''ನನ್ನನ್ನು ಮುಗಿಸಬೇಕು ಎಂದು ಪ್ಲಾನ್ ಮಾಡಿದ್ದರು'' ಬುಲೆಟ್ ನೋವಿನ ನುಡಿಯ ಅರ್ಥ ಏನು!?

By Naveen

Recommended Video

ಬುಲೆಟ್ ಪ್ರಕಾಶ್‌ರನ್ನು ಮುಗಿಸಲು ಹೊರಟವರಿಗೆ ಏನ್ ಹೇಳಿದ್ದಾರೆ ನೋಡಿ..!! | Filmibeat Kannada

ಕಳೆದ 6 ತಿಂಗಳಿನಿಂದ ನಟ ಬುಲೆಟ್ ಪ್ರಕಾಶ್ ಹೆಚ್ಚು ಸಿನಿಮಾಗಳಲ್ಲಿ ಕಾಣಿಸಿಕೊಳ್ಳುತ್ತಿಲ್ಲ. ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಸಿನಿಮಾದಿಂದ ದೂರ ಆಗಿದ್ದರು. ಆದರೆ ಈಗ ಮತ್ತೆ ಬುಲೆಟ್ ಪ್ರಕಾಶ್ ಬಂದಿದ್ದಾರೆ. 'ಬುಲೆಟ್ ಇಸ್ ಬ್ಯಾಸ್' ಎನ್ನುತ್ತಿದ್ದಾರೆ.

ಜಾಂಡಿಸ್ ನಿಂದ ಬಳಲುತ್ತಿದ್ದ ಬುಲೆಟ್ ಪ್ರಕಾಶ್ ಈಗ ಗುಣಮುಖರಾಗಿದ್ದಾರೆ. ಇತ್ತೀಚಿಗಿನ ಸಂದರ್ಶನದಲ್ಲಿ ತಮ್ಮ ನೋವನ್ನು ಹಂಚಿಕೊಂಡಿದ್ದಾರೆ. ''6 ತಿಂಗಳು ಬುಲೆಟ್ ಪ್ರಕಾಶ್ ಕಾಣಲಿಲ್ಲ ಅಂತ ಇಂಡಸ್ಟ್ರಿಯಲ್ಲಿ ನನ್ನನ್ನು ಏನಾದರೂ ಮಾಡಿ ಮುಗಿಸಬೇಕು ಅಂತ ಪ್ಲಾನ್ ಮಾಡಿದ್ದರು.'' ಎಂದಿರುವ ಬುಲೆಟ್ ತಮ್ಮ ಹಳೆಯ ದಿನಗಳನ್ನು ತಾವು ಪಟ್ಟ ಕಷ್ಟವನ್ನು ಹೇಳಿಕೊಂಡಿದ್ದಾರೆ. ಮುಂದೆ ಓದಿ...

