twitter
    For Quick Alerts
    ALLOW NOTIFICATIONS  
    For Daily Alerts

    ಬುಲೆಟ್ ಪ್ರಕಾಶ್ ಇಂದು ಬದುಕಿದ್ದಾರೆ ಎಂದರೆ ಅದಕ್ಕೆ ಕಾರಣ ಒಬ್ಬ ಹುಡುಗ!

    By Naveen
    |

    ನಟ ಬುಲೆಟ್ ಪ್ರಕಾಶ್ ಜಾಂಡಿಸ್ ಕಾಯಿಲೆಯಿಂದ ತೀವ್ರ ಬಳಲುತ್ತಿದ್ದರು. ಸಾವಿನ ಹತ್ತಿರಕ್ಕೆ ಹೋಗಿದ್ದ ಬುಲೆಟ್ ಪ್ರಕಾಶ್ ದೇವರ ದಯೆಯಿಂದ ಬದುಕಿ ಬಂದಿದ್ದಾರೆ. ಆದರೆ, ದೇವರಿಗಿಂತ ಹೆಚ್ಚಾಗಿ ಬುಲೆಟ್ ಪ್ರಕಾಶ್ ಇಂದು ಜೀವಂತವಾಗಿದ್ದಾರೆ ಎಂದರೆ ಅದಕ್ಕೆ ಕಾರಣ ಒಬ್ಬ ಹುಡುಗ .

    ಆಸ್ಪತ್ರೆಯ ಬೆಡ್ ಮೇಲೆ ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದ ಬುಲೆಟ್ ಪ್ರಕಾಶ್ ಅವರನ್ನು ಕಾಪಾಡಿದ್ದು ಬಿಹಾರದ ಒಬ್ಬ ಹುಡುಗ. ಅದನ್ನು ಅವರೇ ಇತ್ತೀಚಿಗಷ್ಟೆ ನಡೆದ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ.

    ಸಾಯುವ ಸ್ಥಿತಿಯಲ್ಲಿದ್ದ ಬುಲೆಟ್ ಪ್ರಕಾಶ್ ಬದುಕಿ ಬಂದಿದ್ದೆ ಆಶ್ಚರ್ಯ! ಸಾಯುವ ಸ್ಥಿತಿಯಲ್ಲಿದ್ದ ಬುಲೆಟ್ ಪ್ರಕಾಶ್ ಬದುಕಿ ಬಂದಿದ್ದೆ ಆಶ್ಚರ್ಯ!

    ''ನಾನು ಆಸ್ಪತ್ರೆಯಲ್ಲಿ ಇದ್ದಾಗ ನನಗೆ ನಿಜವಾದ ಜೀವನ ತಿಳಿಯಿತು, ಯಾರ ಗುಣ ಹೇಗೆ ಎಂದು ಅರ್ಥ ಮಾಡಿಕೊಂಡೆ'' ಎಂದಿರುವ ಅವರು ತಮ್ಮ ಸೇವೆ ಮಾಡಿದ ಒಬ್ಬ ಹುಡುಗನನ್ನು ನೆನೆದಿದ್ದಾರೆ. ಮುಂದೆ ಓದಿ...

    ನಾನು ಸತ್ತೆ ಎಂದು ಸುದ್ದಿ ಹಬ್ಬಿಸಿದ್ದರು

    ನಾನು ಸತ್ತೆ ಎಂದು ಸುದ್ದಿ ಹಬ್ಬಿಸಿದ್ದರು

    ''ಕೆಲವರು ನಾನು ಆಸ್ಪತ್ರೆಯಲ್ಲಿ ಇದ್ದಾಗ ಸತ್ತೆ ಎಂದು ಸುಳ್ಳು ಸುದ್ದಿ ಹಬ್ಬಿಸಿದರು. ನನಗೆ ಏನೇನೋ ರೋಗ ಇದೆ ಎಂದು ಹೇಳಿಕೊಂಡು ಓಡಾಡುತ್ತಿದ್ದರು. ಅವರಿಗೆ ಅದೇ ಸಂತೋಷ. ನಾನು ಸತ್ತೆ ಅಂದರೆ ಕೆಲವರಿಗೆ ಕೋಟಿ ಕೋಟಿ ಸಿಕ್ಕ ಹಾಗೆ ಆಗುತ್ತದೆ, ಕೆಲವರಿಗೆ ಹಾಲು ಕುಡಿದ ಹಾಗೆ ಆಗುತ್ತದೆ. ಒಬ್ಬರನ್ನು ಕೊಲ್ಲುವುದರಿಂದ ಮಜಾ ಸಿಗುತ್ತದೆ ಎಂದರೆ ಮಾಡಿ. ''

