ನಟ, ಛಾಯಾಗ್ರಾಹಕ ಉದಯ್ ಹುತ್ತಿನಗದ್ದೆ ನಿಧನ

ನಟ, ಜನಪ್ರಿಯ ಛಾಯಾಗ್ರಾಹಕ ಆಗಿದ್ದ ಉದಯ್ ಹುತ್ತಿನಗದ್ದೆ ನಿಧನ ಹೊಂದಿದ್ದಾರೆ. ಉದಯ್ ಕಲರ್‌ ಲ್ಯಾಬ್ ಮಾಲೀಕರಾಗಿರುವ ಉದಯ್ ಹುತ್ತಿನಗದ್ದೆ ಚಿಕ್ಕಮಗಳೂರು ಜಿಲ್ಲೆಯ ಕಳಸ ತಾಲೂಕಿನ ಹುತ್ತಿನಗದ್ದೆಯವರಾಗಿದ್ದರು.

ಛಾಯಾಗ್ರಾಹಕನಾಗಿ ವೃತ್ತಿ ಆರಂಭಿಸಿದ್ದ ಉದಯ್ 1989 ರ ವೇಳೆಗೆ 'ಆರಂಭ' ಹೆಸರಿನ ಸಿನಿಮಾದಲ್ಲಿ ನಟಿಸಿದರು. ಸ್ಪುರಧ್ರೂಪಿ ಆಗಿದ್ದ ಉದಯ್ ಹೊತ್ತಿನಗದ್ದೆ ತಮ್ಮ ಮೊದಲ ಸಿನಿಮಾದಿಂದಲೇ ದೊಡ್ಡ ಮಟ್ಟದಲ್ಲಿ ಮಿಂಚು ಹರಿಸಿದ್ದರು. ಆಗಿನ ಕಾಲಕ್ಕೆ ಭಾರಿ ಪ್ರಚಾರ ನೀಡಲಾಗಿದ್ದ ಸಿನಿಮಾಗಳಲ್ಲಿ ಒಂದಾಗಿತ್ತು 'ಆರಂಭ'. ಬಳಿಕ ಉದಯ್ ಹೊತ್ತಿನಗದ್ದೆ ನಟಿ ಲಲಿತಾಂಬ ಅವರನ್ನು ವಿವಾಹವೂ ಆದರು.

ಸಿನಿಮಾ ವೃತ್ತಿ ಅಷ್ಟಾಗಿ ಕೈ ಹಿಡಿಯದಿದ್ದರೂ ಅವರ ಛಾಯಾಗ್ರಾಹಕ ವೃತ್ತಿ ಅದ್ಭುತವಾಗಿ ಕೈ ಹಿಡಿಯಿತು. ಉದಯ್ ಕಲರ್ ಲ್ಯಾಬ್ ದೊಡ್ಡವನ್ನು ಉದ್ಯಮವಾಗಿ ಉದಯ್ ಬೆಳೆಸಿದರು. ರಾಜ್ಯದ ಹಲವು ನಗರಗಳಲ್ಲಿ ಉದಯ್ ಕಮಲ್ ಲ್ಯಾಬ್ ಪ್ರಾರಂಭಿಸಿದರು.

Actor, Buisinessman Uday Hothinagadde Passed Away

ರಾಜಾಜಿನಗರದ ನವರಂಗ್ ಟಾಕೀಸಿನ ಬಳಿ ಸಣ್ಣದಾಗಿ ತೆರೆದಿದ್ದ ಉದಯ್ ಸ್ಟುಡಿಯೋವನ್ನು ದೊಡ್ಡ ಮಟ್ಟದಲ್ಲಿ ಬೆಳೆಸಿ ನೂರಾರು ಯುವಕರಿಗೆ ಉದ್ಯೋಗ ಕಲ್ಪಿಸಿದ್ದರು ಉದಯ್ ಹೊತ್ತಿನಗದ್ದೆ.

ಮಲೆನಾಡ ಬಗ್ಗೆ ವಿಶೇಷ ಪ್ರೀತಿ, ಅಭಿಮಾನ ಹೊಂದಿದ್ದ ಉದಯ್, ಮಲೆನಾಡಿನ ಹಲವು ಯುವಕರಿಗೆ ಉದ್ಯೋಗ ಕೊಟ್ಟಿದ್ದರು, ಮಾರ್ಗದರ್ಶನ ಮಾಡಿದ್ದರು. ಇವರ ಸೇವೆ ಗುರುತಿಸಿ ಹಲವು ಸಂಘ-ಸಂಸ್ಥೆಗಳು ಗೌರವ, ಸನ್ಮಾನಗಳನ್ನು ಸಹ ಮಾಡಿವೆ.

More from Filmibeat

English summary
Actor, Buisinessman Uday Hothinagadde passed away. He is owner of Uday Color Lab which is working in many cities of Karnataka
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X