ನನ್ನನ್ನು ಇಂಡಸ್ಟ್ರಿಯಲ್ಲಿ ಮುಗಿಸುವುದಕ್ಕೆ ಪ್ಲಾನ್ ಮಾಡಿದ್ದರು

ನನ್ನನ್ನು ಇಂಡಸ್ಟ್ರಿಯಲ್ಲಿ ಮುಗಿಸುವುದಕ್ಕೆ ಪ್ಲಾನ್ ಮಾಡಿದ್ದರು

''6 ತಿಂಗಳು ಬುಲೆಟ್ ಪ್ರಕಾಶ್ ಕಾಣಲಿಲ್ಲ ಅಂತ ನನ್ನನ್ನು ಮುಗಿಸುವುದಕ್ಕೆ ಹೋಗಿದ್ದರು. ಇಂಡಸ್ಟ್ರಿಯಲ್ಲಿ ನನ್ನನ್ನು ಏನಾದರೂ ಮಾಡಿ ಮುಗಿಸಬೇಕು ಅಂತ ಪ್ಲಾನ್ ಮಾಡಿದ್ದರು. ಆದರೆ ನನ್ನನ್ನು ಮುಗಿಸುವುದಕ್ಕೆ ನೀವು ಯಾರು?. ಇನ್ನು ಮುಂದೆ ಯಾರು ಏನೇ ಹೇಳಿದರು ಅದು ನನಗೆ ಕೇಳಿದರು ಕೇಳದ ಹಾಗೆ ಹೋಗುತ್ತೇನೆ. ಹೊಸ ಅವಕಾಶಗಳಿಗೆ ಕಾಯುತ್ತಿದ್ದೇನೆ. ರಾಜಕಾರಣದಲ್ಲಿ ನನಗೆ ತುಂಬ ಆಸೆ ಇದೆ.''

ನಾನು ಮತ್ತೆ ಬಂದೆ ಬರ್ತಿನಿ

ನಾನು ಮತ್ತೆ ಬಂದೆ ಬರ್ತಿನಿ

''2001 ರಲ್ಲಿ 'ಯುವರಾಜ' ಸಿನಿಮಾದಿಂದ ನಾನು ನಟನೆ ಶುರು ಮಾಡಿದೆ. ಆದರೆ ಈಗ ಆ ಚಿತ್ರದಲ್ಲಿ ಇರುವುದಕ್ಕಿಂತ ಹೆಚ್ಚು ಆಕ್ಟಿವ್ ಆಗಿ ಸಿನಿಮಾ ಮಾಡುತ್ತೇನೆ. ಜನರ ಆಶೀರ್ವಾದ ಇದೆ. ನಾನು ಮತ್ತೆ ಬಂದೆ ಬರ್ತಿನಿ. 6 ತಿಂಗಳು ನಟನೆ ಮಾಡಿಲ್ಲ ಎಂದು ನಾನು ಕಾಣೆಯಾದೆ, ನಾನು ಸತ್ತು ಹೋದೆ ಎಂದು ಸುಳ್ಳು ಸುದ್ದಿ ಹಬ್ಬಿಸಿದರು. ನನ್ನ ಮನೆ ಹಾಳು ಮಾಡಬೇಕು, ನಾನು ನೆಮ್ಮದಿಯಾಗಿ ಇರಬಾರದು ಎಂದು ಏನೇನೋ ಪ್ಲಾನ್ ಮಾಡಿದರು''.

ನನ್ನನ್ನು ಯಾರು ಮುಟ್ಟುವುದಕ್ಕೆ ಆಗುವುದಿಲ್ಲ

ನನ್ನನ್ನು ಯಾರು ಮುಟ್ಟುವುದಕ್ಕೆ ಆಗುವುದಿಲ್ಲ

''ದೇವರು ನನಗೆ ಹೊಸ ಜನ್ಮ ಕೊಟ್ಟಿದ್ದಾನೆ. ನನಗೆ ಅವನು ಒಬ್ಬನೆ ಸಾಕು. ದೇವರು ಎಲ್ಲವನ್ನು ನೋಡಿಕೊಳ್ಳುತ್ತಾನೆ. ನಾನು ಅವನನ್ನು ನಂಬಿದ್ದೇನೆ. ಸರಿಯಾಗಿ ನೋಡಿ ನನ್ನನ್ನು ಇನ್ನು ಮುಂದೆ ಯಾರು ಮುಟ್ಟುವುದಕ್ಕೆ ಆಗುವುದಿಲ್ಲ. ನನಗೆ ದೇವರು ಆಯಸ್ಸು ಕೊಟ್ಟಿದ್ದಾನೆ. ಇನ್ನು ಮುಂದೆ ಹೆಚ್ಚು ಹೆಚ್ಚು ಸಿನಿಮಾ ಮಾಡುತ್ತೇನೆ.''