    ನಾನು ಒಬ್ಬ ಹುಡುಗನಿಗೆ ಋಣಿ ಆಗಿರಬೇಕು

    ನಾನು ಒಬ್ಬ ಹುಡುಗನಿಗೆ ಋಣಿ ಆಗಿರಬೇಕು

    ''ನಾನು ಈಗ ಎಲ್ಲರನ್ನು ನೆನಪು ಮಾಡಿಕೊಳ್ಳಬೇಕು. ಆದರೆ ಎಲ್ಲರಿಗಿಂತ ಹೆಚ್ಚಾಗಿ ಒಬ್ಬ ಹುಡುಗನಿಗೆ ನಾನು ಋಣಿ ಆಗಿರಬೇಕು. ದೇವರಿಗಿಂತ ಹೆಚ್ಚಾಗಿ ಸಂತೋಷ್ ಅಂತ ಒಬ್ಬ ಹುಡುಗ ನನ್ನನ್ನು ಕಾಪಾಡಿದ. ಆ ಹುಡುಗ ನಮ್ಮ ಮನೆಯಲ್ಲಿ ಕೆಲಸ ಮಾಡುತ್ತಾನೆ. ಆಸ್ಪತ್ರೆಯಲ್ಲಿ ಇದ್ದಾಗ ದಿನದ 24 ಗಂಟೆ ನನ್ನ ಜೊತೆಗೆ ಆ ಹುಡುಗ ಇದ್ದ.''

    ಸಿಕ್ಕಾಪಟ್ಟೆ ಸಣ್ಣ ಆಗಿರುವ ಬುಲೆಟ್ ಪ್ರಕಾಶ್.! ಏನಿದರ ಗುಟ್ಟು.? ಸಿಕ್ಕಾಪಟ್ಟೆ ಸಣ್ಣ ಆಗಿರುವ ಬುಲೆಟ್ ಪ್ರಕಾಶ್.! ಏನಿದರ ಗುಟ್ಟು.?

    ಅವನು ನನ್ನ ಯಜಮಾನ

    ಅವನು ನನ್ನ ಯಜಮಾನ

    ''ಸಂತೋಷ್ ನನ್ನ ಮನೆಯ ಕೆಲಸದ ಹುಡುಗನಲ್ಲ, ಅವನು ನನ್ನ ಯಜಮಾನ. ನಾನು ಆಸ್ಪತ್ರೆಗೆ ಸೇರಿದಾಗಿನಿಂದ ಹಿಡಿದು ಇವತ್ತಿನ ವರೆಗೆ ನನ್ನ ಎಲ್ಲ ಕೆಲಸ ಮಾಡಿದ್ದಾನೆ. ನನ್ನನ್ನು ಸ್ನಾನಕ್ಕೆ ರೆಡಿ ಮಾಡಿ, ಬಟ್ಟೆ ಹಾಕಿಸುವುದರಿಂದ ಹಿಡಿದು ಎಲ್ಲ ಮಾಡಿದ್ದಾನೆ. ಅವನು ಬಿಹಾರದ ಹುಡುಗ ಮೂರು ವರ್ಷದ ಹಿಂದೆ ನನ್ನ ಬಳಿ ಕೆಲಸಕ್ಕೆ ಸೇರಿಕೊಂಡಿದ್ದ.''

    ನನಗೆ ಎಲ್ಲ ಅವನೇ

    ನನಗೆ ಎಲ್ಲ ಅವನೇ

    ''ನನಗೆ ಎಲ್ಲ ಅವನೇ, ಅವನಿಗೂ ಕೂಡ ಎಲ್ಲ ನಾನೇ. ನಾನು ಅವನಿಗೆ ದುಡ್ಡು ಕೊಡಬಹುದು, ಮನೆ ಕಟ್ಟಿಸಿಕೊಂಡಬಹುದು. ಆದರೆ, ಅದೆಲ್ಲ ಆತನ ಮುಂದೆ ಚಿಕ್ಕದಾಗಿ ಬಿಡುತ್ತದೆ. ಒಬ್ಬ ತಾಯಿ ಮಗನಿಗೆ ಏನೇನೂ ಮಾಡಬಹುದು ಆ ರೀತಿ ನನಗಾಗಿ ಎಲ್ಲ ಮಾಡಿದ್ದಾನೆ. ಬರೀ 15 ಸಾವಿರ ಸಂಬಳಕ್ಕೆ ಕೆಲಸಕ್ಕೆ ಸೇರಿದ್ದ. ದುಡ್ಡು ದೊಡ್ಡದಲ್ಲ, ಅವನ ತ್ಯಾಗ ದೊಡ್ಡದು.''

