twitter
    For Quick Alerts
    ALLOW NOTIFICATIONS  
    For Daily Alerts

    ಸಾಯುವ ಸ್ಥಿತಿಯಲ್ಲಿದ್ದ ಬುಲೆಟ್ ಪ್ರಕಾಶ್ ಬದುಕಿ ಬಂದಿದ್ದೆ ಆಶ್ಚರ್ಯ!

    By Naveen
    |

    Recommended Video

    ಸತ್ತು ಬದುಕಿದ ಬುಲೆಟ್ ಪ್ರಕಾಶ್..!! | Bullet Prakash has recovered now..! | Filmibeat Kannada

    ಹಾಸ್ಯ ನಟ ಬುಲೆಟ್ ಪ್ರಕಾಶ್ ಆರೋಗ್ಯ ಸ್ಥಿತಿ ಸರಿ ಇರಲಿಲ್ಲ. ಕೆಲ ತಿಂಗಳು ಗಳ ಹಿಂದೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರು ಈಗ ಗುಣಮುಖರಾಗಿದ್ದಾರೆ. ನಿಜ ಹೇಳಬೇಕು ಅಂದರೆ ಬುಲೆಟ್ ಪ್ರಕಾಶ್ ಸಾವನ್ನು ಗೆದ್ದು ಬಂದಿದ್ದಾರೆ.

    ಬುಲೆಟ್ ಪ್ರಕಾಶ್ ಎಂದ ತಕ್ಷಣ ಅವರ ದೊಡ್ಡ ದೇಹ ನೆನಪಾಗುತ್ತದೆ. ಅದು ಅವರ ಐಡೆಂಟಿಟಿ ಕೂಡ ಆಗಿತ್ತು. ಆದರೆ 150 ಕೆಜಿ ತೂಕ ಇದ್ದ ಬುಲೆಟ್ ಡಯಟ್ ಮಾಡಿ ಸಣ್ಣ ಆಗಲು ಹೊರಟಿದ್ದರು. ಹೀಗಿರುವಾಗಲೇ, ಅವರಿಗೆ ಜಾಂಡಿಸ್ ಕೂಡ ಆವರಿಸಿತ್ತು. ಜಾಂಡಿಸ್ ನಿಂದ ಸಾಯುವ ಸ್ಥಿತಿ ತಲುಪಿ ಬಿಟ್ಟಿದ್ದರು ಬುಲೆಟ್ ಪ್ರಕಾಶ್.

    ಸಿಕ್ಕಾಪಟ್ಟೆ ಸಣ್ಣ ಆಗಿರುವ ಬುಲೆಟ್ ಪ್ರಕಾಶ್.! ಏನಿದರ ಗುಟ್ಟು.? ಸಿಕ್ಕಾಪಟ್ಟೆ ಸಣ್ಣ ಆಗಿರುವ ಬುಲೆಟ್ ಪ್ರಕಾಶ್.! ಏನಿದರ ಗುಟ್ಟು.?

    ಅಂದಹಾಗೆ, ಇತ್ತೀಚಿಗಷ್ಟೆ ನಡೆದ ಸಂದರ್ಶನವೊಂದರಲ್ಲಿ ಬುಲೆಟ್ ಪ್ರಕಾಶ್ ತಮ್ಮ ಕಹಿ ಘಟನೆಗಳ ಬಗ್ಗೆ ಮಾತನಾಡಿದ್ದಾರೆ. ಬುಲೆಟ್ ಪ್ರಕಾಶ್ ಆರೋಗ್ಯಕ್ಕೆ ಏನಾಗಿತ್ತು ಹಾಗೂ ಜಾಂಡಿಸ್ ನಿಂದ ಅವರು ಸಾಯುವ ಸ್ಥಿತಿ ತಲುಪಿದನ್ನು ಹೇಳಿಕೊಂಡಿದ್ದಾರೆ. ಮುಂದೆ ಓದಿ...

