲಿ ರಿಮೇಕ್ ಆಗುತ್ತಿದ್ದು, ಈಗ 'ಬೆಲ್ ಬಾಟಂ' ಸಹ ಕಾಲಿವುಡ್ ನಲ್ಲಿ ಬರುತ್ತಿದೆ.
ತಮಿಳಿನಲ್ಲಿ ರಿಮೇಕ್ ಆಗುತ್ತಿರುವ ಈ ಸಿನಿಮಾದ ನಾಯಕ ಯಾರು ಎನ್ನುವ ಕುತೂಹಲ ಹೆಚ್ಚಾಗಿದೆ. ರಿಷಬ್ ಶೆಟ್ಟಿ ಪಾತ್ರದಲ್ಲಿ ಕಾಲಿವುಡ್ ಸ್ಟಾರ್ ನಟಿಸುತ್ತಿದ್ದಾರೆ ಎನ್ನುವ ಸುದ್ದಿ ಇದೆ. ಮುಂದೆ ಓದಿ....

ರಿಷಬ್ ಶೆಟ್ಟಿ ಪಾತ್ರದಲ್ಲಿ ಆರ್ಯ
ನಿರ್ದೇಶಕನಾಗಿ ಯಶಸ್ಸು ಕಂಡಿದ್ದ ರಿಷಬ್ ಶೆಟ್ಟಿ 'ಬೆಲ್ ಬಾಟಂ' ಧರಿಸಿದ ಮೇಲೆ ಹೀರೋ ಆಗಿಯೂ ಮಿಂಚಿದರು. ಅಂದಹಾಗೆ, ರಿಷಬ್ ಮಾಡಿದ್ದ ದಿವಾಕರ ಪಾತ್ರದಲ್ಲಿ ಇದೀಗ ತಮಿಳು ನಟ ಆರ್ಯ ನಟಿಸುವ ಸಾಧ್ಯತೆ ಇದೆಯಂತೆ. ಈ ಚಿತ್ರದ ಬಗ್ಗೆ ಈಗಾಗಲೇ ಅವರ ಜೊತೆಗೆ ಮಾತುಕತೆ ನಡೆಯುತ್ತಿದೆಯಂತೆ.

ಹರಿಪ್ರಿಯಾ ಅವರೇ ನಾಯಕಿ?
ಸಿನಿಮಾದಲ್ಲಿ ಕುಸುಮ ಪಾತ್ರ ಮಾಡಿದ್ದ ಹರಿಪ್ರಿಯಾ ಪ್ರೇಕ್ಷಕರ ಗಮನ ಸೆಳೆದಿದ್ದಾರೆ. ಹೀಗಾಗಿ ಅವರ ಪಾತ್ರವನ್ನು ತಮಿಳಿನಲ್ಲಿ ಕೂಡ ಅವರೇ ನಿರ್ವಹಿಸುವ ಸಾಧ್ಯತೆ ಹೆಚ್ಚಿದೆ. ಕುಸುಮ ಲುಕ್, ಆ ಪಾತ್ರವನ್ನು ಆವರಿಸಿಕೊಂಡಿದ್ದ ಹರಿಪ್ರಿಯಾ ಕಾಲಿವುಡ್ ನಲ್ಲಿಯೂ ಕಮಾಲ್ ಮಾಡಲಿದ್ದಾರೆ.

ದೊಡ್ಡ ಮೊತ್ತಕ್ಕೆ ರಿಮೇಕ್ ಹಕ್ಕು
ರಿಮೇಕ್ ವಿಚಾರದ ಬಗ್ಗೆ ನಿರ್ದೇಶಕ ಜಯತೀರ್ಥ ಫಿಲ್ಮಿಬೀಟ್ ಕನ್ನಡದ ಜೊತೆಗೆ ಮಾತನಾಡಿದರು. ಒಂದು ಒಳ್ಳೆಯ ಮೊತ್ತಕ್ಕೆ ರಿಮೇಕ್ ಹಕ್ಕನ್ನು ಮಾರಾಟ ಮಾಡಿದ್ದೇವೆ ಎಂದರು. ಸಿನಿಮಾಗೆ ಸಿಕ್ಕ ಒಳ್ಳೆಯ ಪ್ರತಿಕ್ರಿಯೆಗೆ ಸಂತಸ ವ್ಯಕ್ತಪಡಿಸಿದರು.

ಮಾರ್ಚ್ 1ಕ್ಕೆ ಫಸ್ಟ್ ಲುಕ್
ಕಾಲಿವುಡ್ ನ 'ಬೆಲ್ ಬಾಟಂ' ಸಿನಿಮಾದ ಫಸ್ಟ್ ಲುಕ್ ಮಾರ್ಚ್ 1 ರಂದು ರಿಲೀಸ್ ಆಗಲಿದೆ. ಸದ್ಯಕ್ಕೆ, ದಿವಾಕರ್ ಪಾತ್ರದ ಲುಕ್ ಟೆಸ್ಟ್ ನಡೆಯುತ್ತಿದೆ. ಹರಿಪ್ರಿಯಾ ಜೊತೆಗೆ ಸಹದೇವ ಪಾತ್ರ ಮಾಡಿದ್ದ ಪ್ರಮೋದ್ ಶೆಟ್ಟಿ ಸಹ ತಮಿಳಿನಲ್ಲಿ ನಟಿಸುವ ಸಾಧ್ಯತೆ ಇದೆ.


Click it and Unblock the Notifications