    'ನಾನಿನ್ನು ಸತ್ತಿಲ್ಲ ಬದುಕಿದ್ದೇನೆ': ಸಾವಿನ ಸುದ್ದಿ ಬಗ್ಗೆ ಬುಲೆಟ್ ಕೆಂಡಾಮಂಡಲ 'ನಾನಿನ್ನು ಸತ್ತಿಲ್ಲ ಬದುಕಿದ್ದೇನೆ': ಸಾವಿನ ಸುದ್ದಿ ಬಗ್ಗೆ ಬುಲೆಟ್ ಕೆಂಡಾಮಂಡಲ

    ನಾನು ಅವನಿಗೆ ಏನು ಮಾಡಿಲ್ಲ

    ನಾನು ಅವನಿಗೆ ಏನು ಮಾಡಿಲ್ಲ

    ''ಏನೇ ಋಣ ಇದ್ದರೂ ಆ ಮಟ್ಟಕ್ಕೆ ನೋಡಿಕೊಳ್ಳಲು ಸಾಧ್ಯ ಇಲ್ಲ. ಎಲ್ಲರಿಗೂ ಯಾವುದೇ ಒಂದು ಕ್ಷಣದಲ್ಲಿಯಾದರೂ ಬೇಸರ ಆಗುತ್ತದೆ. ಆದರೆ ಆ ಹುಡುಗ ಎಂದೂ ಬೇಸರ ಮಾಡಿಕೊಳ್ಳದೆ ನನ್ನ ಕೆಲಸ ಮಾಡಿದ. ಅವನ ಬಗ್ಗೆ ನಮ್ಮ ತಂಡದಲ್ಲಿ ಎಲ್ಲರೂ ಎಷ್ಟೊಂದು ಒಳ್ಳೆಯ ಮಾತನಾಡುತ್ತಾರೆ. ಅವನಿಗೆ ಏನು ಗೊತ್ತಿಲ್ಲ. ಅಣ್ಣ ಚೆನ್ನಾಗಿರ ಬೇಕು ಎನ್ನುತ್ತಾನೆ. ನಾನು ಅವನಿಗೆ ಏನೂ ಮಾಡಿಲ್ಲ.''

    ಜೀವನ ಎಂದು ಬದುಕು ಕಲಿಸಿದೆ

    ಜೀವನ ಎಂದು ಬದುಕು ಕಲಿಸಿದೆ

    ''ನನ್ನ ಪ್ರೀತಿ ಮಾಡುವವರು ತುಂಬ ಜನ ಇದ್ದಾರೆ. ನನ್ನ ಸ್ನೇಹಿತರೆ ಅವನಿಗೆ ಸೈಟ್ ಕೊಡಬೇಕು ಅಂತ ಇದ್ದಾರೆ. ನಾನು ಆಸ್ಪತ್ರೆಗೆ ಹೋದಾಗ ಎಲ್ಲರೂ ಏನು ಎಂದು ಗೊತಾಯ್ತು. ಜೀವನ ಏನು ಎಂದು ಬದುಕು ಕಲಿಸಿದೆ. ಸಾವಿನ ಬಾಗಿಲಿನ್ನು ತಟ್ಟಿ ಬಂದಿದ್ದೇನೆ. ಪ್ರಪಂಚದಲ್ಲಿ ತುಂಬ ಅದೃಷ್ಟ ಮಾಡಿದವನು ನಾನೇ ಇರಬೇಕು. ಹೇಗೋ ಬದುಕಿ ಬಂದೆ. ಎಲ್ಲ ನನ್ನನ್ನು ಕಾಪಾಡಿತು.''

    English summary
    Kannada comedy actor Bullet Prakash suffered from Jaundice and now he gave clarification about his health condition. Bullet Prakash thanked is his personal servant Santhosh.
    Tuesday, July 3, 2018, 14:58
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X