    150 ಕೆಜಿ ತೂಕ ಇದ್ದೆ

    150 ಕೆಜಿ ತೂಕ ಇದ್ದೆ

    ''ನಾನು ನನ್ನ ತೂಕವನ್ನು ನೋಡುತ್ತಿರಲಿಲ್ಲ. ಒಮ್ಮೆ ತೂಕ ನೋಡಿದಾಗ 150 ಕೆಜಿ ಇದ್ದೆ. ಆಮೇಲೆ ಎಚ್ಚರಿಕೆ ವಹಿಸಿ ಡಾಕ್ಟರ್ ಬಳಿ ಹೋದೆ. ಅವರು ಒಂದು ಫುಡ್ ಚಾರ್ಟ್ ಕೊಟ್ಟರು. ನನಗೆ ಇದ್ದ ಎಲ್ಲ ಚಟವನ್ನು ಬಿಡು ಎಂದರು. ಹಾಗಿದ್ದರೆ ಮಾತ್ರ ನಾನು ನಿನ್ನನ್ನು ದಾರಿಗೆ ತರುತ್ತೇನೆ ಎಂದರು. ಇಲ್ಲದಿದ್ದರೆ ತುಂಬ ಕಷ್ಟ ಆಗುತ್ತದೆ ಎಂದರು.''

    ಹೆಚ್ಚು ನಡೆಯುವುದಕ್ಕೆ ಆಗುತ್ತಿರಲಿಲ್ಲ

    ಹೆಚ್ಚು ನಡೆಯುವುದಕ್ಕೆ ಆಗುತ್ತಿರಲಿಲ್ಲ

    ''ನನಗೆ ನಾನ್ ವೆಜ್ ಅಂದರೆ ತುಂಬ ಇಷ್ಟ. ಆದರೆ ಡಾಕ್ಟರ್ ಹೇಳಿದ ಮೇಲೆ ಅದನ್ನು ಬಿಟ್ಟೆ. ಬೆಳಗ್ಗೆ, ಮಧ್ಯಾಹ್ನ, ರಾತ್ರಿ ನೀರು ಮತ್ತು ಹಣ್ಣಿನ ಕ್ಲಿಯರ್ ಜ್ಯೂಸ್ ಕುಡಿಯುವುದಕ್ಕೆ ಶುರು ಮಾಡಿದೆ. ಆಮೇಲೆ ತರಕಾರಿ ಮಾತ್ರ ತಿಂದೆ. ಆದಷ್ಟು ವಾಕ್ ಮಾಡಿದೆ. ನನ್ನ ಕೈ ನಲ್ಲಿ ಹೆಚ್ಚು ನಡೆಯುವುದಕ್ಕೆ ಆಗುತ್ತಿರಲಿಲ್ಲ. ಶೂಟಿಂಗ್ ಇದ್ದಾಗ ಆಕ್ಟ್ ಮಾಡುವಾಗ ಮಾತ್ರ ನಿಂತುಕೊಂಡು ಆಮೇಲೆ ಕುಳಿತುಕೊಳ್ಳುತ್ತಿದೆ.''

    ವಿಕ್ರಂ ಆಸ್ಪತ್ರೆಯಲ್ಲಿರುವ ಬುಲೆಟ್ ಪ್ರಕಾಶ್ ಆರೋಗ್ಯ ವಿಚಾರಿಸಿದ ಶಿವಣ್ಣ ವಿಕ್ರಂ ಆಸ್ಪತ್ರೆಯಲ್ಲಿರುವ ಬುಲೆಟ್ ಪ್ರಕಾಶ್ ಆರೋಗ್ಯ ವಿಚಾರಿಸಿದ ಶಿವಣ್ಣ

