For Quick Alerts
  ALLOW NOTIFICATIONS  
  For Daily Alerts

  ಬಿರಿಯಾನಿ ವ್ಯಾಪಾರ ಶುರು ಮಾಡಿದ ನಟ ಚಂದನ್; ಸಾಥ್ ನೀಡಿದ ಶಿವಣ್ಣ

  |

  ಸ್ಯಾಂಡಲ್ ವುಡ್ ನಟ ಚಂದನ್ ಕುಮಾರ್ ಸದ್ಯ ನಟನೆ ಜತೆಗೆ ಹೊಸ ವ್ಯಾಪಾರ ಶುರು ಮಾಡಿದ್ದಾರೆ. ಸಿನಿಮಾ, ಧಾರಾವಾಹಿ ಅಂತ ಬ್ಯುಸಿ ಇರುವ ಚಂದನ್ ಇದೀಗ ಬಿರಿಯಾನಿ ವ್ಯಾಪಾರ ಶುರು ಮಾಡಿದ್ದಾರೆ.

  ಹೌದು, ಚಂದನ್ ಬಿರಿಯಾನಿ ಹೋಟೆಲ್ ಪ್ರಾರಂಭ ಮಾಡಿದ್ದಾರೆ. ಬೆಂಗಳೂರಿನ ಸಹಕಾರ ನಗರದಲ್ಲಿ ಬಿರಿಯಾನಿ ಹೋಟೆಲ್ ಪ್ರಾರಂಭ ಮಾಡಿದ್ದು, ಇಂದು ಉದ್ಘಾಟನೆ ಮಾಡಿದ್ದಾರೆ. ಬಿರಿಯಾನಿ ಹೋಟೆಲ್ ಪ್ರಾರಂಭ ಮಾಡಿರುವ ಬಗ್ಗೆ ನಟ ಚಂದನ್ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

  ಡಾರ್ಲಿಂಗ್ ಕೃಷ್ಣ 'Shrikrishnagmail.com'ನಲ್ಲಿ ನಟ ಚಂದನ್ ಕುಮಾರ್ಡಾರ್ಲಿಂಗ್ ಕೃಷ್ಣ 'Shrikrishnagmail.com'ನಲ್ಲಿ ನಟ ಚಂದನ್ ಕುಮಾರ್

  ವಿಶೇಷ ಎಂದರೆ ಚಂದನ್ ಹೊಸ ವ್ಯಾಪಾರಕ್ಕೆ ನಟ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಸಾಥ್ ನೀಡಿದ್ದಾರೆ. ಹೌದು, ಚಂದನ್ ಬಿರಿಯಾನಿ ಹೋಟೆಲ್ ಅನ್ನು ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಉದ್ಘಾಟನೆ ಮಾಡಿ, ಒಳ್ಳೆಯದಾಗಲಿ ಎಂದು ವಿಶ್ ಮಾಡಿದ್ದಾರೆ.

  ಚಂದನ್ ಕುಮಾರ್ ಸದ್ಯ ಧಾರಾವಾಹಿ ಜೊತೆಗೆ ಸಿನಿಮಾಗಳಲ್ಲೂ ನಟಿಸುತ್ತಿದ್ದಾರೆ. ಪ್ರೇಮ ಬರಹ ಸಿನಿಮಾ ಬಳಿಕ ಚಂದನ್ ಡಾರ್ಲಿಂಗ್ ಕೃಷ್ಣ ಅಭಿನಯದ Shrikrishna@gmail.com ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಚಿತ್ರದ ಪ್ರಮುಖ ಪಾತ್ರದಲ್ಲಿ ಚಂದನ್ ಬಣ್ಣ ಹಚ್ಚಿದ್ದಾರೆ. ಚಿತ್ರಕ್ಕೆ ನಾಗಶೇಖರ್ ಆಕ್ಷನ್ ಕಟ್ ಹೇಳಿದ್ದಾರೆ.

  ತೀರ್ಥಹಳ್ಳಿ ಶಾಟ್ಸ್ ತುಂಬಾ ಚೆನ್ನಾಗಿ ಬಂದಿದೆ | Shakeela | Indrajith Lankesh | Filmibeat Kannada

  ಈಗಾಗಲೇ ಚಿತ್ರೀಕರಣ ಮುಗಿಸಿರುವ ಚಂದನ್ ಕುಮಾರ್ ಸಿನಿಮಾ ರಿಲೀಸ್ ದೆ ಎದುರು ನೋಡುತ್ತಿದ್ದಾರೆ. ಮುಂದಿನ ವರ್ಷ ಈ ಸಿನಿಮಾ ತೆರೆಗೆ ಬರುವ ಸಾಧ್ಯತೆ ಇದೆ. ವಿಶೇಷ ಎಂದರೆ ಈ ಸಿನಿಮಾ ಕನ್ನಡದ ಜೊತೆಗೆ ಮಲಯಾಳಂನಲ್ಲೂ ರಿಲೀಸ್ ಆಗುತ್ತಿದೆ. ಚಿತ್ರದಲ್ಲಿ ನಾಯಕಿಯಾಗಿ ಭಾವನಾ ಕಾಣಿಸಿಕೊಂಡಿದ್ದಾರೆ.

  English summary
  Actor Chandan Kumar opened Biriyani hotel in Bangalore, Inaugurated by Shivaraj Kumar.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X