»   » ಯಪ್ಪಾ.... 'ಬಿಗ್ ಬಾಸ್' ಭುವನ್ ಗೆ ಸಿಕ್ಕಿರುವ ಹೊಸ ಟೈಟಲ್ ಕೇಳಿದ್ರಾ?

ಯಪ್ಪಾ.... 'ಬಿಗ್ ಬಾಸ್' ಭುವನ್ ಗೆ ಸಿಕ್ಕಿರುವ ಹೊಸ ಟೈಟಲ್ ಕೇಳಿದ್ರಾ?

Posted By:
Subscribe to Filmibeat Kannada

ನಟ ಭುವನ್ ಪೊನ್ನಣ್ಣ ಇಷ್ಟು ದಿನ 'ಬಿಗ್ ಬಾಸ್' ಭುವನ್ ಅಂತಲೇ ಹೆಚ್ಚು ಗುರುತಿಸಿಕೊಂಡಿದ್ದರು. ಇನ್ಮುಂದೆ ಭುವನ್ ಅವರನ್ನ ನೀವು ಬಿಗ್ ಬಾಸ್ ಭುವನ್ ಎಂದು ಕರೆಯುವಂತಿಲ್ಲ. ಯಾಕಂದ್ರೆ, ಭುವನ್ ಅವರಿಗೆ ಹೊಸ ಟೈಟಲ್ ಸಿಕ್ಕಿದೆ.

ಹೌದು, ಭುವನ್ ಪೊನ್ನಣ್ಣ ಅವರಿಗೆ 'ರಾಂಧವ' ಚಿತ್ರತಂಡ ಹೊಸ ಬಿರುದು ನೀಡಿದೆ. ಇತ್ತೀಚೆಗಷ್ಟೇ 'ರಾಂಧವ' ಚಿತ್ರದ ಟೀಸರ್ ಬಿಡುಗಡೆಯಾಗಿತ್ತು. ಈ ಟೀಸರ್ ನಲ್ಲಿ ಭುವನ್ ಅವರಿಗೆ ನೀಡಲಾಗಿರುವ ಹೊಸ ಟೈಟಲ್ ಎಲ್ಲರ ಗಮನ ಸೆಳೆಯುತ್ತಿದೆ.

'ಬಿಗ್ ಬಾಸ್' ನಂತರ ಭುವನ್ ರಿಜೆಕ್ಟ್ ಮಾಡಿದ ಕಥೆಗಳೆಷ್ಟು?

Actor Bhuvan Ponnanna gets new title Attitude Icon

ಭುವನ್ ಗೆ 'ರಾಂಧವ' ಚಿತ್ರತಂಡ ಕೊಟ್ಟಿರುವ ಬಿರುದು ''Attitude Icon''. ಹೀಗಾಗಿ, ಭುವನ್ ಇನ್ಮುಂದೆ Attitude Icon ಎಂದೇ ಕರೆಯಿಸಿಕೊಳ್ಳಲಿದ್ದಾರೆ. 'ರಾಂಧವ' ಚಿತ್ರದ ಟೀಸರ್, ಪೋಸ್ಟರ್ ಚಿತ್ರದ ಬಗ್ಗೆ ಕುತೂಹಲ ಮೂಡಿಸಿದೆ.

ಸುನೀಲ್‌ ಎಸ್‌ ಆಚಾರ್ಯ ಈ ಚಿತ್ರವನ್ನ ನಿರ್ದೇಶನ ಮಾಡುತ್ತಿದ್ದು, ಶ್ರೀಯಾ ಅಂಚನ್ ನಾಯಕಿ ಆಗಿ ಅಭಿನಯಿಸುತ್ತಿದ್ದಾರೆ. ಜಹಾಂಗೀರ್, ಲಕ್ಷೀ ಹೆಗಡೆ, ಪ್ರದೀಪ್, ದಯಾನಂದ, ಕುರಿಪ್ರತಾಪ್ ಮುಖ್ಯಭೂಮಿಕೆಯಲ್ಲಿ ನಟಿಸುತ್ತಿದ್ದಾರೆ. ಈಗಾಗಲೇ ಚಿತ್ರದ ಚಿತ್ರೀಕರಣ ಶುರುವಾಗಿದೆ.

English summary
Kannada Actor Bhuvan Ponnanna has got new title 'Attitude Icon' from Kannada Movie Team Randhawa.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada