For Quick Alerts
  ALLOW NOTIFICATIONS  
  For Daily Alerts

  ನಟ ಬುಲೆಟ್ ಪ್ರಕಾಶ್ ಸ್ಥಿತಿ ಗಂಭೀರ: ಐಸಿಯು ನಲ್ಲಿ ಚಿಕಿತ್ಸೆ

  |

  ಹಾಸ್ಯ ನಟ ಬುಲೆಟ್ ಪ್ರಕಾಶ್ ಅವರು ಆರೋಗ್ಯ ಸ್ಥಿತಿ ಗಂಭೀರವಾಗಿದ್ದು, ವೆಂಟಿಲೇಟರ್‌ ನಲ್ಲಿಟ್ಟು ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ.

  ಬುಲೆಟ್ ಪ್ರಕಾಶ್ ಅವರು ಆರೋಗ್ಯ ಸಮಸ್ಯೆಯಿಂದಾಗಿ ಎರಡು ದಿನಗಳ ಹಿಂದೆ ಫೋರ್ಟಿಸ್ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ ಅವರ ಸ್ಥಿತಿ ಗಂಭೀರವಾಗಿರುವ ಕಾರಣ ಅವರನ್ನು ವೆಂಟಿಲೇಟರ್‌ನಲ್ಲಿಟ್ಟು ಚಿಕಿತ್ಸೆ ನೀಡಲಾಗುತ್ತಿದೆ.

  ನಿಮ್ಮನ್ನ ನೋಡಿದ್ರೆ ನಂಗೆ ಗಡಗಡ ನಡುಗುತ್ತೆ..! | LikithRaj | Duniya Rashmi | Om Sai Prakash

  ಬುಲೆಟ್ ಪ್ರಕಾಶ್ ಅವರು ಕಿಡ್ನಿ ವೈಫಲ್ಯ ಮತ್ತು ಸೋಂಕಿನಿಂದ ಬಳಲುತ್ತಿದ್ದಾರೆ ಎನ್ನಲಾಗಿದ್ದು, ಅವರನ್ನು ತೀವ್ರ ನಿಗಾ ಘಟಕದಲ್ಲಿಟ್ಟು ಚಿಕಿತ್ಸೆ ನೀಡಲಾಗುತ್ತಿದೆ.

  ತೀವ್ರ ನಿಗಾ ಘಟಕದಲ್ಲಿ ಬುಲೆಟ್ ಪ್ರಕಾಶ್

  ತೀವ್ರ ನಿಗಾ ಘಟಕದಲ್ಲಿ ಬುಲೆಟ್ ಪ್ರಕಾಶ್

  ಮೊನ್ನೆಯಷ್ಟೆ ಬುಲೆಟ್ ಪ್ರಕಾಶ್ ಅವರ ಪುತ್ರ, 'ತಂದೆಯವರಿಗೆ ಗ್ಯಾಸ್ಟ್ರಿಕ್ ಸಮಸ್ಯೆ ಆಗಿದೆ ಅಷ್ಟೆ ಯಾವುದೇ ಸಮಸ್ಯೆ ಇಲ್ಲ' ಎಂದಿದ್ದರು. ಆದರೀಗ ತೀವ್ರ ನಿಗಾ ಘಟಕದಲ್ಲಿಟ್ಟು ಚಿಕಿತ್ಸೆ ನೀಡುತ್ತಿರುವುದಾಗಿ ಆಸ್ಪತ್ರೆ ಮೂಲಗಳು ಹೇಳಿವೆ.

  ಹಿಂದೆಯೂ ಆರೋಗ್ಯ ಸಮಸ್ಯೆ ಕಾಡಿತ್ತು

  ಹಿಂದೆಯೂ ಆರೋಗ್ಯ ಸಮಸ್ಯೆ ಕಾಡಿತ್ತು

  ಬುಲೆಟ್ ಪ್ರಕಾಶ್ ಅವರಿಗೆ ಈ ಹಿಂದೆಯೂ ಒಮ್ಮೆ ಆರೋಗ್ಯ ತೀರಾ ಹದಗೆಟ್ಟಿತ್ತು, ಉಳಿಯುವುದೇ ಕಷ್ಟ ಎನ್ನಲಾಗಿತ್ತು, ಆದರೆ ಪವಾಡಸದೃಶ್ಯವಾಗಿ ಪಾರಾಗಿ ಬಂದರು.

  ದೇಹ ತೂಕ ಇಳಿಸಿಕೊಳ್ಳುವ ಸಾಹಸದಿಂದ ಸಮಸ್ಯೆ

  ದೇಹ ತೂಕ ಇಳಿಸಿಕೊಳ್ಳುವ ಸಾಹಸದಿಂದ ಸಮಸ್ಯೆ

  ಬುಲೆಟ್ ಪ್ರಕಾಶ್ ಅವರು ದೇಹತೂಕ ಇಳಿಸಿಕೊಳ್ಳಲು ಹಲವು ಕಸರತ್ತುಗಳು, ಡಯೆಟ್‌ಗಳನ್ನು ಮಾಡಿದ್ದರು. ಆಗಿನಿಂದ ಕೆಲವು ಆರೋಗ್ಯ ಸಮಸ್ಯೆಗಳು ಅವರ ಬೆನ್ನು ಬಿದ್ದವು.

  ಸಾವಿನ ಬಗ್ಗೆ ಮಾತನಾಡಿದ್ದ ಬುಲೆಟ್ ಪ್ರಕಾಶ್

  ಸಾವಿನ ಬಗ್ಗೆ ಮಾತನಾಡಿದ್ದ ಬುಲೆಟ್ ಪ್ರಕಾಶ್

  ಈ ಹಿಂದೆ ಆರೋಗ್ಯ ಹದಗೆಟ್ಟು ಚೇತರಿಸಿಕೊಂಡ ನಂತರ ಮಾತನಾಡಿದ್ದ ಬುಲೆಟ್ ಪ್ರಕಾಶ್, ''ನನಗೆ ನನ್ನ ಸಾವು ಯಾವಾಗ ಆಗುತ್ತದೆ ಎನ್ನುವುದು ತಿಳಿದಿದೆ. ನನ್ನ ಗುರುಗಳು ನನ್ನ ಸಾವಿನ ರಹಸ್ಯವನ್ನು ಹೇಳಿದ್ದಾರೆ'' ಎಂದಿದ್ದರು.

  English summary
  Comedy actor Bullet Prakash is in critical condition. He is suffering from kidney infection. He kept in ICU ward.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X