    ರಕ್ತ ಪರೀಕ್ಷೆ ಮಾಡಿದಾಗ ಜಾಂಡಿಸ್ ಆಗಿತ್ತು

    ರಕ್ತ ಪರೀಕ್ಷೆ ಮಾಡಿದಾಗ ಜಾಂಡಿಸ್ ಆಗಿತ್ತು

    ''ಹೀಗೆ ಇರುವಾಗ ಊಟದಲ್ಲೋ.. ನೀರಿನಲ್ಲಿಯೋ ಏನೋ ಇನ್ಫೆಕ್ಷನ್ ಆಗಿತ್ತು. ಯಾವಾಗಲೂ ತುಂಬ ಸುಸ್ತು ಆಗುತ್ತಿತ್ತು. ಡಾಕ್ಟರ್ ಬಳಿ ಮತ್ತೆ ಹೋದೆ. ಜಾಂಡಿಸ್ ಇದೆ ಅಂದರು. ಮತ್ತೆ ಡಯಟ್ ಶುರು ಮಾಡಿದೆ. ಒಮ್ಮೆ ರಕ್ತ ಪರೀಕ್ಷೆ ಮಾಡಿದಾಗ ಜಾಂಡಿಸ್ ಲೆವೆಲ್ 5.27 ಆಗಿತ್ತು. ಸಾಮಾನ್ಯವಾಗಿ ಜಾಂಡಿಸ್ ಲೆವೆಲ್ 3 ರಿಂದ 4 ಇದ್ದರೇನೇ ಆ ಮನುಷ್ಯ ಸಾಯುತ್ತಾನೆ. ಆದರೆ ನನಗೆ ಅದಕ್ಕಿಂತ ಜಾಸ್ತಿ ಆಗಿ ಬಿಟ್ಟಿತು.''

    ಆಗಲ್ಲ ಎಂದು ಡಾಕ್ಟರ್ ಕೈ ಚೆಲ್ಲಿ ಬಿಟ್ಟರು

    ಆಗಲ್ಲ ಎಂದು ಡಾಕ್ಟರ್ ಕೈ ಚೆಲ್ಲಿ ಬಿಟ್ಟರು

    ''ಆಸ್ಪತ್ರೆಯಲ್ಲಿ ನನ್ನನ್ನು ಪರೀಕ್ಷೆ ಮಾಡುವ ನರ್ಸ್ ಗಳು ನನ್ನ ಸ್ಥಿತಿ ನೋಡಿ ಇದು ವಾಸಿ ಆಗಲ್ಲ, ಇವರ ಕತೆ ಮುಗಿಯಿತು ಎನ್ನುವ ರೀತಿ ನೋಡುತ್ತಿದ್ದರು. ಏನಾಗಿದೆ ಎಂದು ಕೇಳಿದರೆ ಏನು ಇಲ್ಲ ಎನ್ನುತ್ತಿದ್ದರು. ಒಮ್ಮೆ ಡಾಕ್ಟರ್ ಕರೆದು ಜಾಂಡಿಸ್ ಲೆವೆಲ್ 5.27 ಇದೆ ಎಂದರು. ಅವರೆಲ್ಲ ಪ್ರಯತ್ನ ಮೀರಿ ಚಿಕಿತ್ಸೆ ನೀಡಿದರು. ಆಮೇಲೆ ಇದು ಆಗಲ್ಲ ಎಂದು ಕೈ ಚೆಲ್ಲಿ ಬಿಟ್ಟರು.''

    'ನಾನಿನ್ನು ಸತ್ತಿಲ್ಲ ಬದುಕಿದ್ದೇನೆ': ಸಾವಿನ ಸುದ್ದಿ ಬಗ್ಗೆ ಬುಲೆಟ್ ಕೆಂಡಾಮಂಡಲ 'ನಾನಿನ್ನು ಸತ್ತಿಲ್ಲ ಬದುಕಿದ್ದೇನೆ': ಸಾವಿನ ಸುದ್ದಿ ಬಗ್ಗೆ ಬುಲೆಟ್ ಕೆಂಡಾಮಂಡಲ

    ಆಸ್ಪತ್ರೆ ಬಿಟ್ಟು ಹೋಗಲ್ಲ ಎಂದು ಬಿಗಿ ಹಿಡಿದು ಕೂತೆ

    ಆಸ್ಪತ್ರೆ ಬಿಟ್ಟು ಹೋಗಲ್ಲ ಎಂದು ಬಿಗಿ ಹಿಡಿದು ಕೂತೆ

    ''ಡಿಸ್ಚಾರ್ಜ್ ಮಾಡುತ್ತೇವೆ ಮನೆಯಲ್ಲಿಯೇ ಔಷಧಿ ತೆಗೆದುಕೊಳ್ಳಿ ಎಂದು ಅವರು ನನ್ನ ಕೈ ಬಿಟ್ಟರು. ಡಿಸ್ಜಾರ್ಜ್ ಆಗೋಣ ಎಂದು ದುಡ್ಡು ಕಟ್ಟಿದೆ. ಮನೆಗೆ ಹೋಗೋಣ ಅಂತ ನಿರ್ಧಾರ ಮಾಡಿದೆ. ಆದರೆ, ಅದೇನೋ ಶಕ್ತಿ ನನ್ನನ್ನು ತಡೆಯಿತು. ಅದು ನಾನು ಮಾಡಿದ ಪೂಜೆಯೋ, ಜನರ ಆಶೀರ್ವಾದವೋ ಗೊತ್ತಿಲ್ಲ. ನಾನು ಆಸ್ಪತ್ರೆ ಬಿಟ್ಟು ಹೋಗಲ್ಲ. ನನ್ನನ್ನು ನೀವೇ ರೆಡಿ ಮಾಡಿ ಅಂತ ಬಿಗಿ ಹಿಡಿದು ಅಲ್ಲಿಯೇ ಕೂತೆ.''

    ನಿಜಕ್ಕೂ ನಾನು ಬದುಕಿದ್ದು ಆಶ್ಚರ್ಯ

    ನಿಜಕ್ಕೂ ನಾನು ಬದುಕಿದ್ದು ಆಶ್ಚರ್ಯ

    ''ನನ್ನ ಹಠಕ್ಕೆ ಮತ್ತೆ ಆಸ್ಪತ್ರೆಯವರು ಚಿಕಿತ್ಸೆ ಮುಂದುವರೆಸಿದರು. ಆದರೂ ಜಾಂಡಿಸ್ ಲೆವೆಲ್ 5.27 ರಿಂದ ಏರಿ 10ಕ್ಕೆ ಬಂತು. ಕೊನೆಗೆ 19.7 ಆಯ್ತು. ಅದನ್ನು ನೋಡಿ ಡಾಕ್ಟರ್ ಗಳೆ ತಲೆ ಕೆಡಿಸಿಕೊಂಡರು. ಜಾಂಡಿಸ್ ಲೆವೆಲ್ 3 ರಿಂದ 4 ಇದ್ದರೇನೇ ಆ ಮನುಷ್ಯ ಸಾಯುತ್ತಾನೆ. ಹೀಗಿರುವಾಗ, ನನಗೆ ಅದು 19.7 ಗೆ ಬಂದಿತ್ತು. ಹೀಗಿದ್ದರೂ ನಾನು ಬದುಕಿದೆ. ನಿಜಕ್ಕೂ ನಾನು ಬದುಕಿದ್ದು ಆಶ್ಚರ್ಯ.''

    ಇಷ್ಟೆಲ್ಲ ಇದ್ದರೂ ನಾನು ಬದುಕಿದೆ

    ಇಷ್ಟೆಲ್ಲ ಇದ್ದರೂ ನಾನು ಬದುಕಿದೆ

    ''ಸಾವು ನನ್ನ ಕಣ್ಣ ಮುಂದೆ ಆಟ ಆಡುತ್ತಿತ್ತು. ಇಷ್ಟೆಲ್ಲ ಇದ್ದರೂ ನಾನು ಬದುಕಿದೆ. ಅದು ಹೇಗೆ ಅಂತ ನನಗೂ ಗೊತ್ತಿಲ್ಲ. ನಾನು ಬದುಕೇ ಬದುಕುತ್ತೇನೆ ಎಂಬ ನಂಬಿಕೆ ನನಗೆ ಇತ್ತು. ನನ್ನ ಮಕ್ಕಳಿಗೆ ತಂದೆ ಆಗಿ, ನನ್ನ ಹೆಂಡತಿಗೆ ಗಂಡನಾಗಿ ಇರುತ್ತೇನೆ ಎನ್ನುವ ನಂಬಿಕೆ ಇತ್ತು. ದೇವರ ಆಶೀರ್ವಾದ, ಜನರ ಪ್ರೀತಿ ಇಂದ ಸಾವಿನ ಹತ್ತಿರಕ್ಕೆ ಹೋಗಿ ಮತ್ತೆ ಅದರಿಂದ ಹೊರಗೆ ಬಂದಿದ್ದೇನೆ.''

    English summary
    Kannada comedy actor Bullet Prakash suffered from Jaundice and now he gave clarification about his health condition.
    Wednesday, July 4, 2018, 11:31
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X