59 ವರ್ಷದ ಬಾಲಕೃಷ್ಣ ಸ್ಟೈಲ್ ಗೆ ಟಾಲಿವುಡ್ ಫಿದಾ
ತೆಲುಗು ನಟ ಬಾಲಕೃಷ್ಣ ಹೊಸ ಸಿನಿಮಾದ ಲುಕ್ ರಿವೀಲ್ ಆಗಿದೆ. ಈ ಸಿನಿಮಾದಲ್ಲಿ ಬಾಲಯ್ಯ ಸಿಕ್ಕಾಪಟ್ಟೆ ಸ್ಟೈಲಿಶ್ ಆಗಿ ಕಾಣಿಸಿಕೊಂಡಿದ್ದಾರೆ.
ಬಾಲಕೃಷ್ಣ ಎಂದ ತಕ್ಷಣ ಅವರ ಆಕ್ಷನ್ ಅವತಾರ, ಅಬ್ಬರದ ಡೈಲಾಗ್ ಗಳು ನೆನಪಿಗೆ ಬರುತ್ತದೆ. ಆದರೆ, ಅದರ ಜೊತೆಗೆ ಹೊಸ ಲುಕ್ ನಲ್ಲಿ ಬಾಲಯ್ಯ ಬಂದಿದ್ದಾರೆ. ಸೂಟು ಬೂಟ್ ತೊಟ್ಟು ಸಖತ್ ಸ್ಟೈಲಿಶ್ ಆಗಿದ್ದಾರೆ. ಚಿತ್ರ ಫೋಟೋವನ್ನು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
Recommended Video
59 ವರ್ಷದ ಬಾಲಕೃಷ್ಣ ಫೋಟೋದಲ್ಲಿ ಯಂಗ್ ಆಗಿ ಕಾಣುತ್ತಿದ್ದಾರೆ. ಅವರ ಹೇರ್ ಸ್ಟೈಲ್ ಕೂಡ ಬದಲಾಗಿದೆ. ಫೋಟೋ ನೋಡಿದ ತಕ್ಷಣ ಇದು ಬಾಲಕೃಷ್ಣ ಅವರೆನಾ... ಎಂದು ಅಚ್ಚರಿ ಆಗುತ್ತದೆ. ಅಂದಹಾಗೆ, ಬಾಲಕೃಷ್ಣ ಈ ರೀತಿ ಬದಲಾಗಿರುವುದು ತಮ್ಮ 105ನೇ ಸಿನಿಮಾಗಾಗಿ.

ಈ ಸಿನಿಮಾವನ್ನು ದಕ್ಷಿಣ ಭಾರತದ ಖ್ಯಾತ ನಿರ್ದೇಶಕ ಕೆ ಎಸ್ ರವಿಕುಮಾರ್ ನಿರ್ದೇಶನ ಮಾಡುತ್ತಿದ್ದಾರೆ. ಇದು ಬಾಲಕೃಷ್ಣ ಮತ್ತು ಕೆ ಎಸ್ ರವಿಕುಮಾರ್ ಕಾಂಬಿನೇಶನ್ ನಲ್ಲಿ ಬರುತ್ತಿರುವ ಎರಡನೇ ಸಿನಿಮಾವಾಗಿದೆ. ಈ ಹಿಂದೆ 'ಜೈ ಸಿಂಹ' ಚಿತ್ರದಲ್ಲಿ ಈ ಜೋಡಿ ಒಂದಾಗಿದ್ದರು.

ಈ ಹೊಸ ಸಿನಿಮಾದಲ್ಲಿ ಇಬ್ಬರು ನಾಯಕಿಯರಿದ್ದಾರೆ. ವೇದಿಕಾ ಮತ್ತು ಸೋನಲ್ ಚೌಹಾಣ್ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಸೋನಲ್ ಚೌಹಾಣ್ ಈ ಹಿಂದೆ ಎರಡು ಸಿನಿಮಾಗಳಲ್ಲಿ ಬಾಲಕೃಷ್ಣ ಜೊತೆಗೆ ತೆರೆ ಹಂಚಿಕೊಂಡಿದ್ದರು.


Click it and Unblock the Notifications