16 ಆಪರೇಷನ್ ಆಗಿದೆ

16 ಆಪರೇಷನ್ ಆಗಿದೆ

''ನನಗೆ 16 ಆಪರೇಷನ್ ಆಗಿದೆ. 9 ವರ್ಷ ಇರುವಾಗ ಮೊದಲು ಅಪೆಂಡಿಕ್ಸ್ ಆಪರೇಷನ್ ಆಗಿತ್ತು. ಆಮೇಲೆ ಹರ್ನಿಯಾ ಆಪರೇಷನ್ ಆಯ್ತು. ಕೈ, ಕಾಲು ಎಲ್ಲ ಕಡೆ ಆಪರೇಷನ್ ಆಗಿದೆ. ರಾಮಕೃಷ್ಣ ಹೆಗಡೆ ಅವರಿಗೆ ಆಪರೇಷನ್ ಮಾಡಿದ್ದ ಕೃಷ್ಣಮೂರ್ತಿ ಎಂಬ ಡಾಕ್ಟರ್ ನನಗೆ ಆಪರೇಷನ್ ಮಾಡಿದ್ದಾರೆ. ನಾನು ಜೀವನದಲ್ಲಿ ಎಲ್ಲವನ್ನು ನೋಡಿದ್ದೇನೆ.''

ಆಗ ದರಿದ್ರ ಸುತ್ತಿಕೊಂಡಿತ್ತು

ಆಗ ದರಿದ್ರ ಸುತ್ತಿಕೊಂಡಿತ್ತು

''ಚಿಕ್ಕ ವಯಸ್ಸಿನಲ್ಲಿಯೇ ನಾನು ಎಲ್ಲ ರೀತಿಯ ಕಷ್ಟ ಅನುಭವಿಸಿದ್ದೇನೆ. ಅದ್ದರಿಂದ ಈಗ ಬಂದಿರುವ ಕಷ್ಟ ನನಗೆ ಜಾಸ್ತಿ ಎನಿಸುತ್ತಿಲ್ಲ. ಸಣ್ಣ ಗುಡಿಸಿನಲ್ಲಿಯೂ ಮಲಗಿದ್ದೇನೆ. ಯಾರಾದರೂ ಇಡ್ಲಿ ಕೊಡಿಸಲಿ ಎಂದು ಹೊಟ್ಟೆ ಹಸಿವಿನಿಂದ ಕಾದಿದ್ದೇನೆ. ಆಗ ದರಿದ್ರ ಸುತ್ತಿಕೊಂಡಿತ್ತು. ದರಿದ್ರ ಇದ್ದಾಗ ಹಸಿವು ಕೂಡ ಜಾಸ್ತಿ ಇರುತ್ತೆ.

ಚರಂಡಿ ನೀರು ನನ್ನ ಮೇಲೆ ಹರಿದಿದೆ

ಚರಂಡಿ ನೀರು ನನ್ನ ಮೇಲೆ ಹರಿದಿದೆ

''ಪ್ರಾರಂಭದಲ್ಲಿ ಸಿನಿಮಾಗೆ ಬಂದಾಗ ಶೂಟಿಂಗ್ ಇರುವಾಗ ಎಸಿ ರೂಮ್ ಕೊಡುತ್ತಿದ್ದರು. ಆದರೆ ಮನೆಗೆ ಬಂದರೆ ಮತ್ತೆ ಅದೇ ಬಡತನದ ಜೀವನ. 600 ರೂಪಾಯಿ ಕೊಟ್ಟು ಒಂದು ಬಾಡಿಗೆ ಮನೆಯಲ್ಲಿ ಇದ್ದೆ. ತುಂಬ ಸಣ್ಣ ಮನೆ. ಒಮ್ಮೆ ನಾನು ಮಲಗಿದ್ದಾಗ ಚರಂಡಿ ನೀರು ನನ್ನ ಮೇಲೆ ಹರಿದಿದೆ. ಇದೆಲ್ಲವನ್ನು ನಾನು ನೋಡಿದ್ದೇನೆ.''

More from Filmibeat

English summary
Kannada comedy actor Bullet Prakash suffered from Jaundice and he spoke about his struggling days.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X